ಧಾರವಾಡ :ಈಗಾಗಲೇ ಹೈಕೋರ್ಟ್ ಪೀಠ ಸ್ಥಾಪನೆಯಾಗಿ ಬಹುವರ್ಷಗಳೇ ಕಳೆದಿವೆ, ಈ ಭಾಗದ ವಕೀಲರು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕವಾಗುವ ಸಂಖ್ಯೆ ನಿರೀಕ್ಷಿತ ಮಟ್ಟ ತಲುಪಬೇಕು, ಇಲ್ಲಿನ ಪ್ರತಿಭಾವಂತ ನ್ಯಾಯವಾದಿಗಳನ್ನು ನ್ಯಾಯಮುರ್ತಿಗಳನ್ನಾಗಿ ನೇಮಿಸಬೇಕು ಎಂದು ಮಧ್ಯ ಪ್ರದೇಶ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರವಿ ಮಳಿಮಠ ಆಶಯ ವ್ಯಕ್ತಪಡಿಸಿದರು.
ಅವರು ಹೈಕೋರ್ಟ್ ಸಭಾಂಗಣದಲ್ಲಿ ಇಲ್ಲಿನ ವಕೀಲರ ಸಂಘ ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ವಕೀಲರ ದಿನಾಚರಣೆ ಮತ್ತು ತಮಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಧಾರವಾಡ ಹೈಕೋರ್ಟ್ ಪೀಠದ ಕ್ಷಿಪ್ರಗತಿಯ ಬೆಳವಣಿಗೆ ನೋಡಿ ಸಂತೋಷವಾಗಿದೆ ಎಂದ ಅವರು ಇದು ಈ ಭಾಗದ ಎಲ್ಲ ವಕೀಲರ ಸಹಕಾರದಿಂದ ನ್ಯಾಯದಾನದಲ್ಲಿ ಮುಂಚೂಣಿಯಲ್ಲಿದೆ ಎಂದರು
ಸಂಘದ ಅಧ್ಯಕ್ಷ ವಿ. ಎಮ್. ಶೀಲವಂತ ಅಧ್ಯಕ್ಷತೆ ವಹಿಸಿದ್ದರು
ಹಿರಿಯ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶಕುಮಾರ್ ಸೇರಿದಂತೆ ಪೀಠದ ಸರ್ವ ನ್ಯಾಯಮೂರ್ತಿಗಳು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಆನಂದ್ ಕೊಳ್ಳಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.ಸಭೆಯ ನಂತರ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು. ಆಡಳಿತ ಮಂಡಳಿ ಸದಸ್ಯೆ ದೀಪಾ ದೊಡ್ಡಟ್ಟಿ ನಿರೂಪಿಸಿದರು ಸದಸ್ಯ ಕೆ. ಎಸ್. ಕೋರಿಶೆಟ್ಟರ್ ಅತಿಥಿ ಪರಿಚಯ, ವಂದನಾರ್ಪಣೆ ಮಾಡಿದರು.