ಧಾರವಾಡ ಜನವರಿ 26: ಜಿಲ್ಲಾಧಿಕಾರಿಗಳ ಕಾರ್ಯಾಲಯದ ನೂತನ ಸಭಾಭವನದಲ್ಲಿ ಇಂದು ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುಣ್ಯಸ್ಮರಣೆಯಲ್ಲಿ ಅಂಬೇಡ್ಕರ್ ಕುರಿತ ಹಾಡಿಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು, ಡೋಲು ಬಾರಿಸಿ ಗಮನ ಸೆಳೆದರು.
ಜನಪದ ಗಾಯಕರೊಬ್ಬರು ಅಂಬೇಡ್ಕರ್ ಕುರಿತು ಹಾಡು ಹೇಳುವಾಗ ಲಾಡ್ ಅವರು ಡೋಲು ಬಾರಿಸಿದರು. ಹಾಡಿನ ಲಯಕ್ಕೆ ಕ್ರಮಬದ್ಧವಾಗಿ ಲಾಡ್ ಅವರು ಡೋಲು ಬಾರಿಸಿದ್ದು ವಿಶೇಷವಾಗಿತ್ತು. ಸಚಿವರ ಡೋಲಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಸೇರಿದಂತೆ ಎಲ್ಲರೂ ಚಪ್ಪಾಳೆಯ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು.