
ಹುಬ್ಬಳ್ಳಿ 26 : ಹುಬ್ಬಳ್ಳಿಯ ಗೂಕುಲ್ ರಸ್ತೆಯ ವಾಸವಿ ಮಹಲ್ ನಲ್ಲಿ ನಡೆಯುತ್ತಿರುವ ಕೆಪಿವಿಎ ನೇತ್ರತ್ವದ ಮತ್ತು ಹುಬ್ಬಳ್ಳಿ ಫೋಟೊ ವುಡಿಯೋ ಗ್ರಾಫರ್ ಸಂಘ ಮತ್ತು ಧಾರವಾಡ ಫೋಟೋ ವಿಡಿಯೋ ಗ್ರಾಫ್ ರ್ ಸಂಘ ಸಹಕಾರದೊಂದಿಗೆ ನಡೆಯುತ್ತಿರುವ ಡಿಜಿ ಫೋಟೋ ಎಕ್ಸ್ಪೋ ವಸ್ತು ಪ್ರದರ್ಶನದಲ್ಲಿ ಧಾರವಾಡದ ಹಿರಿಯ ಛಾಯಾಗ್ರಾಹಕರಾದ ಯಲ್ಲಪ್ಪ ಶಿಂಗ್ರಿ , ನಿಂಗಪ್ಪ ಉಗರಗೋಳ,ಪ್ರಭಾಕರ್ ಕಲ್ಬುರ್ಗಿ , ಅಶೋಕ್ ಬಡಿಗೇರ್, ರವೀಂದ್ರ ಕಾಟಿಗರ್, ಸೇರಿದಂತೆ 15 ವ್ರತ್ತಿ ಭಾಂಧವರನ್ನು ಗುರುತಿಸಿ ಧಾರವಾಡ ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಮತ್ತು ಧಾರವಾಡ ಶಾಸಕರಾದ ಅರವಿಂದ್ ಬೆಲ್ಲದ ಕನಾ೯ಟಕ ಫೋಟೋ ವುಡಿಯೋಗ್ರಾಫ್ ರ ಅಸೋಸಿಎಶನ್ ಉಪಾಧ್ಯಕ್ಷ ಕೃಷ್ಣಪ್ಪ ,ಹುಬ್ಬಳ್ಳಿ ಅಧ್ಯಕ್ಷ ಕಿರಣ ಬಾಕಳೆ ಮತ್ತು ಧಾರವಾಡ ಅಧ್ಯಕ್ಷ ರಾಹುಲ್ ದತ್ತಪ್ರಸಾದ ಉತ್ತರ ಕರ್ನಾಟಕ ಛಾಯಾರತ್ನ ಬಿರುದು ಪತ್ರ ನೀಡಿ ಸನ್ಮಾನಿಸಿದರು. ಬಿರುದು ಪತ್ರ ಸ್ವೀಕರಿಸಿದ ಹಿರಿಯ ಸದಸ್ಯರಿಗೆ ಧಾರವಾಡ ಫೋಟೋ ಮತ್ತು ವಿಡಿಯೋ ಗ್ರಾಫರ್ಸ್ ಸಂಘದ ಸರ್ವ ಸದಸ್ಯರ ವತಿಯಿಂದ ಕಾರ್ಯದರ್ಶಿ ರವಿ ಯಾಲಕ್ಕಿಶೆಟ್ಟರ್ ಅಭಿನಂದಿಸಿದ್ದಾರೆ.