ಧಾರವಾಡ 29 : ಗಣಿತಜ್ಞ ಶ್ರೀನಿವಾಸ ರಾಮಾನುಜನ್ ರವರ ಜನ್ಮದಿನಾಚರಣೆ ಪ್ರಯುಕ್ತ ಹಾಗೂ ಗಣಿತ ಶಿಕ್ಷಕ ದಿ II ಕುಮಾರಸ್ವಾಮಿ ಮಠದ ಸ್ಮರಣಾರ್ಥ ರಾಷ್ಟ್ರೀಯ ಗಣಿತ ದಿನಾಚರಣೆ ಯನ್ನು ಗರಗ ವಲಯ ಮಟ್ಟದ ಮಕ್ಕಳಿಗೆ ಗಣಿತ ಓಲಂಪಿಯಾಡ್ ಪರೀಕ್ಷೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇವಾ ಗ್ರಾಮ ಜೀರಿಗವಾಡದಲ್ಲಿ, ಬಹುಮಾನ ವಿತರಿಸಿ ಮಾತನಾಡಿದ ಅವರು ಇದು ನಿರಂತರವಾಗಿ ಜರುಗಲಿ, ಈ ಗ್ರಾಮ ವಿಶಿಷ್ಟ ಮತ್ತು ಮಾದರಿ ಗ್ರಾಮವಾಗಿದೆ, ತಂಬಾಕು ಮುಕ್ತ ಹಾಗೂ ವ್ಯಸನ ಮುಕ್ತ ಗ್ರಾಮ ಈದಾಗಿದೆ ಎಂದು ಮುಖ್ಯ ಅತಿಥಿಗಳಾಗಿ ಧಾರವಾಡ ಡಯಟ ನಿವೃತ್ತ ಹಿರಿಯ ಉಪನ್ಯಾಸಕರಾದ ಕೆ. ಜಿ ದೇವರಮನಿ ರವರು ಆಗಮಿಸಿ ಗಣಿತ ವಿಷಯ ಕಬ್ಬಿಣದ ಕಡಲೆಯಲ್ಲ.
ಅರ್ಥೈಸಿಕೊಂಡರೆ ತುಂಬಾ ಸರಳವಾದದ್ದು ಈ ವಿಷಯದಲ್ಲಿ ಆಸಕ್ತಿ ಮೂಡಿಸಿಕೊಳ್ಳಬೇಕೆಂದರು. ಧಾರವಾಡ ಬಿ.ಆರ್ .ಸಿ ಬಿ.ಆರ್.ಪಿ ಗಳಾದ ಎಸ್ ವ್ಹಿ ಸಂತಿ ರವರು ದಿ,ಕುಮಾರ ಸ್ವಾಮಿ ರವರು ಅಪ್ರತಿಮ ಗಣಿತ ಶಿಕ್ಷಕರಾಗಿದ್ದರು. ಅವರು ರಚಿಸಿರುವ 120 ಗಣಿತ ಕಲಿಕಾ ವಿಡಿಯೋ ಮಾಲಿಕೆಗಳು ಸರ್ವಕಾಲಿಕ ಉಪಯುಕ್ತವಾಗಿವೆ ಎಂದರು.
ಜನನಿ ಪ್ರತಿಷ್ಠಾನದ ಸಂಚಾಲಕರಾದ ಅಶ್ವಿನ್ ಭೂಸಾರೆ ರವರು ಕುಮಾರಸ್ವಾಮಿ ಮಠದ ರವರ ಹೆಸರಿನಲ್ಲಿ ಒಂದು ಟ್ರಸ್ಟ್ ರಚನೆಯಾಗಿ ಈ ಓಲಂಪಿಯಾಡ ಪರೀಕ್ಷೆಯು ಇನ್ನೂ ಹೆಚ್ಚಿನ ಮಟ್ಟದಲ್ಲಿ ಜರುಗಲಿ ಎಂದರು.
ಧಾರವಾಡ ಆದಿಶಕ್ತಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಪ್ರಾಂಶುಪಾಲರಾದ ಹಣಮಂತ ಕಬ್ಬೇರ ರವರು ಪ್ರಭಾಕರ ದೇಶಪಾಂಡ ರವರ ಪ್ರಯತ್ನದಿಂದ ಈ ಶಾಲೆಯು ಇಷ್ಟೊಂದು ಬೃಹದಾಕಾರವಾಗಿ ಬೆಳೆದಿದೆ ಎಂದು ಹೇಳುತ್ತ ದ್ವಿತೀಯ ಸ್ಥಾನ ಪಡೆದ ವಿಜೇತ ಮಕ್ಕಳಿಗೆ ನಗದು ಬಹುಮಾನ ದೇಣಿಗೆಯಾಗಿ ನೀಡಿದರು ಮತ್ತು ಪ್ರತಿವರ್ಷ ಈ ಪರೀಕ್ಷೆ ನಡೆಯಲಿ ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು . ಪ್ರಥಮ ಸ್ಥಾನ ಪಡೆದ ಮಕ್ಕಳಿಗೆ ನಗದು ಬಹುಮಾನ ಮತ್ತು ಪಾರಿದೋಷಕ ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ಗೀತಾ ಕುಮಾರಸ್ವಾಮಿ ಮಠದ ದೇಣಿಗೆಯಾಗಿ ಒದಗಿಸಿದರು .
ತೃತೀಯ ಬಹುಮಾನ ನಗದು ಬಹುಮಾನವನ್ನು ದೇಣಿಗೆ ರೂಪದಲ್ಲಿ ಶಿಕ್ಷಕರಾದ ಬಿ.ಬಿ ಮಂಗಳಗಟ್ಟಿ ರವರು ನೀಡಿದರು . ದಾನಿಗಳಾದ ತೇಗೂರ ಪ್ರಾಥಮಿಕ ಶಾಲೆಯ ಮಾಜಿ ಎಸ್.ಡಿ ಎಂ ಸಿ ಅಧ್ಯಕ್ಷರಾದ ವೀರಭದ್ರಯ್ಯಾ ಮಠದ ರವರು ವಿಜೇತ ಮಕ್ಕಳಿಗೆ ಶುಭ ಹಾರೈಸಿದರು .ಶಿಕ್ಷಕ ಗಣೇಶ ಕುಂದಣಗಾರ ಪ್ರಾಸ್ತವಿಕವಾಗಿ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಹಾಗೂ ಗಣಿತ ಶಿಕ್ಷಕ ಕುಮಾರಸ್ವಾಮಿ ಮಠದ ರವರ ಸಾಧನೆಗಳನ್ನು ಹೇಳಿದರು ಲೂಸಿ ಸಾಲ್ಡಾನಾ ಸಂಸ್ಥೆಯ ರಾಜ್ಯ ಸಂಚಾಲಕರಾದ ಎಲ್ ಆಯ್ ಲಕ್ಕಮ್ಮನವರ ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ ಎಂದರು.
ಈ ಪರೀಕ್ಷೆಯನ್ನು ತುಂಬಾ ಯೋಜನಾಬದ್ದವಾಗಿ ಶಿಕ್ಷಕರಾದ ಬಸವರಾಜ ಕರೂರ ರವರು ಹಾಗೂ ಲಿಂಗರಾಜ ಬೆಟಗೇರಿ ರವರು ನಿರ್ವಹಿಸಿದರು. ಕಾರ್ಯಕ್ರಮ ಆಯೋಜನೆಯನ್ನು ತುಂಬಾ ಚೆನ್ನಾಗಿ ಸೇವಾಗ್ರಾಮ ಜೀರಿಗಿವಾಡ ಶಾಲೆಯ ಗ್ರಾಮ ಪಂಚಾಯತ್ ಸದಸ್ಯರು ಎಸ್ಡಿಎಮ್ ಸಿ , ಶಿಕ್ಷಕವೃಂದ ಗ್ರಾಮದ ನಾಗರಿಕರು ತುಂಬಾ ಚೆನ್ನಾಗಿ ಆಯೋಜಿಸಿ ಯಶಸ್ವಿಗೊಳಿಸಿದರು .
ಮಾರ್ಗದರ್ಶನ ನೀಡಿದ ಇಲಾಖೆಯ ಅಧಿಕಾರಿ ವರ್ಗದವರಿಗೆ ಹಾಗೂ ಸಹಕರಿಸಿದ ತೇಗೂರ , ತಡಕೋಡ , ಗರಗ ಹಾಗೂ ಮುಮ್ಮಿಗಟ್ಟಿ ಕ್ಲಸ್ಟರ್ ಗಳ ಮಕ್ಕಳು ಪರೀಕ್ಷೆ ಬರೆದರು.ತಡಕೋಡ ಸಿ.ಆರ್ ಪಿ ಆರ್ ಎಂ ಕುರ್ಲಿ ಸ್ವಾಗತಿಸಿದರು , ಚಂದ್ರಕಲಾ ಗಾಮದ ನಿರೂಪಿಸಿದರು .ಗರಗ ಸಿ.ಆರ್.ಪಿ ಮೈಲಾರ ಹಡಪದರವರು ವಂದಿಸಿದರು.