ನಮ್ಮ ಕಡೆ ಬಾರೋ ಮೇಯರ್ ರಾಮಣ್ಣ
ನನ್ನ ಕಡೆ ಬಾರೋ ಮೇಯರ್ ರಾಮಣ್ಣ

ಧಾರವಾಡ : ಧಾರವಾಡ ನಗರದ ಕೋಳಿಕೆರಿಯಲ್ಲಿರುವ ೭ ಮತ್ತು ೮ ನೇ ವಾರ್ಡನ ಎಲ್ ಆಂಡ್ ಟಿ ಕಂಪನಿ ಹಾಕಿರುವ ವಾಲ್ ಉದ್ಘಾಟನಾ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಚಾಲನೆಯನ್ನು ನೀಡಬೇಕಾಗಿತ್ತು. ಆದರೆ ಎಲ್ ಆಂಡ್ ಟಿ ಕಂಪನಿಯವರು ಮಾಡಿರುವ ಎಡವಟ್ಟಿನಿಂದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಉದ್ಘಾಟಕರಾಗಿ ಬಂದ ಹುಬ್ಬಳ್ಳಿ-ಧಾರವಾಡದ ಮೇಯರ್ ರಾಮಣ್ಣರವರಿಗೆ ನೀವು ಮೊದಲು ನಮ್ಮ ಕಡೆ ಬಂದು ಚಾಲನೆ ನೀಡಿ ಬಿಜೆಪಿಯವರು ಇನ್ನೊಂದು ಕಡೆ ನೀವು ನಮ್ಮ ಕಡೆ ಬಂದು ಚಾಲನೆ ನೀಡಿ ಎಂದು ಕಾಂಗ್ರೆಸ್‌ನವರು.

ಹೀಗಾಗಿ ಮೇಯರ್ ರಾಮಣ್ಣ ರವರಿಗೆ ಕೆಲವು ಹೊತ್ತು ಗೊದ್ದಲದ ವಾತಾವರಣವೇ ಸೃಷ್ಟಿಯಾಯಿತು. ಎಲ್ ಆಂಡ್ ಟಿ ಕಂಪನಿಯವರು ಮಾಡಿರುವ ವಾಲ್‌ಗಳ ಎಡವಟ್ಟಿನಿಂದಾಗಿ ಬಿಜೆಪಿಯ ಮಹಾನಗರಪಾಲಿಕೆಯ ಸದಸ್ಯ ಶಂಕರ ಶೆಳಕೆ ಮತ್ತು ಕಾಂಗ್ರೆಸ್ ನಿಂದ ಶಾಸಕ ವಿನಯ ಕುಲಕರ್ಣಿರವರ ಪರವಾಗಿ ಅರವಿಂದ ಏಗನಗೌಡ್ರ ಈವರ ಇಬ್ಬರ ನಡುವೆ ಮಾತಿನ ಚಕಾಮಕಿ ನಡೆಯಿತು.

https://youtu.be/mA03_Fu3V8o?si=tAmC6nECK2K1-dvc 

೭ ಮತ್ತು ೮ ನೇ ವಾರ್ಡನ ಎಲ್ ಆಂಡ್ ಟಿ ಕಂಪನಿ ಹಾಕಿರುವ ೨೪-೭ ನೀರು ಪೂರೈಕೆಯ ವಾಲ್‌ನ್ನು ಪ್ರಾಯೋಗಿಕವಾಗಿ ಮೇಯರ್ ರಾಮಣ್ಣರವರು ಮತ್ತು ಶಿವಲೀಲಾ ಕುಲಕರ್ಣಿ ವಾಲ್‌ಗೆ ಪೂಜೆಯನ್ನು ಮಾಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯೆ ದೀಪಾ ನೀರಲಕಟ್ಟಿ,ಶಂಭು ಸಾಲಿಮನಿ, ಪ್ರಕಾಶ ಘಾಟಗೆ, ಮಾಜಿ ಪಾಲಿಕೆ ಸದಸ್ಯ ಆನಂದ ಸಿಂಗ್, ಬಸವರಾಜ ಜಾಧವಯ ಎಲ್ ಆಂಡ್ ಟಿ ಕಂಪನಿ ಸಿಬ್ಬಂದಿಗಳು ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಇನ್ನಿತರರು ಇದ್ದರು.