ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ – ಎನ್ ಶಶಿಕುಮಾರ

ಧಾರವಾಡ 12  : ಉತ್ತಮ ಸಂಸ್ಕಾರ ಕೃತಜ್ಞತಾ ಭಾವವನ್ನು ಬೆಳಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿರಿ ವ್ಯಕ್ತಿ ಆಗಿರಿ ಎಂದು ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮೀಷನರ್ ಎನ್. ಶಶಿಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅವರು ಕರ್ನಾಟಕ ವಿಶ್ವವಿದ್ಯಾಲಯ ಎನ್‌.ಎಸ್.ಎಸ್.ಕೋಶವು ಕವಿವಿ ಗಾಂಧಿ ಭವನದಲ್ಲಿ ಆಯೋಜಿಸಿದ ಏಳು ದಿನಗಳ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ನಾಯಕತ್ವದ ತರಬೇತಿ ಶಿಬಿರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಸಮಯವನ್ನು ಗೌರವಿಸಿ ನಿರ್ದಿಷ್ಟ ಉದ್ದೇಶ ಇಟ್ಟುಕೊಂಡು ಓದಿರಿ ಸ್ವಂತಿಕೆ ಬೆಳೆಸಿಕೊಳ್ಳಿ, ಭವಿಷ್ಯದಲ್ಲಿ ಏನಾಗಬೇಕು ಎಂಬುದನ್ನು ನಿರ್ಧರಿಸಿ, ಕಠಿಣ ಪರಿಶ್ರಮದಿಂದ ಸಾಧನೆ ಮಾಡಲು‌ ಸಾಧ್ಯ. ನಿಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಿ, ಸಂವಹನದ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.ಪ್ರಸ್ತುತ ಸನ್ನಿವೇಶದಲ್ಲಿ ಪಭಾವ ಬೀರುವ ವ್ಯಕ್ತಿತ್ವವನ್ನು ಬೆಳಸಿಕೊಳ್ಳಿ ಎಂದ ಅವರು ಹೊಸದನ್ನು ಕಲಿಯಲು ಪ್ರಯತ್ನಿಸಿ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಹಿರಿಯರಿಗೆ ಕೃತಜ್ಞತೆ ಭಾವ ಹೊಂದಿರಬೇಕು ಎಂದ ಅವರು ಪ್ರಸ್ತುತ ವಿದ್ಯಮಾನಗಳ ಕುರಿತು ತಿಳಿದುಕೊಂಡು ವೈಚಾರಿಕ ಪ್ರಜ್ಣೆ ಬೆಳಿಸಿಕೊಳ್ಳಿ ಎಂದರು.

ವಿದ್ಯಾರ್ಥಿಗಳು ಆಸಕ್ತಿಯಿಂದ ಸ್ಪರ್ಧಾತ್ಮಕ ಪರಿಕ್ಷೆ ಬರೆಯಲು ಪ್ರಯತ್ನಿಸಿ. ಸ್ಪರ್ಧಾತ್ಮಕ ಎದುರಿಸಲು ನಿರಂತರವಾದ ಯೋಜನೆ ರೂಪಿಸಿಕೊಂಡು ಮುಂದೆ ಸಾಗಲು ಪ್ರಯತ್ನಿಸಬೇಕು. ಸಾಧನೆ ಮಾಡುವಾಗ ಅಡೆತಡೆಗಳನ್ನು ಹೆಚ್ಚು ಅವುಗಳನ್ನೇಲ್ಲಾ ಮೀರಿ ಮಾನಸಿಕವಾಗಿ ಸಿದ್ದಗೊಳ್ಳಬೇಕು. ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ವಿವಿಧ ವಿಷಯಗಳ ಕುರಿತು ಜ್ಞಾನವನ್ನು ವೃದ್ಧಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು. ಸ್ವಯಂ ಶಿಸ್ತು, ಉತ್ತಮ ವಾಕಚಾತುರ್ಯ, ದೇಹ ಭಾಷೆಯನ್ನು ಬೆಳಸಿಕೊಂಡು ಮಾದರಿ ವ್ಯಕ್ತಿಯಾಗಿ ಎಂದು ಸಲಹೆ ನೀಡಿದರು. ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮವನ್ನು ಅವಶ್ಯಕತೆ ಅನುಗುಣವಾಗಿ ಬಳಸಿ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಎಂ.ಜಿ.ಖಾನ್ ಮಾತನಾಡಿ ವಿದ್ಯಾರ್ಥಿಗಳ ಪ್ರಜಾಪ್ರಭುತ್ವ ಮತ್ತು ಕಾನೂನು ತಿಳಿದುಕೊಳ್ಳವದು ಅಗತ್ಯವಾಗಿದೆ ಎಂದ ಅವರು ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹಳ ಇದೆ. ಪ್ರತಿಯೊಬ್ಬರ ಈ ದೇಶದ ಕಾನೂನಕ್ಕೆ ಗೌರವ ನೀಡಬೇಕು ಎಂದರು.

ವಿದ್ಯಾರ್ಥಿಗಳ ಜೊತೆಗೆ ಸಂವಾದ ಇದೇ ಸಂದರ್ಭದಲ್ಲಿ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಅವರು ವಿದ್ಯಾರ್ಥಿಗಳ ಜೊತೆಗೆ ಸ್ಪರ್ಧಾತ್ಮಕ ವಿಷಯ, ಕಾನೂನು ಸುವ್ಯವಸ್ಥೆ, ರಸ್ತೆ ಸುರಕ್ಷತೆ, ಮಾನವೀಯ ಮೌಲ್ಯಗಳ, ಓದುವ ರೀತಿ, ಸಾಮಾಜಿಕ ವ್ಯವಸ್ಥೆಯ ವಿದ್ಯಮಾನಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎ.ಚೆನ್ನಪ್ಪ, ಕವಿವಿ ಎನ್.ಎಸ್.ಕೋಶದ ಸಂಯೋಜಕ ಡಾ.ಎಂ.ಬಿ.ದಳಪತಿ, ಪ್ರೊ.ಎಂ.ಜಿ.ಖಾನ್, ಡಾ.ಬಿ.ಎಂ.ರತ್ನಾಕರ್, ಡಾ. ಎಂ. ಯರಿಸ್ವಾಮಿ ‌‌‌‌ ಡಾ. ಎಸ್‌.ಎ.ಕೋಳೂರ, ಡಾ.ಎಸ್.ಎಸ್.ದೊಡಮನಿ, ಸೇರಿದಂತೆ ವಿವಿಧ ಕಾಲೇಜಿನ ಎನ್.ಎಸ್‌.ಎಸ್ ಅಧಿಕಾರಿಗಳು ಸ್ವಯಂ ಸೇವಕರು ಇದ್ದರು.