ಕಾಂಗ್ರೆಸ್ಸಿಗರ ಗೂಂಡಾ ವರ್ತನೆ ಅತಿರೇಕಕ್ಕೇರಿದೆ, ಪ್ರಜಾ ಪ್ರಭುತ್ವದ ದೇಗುಲವಾದ ಸುವರ್ಣ ಸೌಧದ ಕಾರಿಡಾರ್ ನಲ್ಲಿ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಅವರಮೇಲೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕರು ಮಾರಣಾಂತಿಕ ಹಲ್ಲೆ ನಡೆಸಲು ಮುಂದಾಗಿದ್ದು ಅಕ್ಷಮ್ಯ ಅಪರಾಧ ವಿಧಾನಸೌಧದಲ್ಲಿ,ಸದನದ ಹೊರಗೆ ಏಕಾಏಕಿ ಗುಂಡಾಗಿರಿ ಮಾಡಿದ್ದರ ಬಗ್ಗೆ ಮಾನ್ಯ ಸಭಾಪತಿಗಳು ತನಿಖೆ ನಡೆಸಿ ಕ್ರಮ ಗೊಳ್ಳಬೇಕೆಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.
ಶಾಸಕರಾದ ಸಿ ಟಿ ರವಿ ಅವರನ್ನು ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆ ನಡಿಸಿಕೊಂಡ ರೀತಿ ಗೂಂಡಾ ರಾಜ್ಯದಂತೆ ಭಾಸವಾಗುತ್ತಿದೆ ಪೊಲೀಸ್ ಕಸ್ಟಡಿಯಲ್ಲಿ ತಲೆಗೆ ಆದ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು ಮೂರು ಗಂಟೆ ತೆಗೆದುಕೊಂಡ ಪೊಲೀಸರು ರಾತ್ರಿ ಇಡೀ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಸುತ್ತಾಡಿಸಿದ್ದಾರೆ. ಒಬ್ಬ ಶಾಸಕರನ್ನು ನಡೆಸಿಕೊಂಡ ರೀತಿ ತೀರಾ ಬಾಲಿಶವಾದದ್ದು. ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವದು ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಇದು ತೋರಿಸುತ್ತದೆ.
ನಿನ್ನೆ ನಡೆದ ಘಟನೆಯು ತುರ್ತು ಪರಿಸ್ಥಿತಿ ಕರ್ನಾಟಕದಲ್ಲಿ ಇರುವಂತೆ ಭಾಸವಾಗುತ್ತಿದೆ.
ಈ ಸರಕಾರದ ಸಂವಿಧಾನ ವಿರೋಧಿ ನಡೆಗಳು ಅತಿರೇಕಕ್ಕೆ ಏರಿದ್ದು ರಾಜ್ಯದ ಜನರು ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದನ್ನು ನೆನಪಿಡಲಿ ಎಂದು ಹೇಳಿದರು.