ಸದ್ಗುರು ಸಿದ್ದಪ್ಪಜ್ಜ ನ 165 ನೆಯ ಜಯಂತೋತ್ಸವ ಹಾಗೂ ತೋಟ್ಟಿಲೋತ್ಸವ ಕಾರ್ಯಕ್ರಮ

ಹುಬ್ಬಳ್ಳಿ ಡಿ ೨೧ : ಸಿದ್ದಪ್ಪ ಅಜ್ಜ ನಿತ್ಯ ಸತ್ಯ, ಪವಾಡ ಪುರುಷ ಉಣಕಲ್ ಸಿದ್ದಪ್ಪಜ್ಜ ಇಂದಿಗೂ ಅಸಂಖ್ಯಾತ ಭಕ್ತ ಸಮೂಹದ ಮನದಂಗಳದಲ್ಲಿ ನಿತ್ಯ ಸತ್ಯವಾಗಿದ್ದಾರೆಂದು ಸುಳ್ಳದ ಪಂಚಗ್ರಹ ಹಿರೇಮಠದ ಸಿದ್ದರಾಮೇಶ್ವರ ಸ್ವಾಮಿಗಳು ಹೇಳಿದರು.
ಉಣಕಲ್ ಹೊಸಮಠದಲ್ಲಿ ಶುಕ್ರವಾರ ಬೆಳಿಗ್ಗೆ ಜರುಗಿದ ಸದ್ಗುರು ಸಿದ್ದಪ್ಪಜ್ಜ ನ 165 ನೆಯ ಜಯಂತೋತ್ಸವ ಹಾಗೂ ತೋಟ್ಟಿಲೋತ್ಸವ ಕಾರ್ಯಕ್ರಮ ಸಾನಿದ್ಯವಹಿಸಿ ನೂತನ ವರ್ಷದ ಸಿದ್ದಪ್ಪಜ್ಜ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಭಕ್ತರ ಸಂಕಷ್ಟಗಳಿಗೆ ಸ್ಪಂದಿಸುವ ಅಜ್ಜ ಸಮಸ್ತ ಮನುಕುಲ ಆರಾಧ್ಯ ದೈವ ಎಂದು ಹೇಳಿ ಸಿದ್ದಪ್ಪಜ್ಜ ಅವರ ಬ್ರಹತ್ ಶಿಲಾ ಮಂಟಪ‌ ದೇಗುಲ ನಿರ್ಮಾಣ ಕಾರ್ಯ ಪ್ರಗತಿ ಕಾರ್ಯ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ಪಾಲಿಕೆಯ ಸದಸ್ಯ ರಾಜಣ್ಣ ಕೊರವಿ ಪ್ರಸ್ತಾವಿಕ ಮಾತನಾಡಿ ಸುಮಾರು ಮೂರು ಕೋಟಿ ರೂ.ವೆಚ್ಚದಲ್ಲಿ ನೂತನ ಶಿಲಾ ದೇಗುಲ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡೆದಿದ್ದು ಭಕ್ತ ಸಮೂಹದ ಕೊಡುಗೆ ಅಪಾರ ಎಂದು ಹೇಳಿದರು.
ಹಿರಿಯ ಚಿಂತಕ ಕಾನಧೇನು ಸಿದ್ದನಗೌಡರು ಮಹಾತ್ಮ ಸದ್ಗುರು ಸಿದ್ದಪ್ಪಜ್ಜ ಪವಾಡ ಮಹಿಮೆ ವಿವರಿಸಿ, ಗೋವನಕೊಪ್ಪ ಮಠದ ಜಾತ್ರಾಮಹೋತ್ಸವ ದಿನ ಬದಲಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಆಡಳಿತ ಮಂಡಳಿಯ ಸದಸ್ಯರಾದ ‌ರಾಮಣ್ಣ ಪದ್ಮಣ್ಣವರ,ಶಿವಾಜಿ ಕನ್ನಿಕೊಪ್ಪ, ಗುರುಸಿದ್ದಪ್ಪ ಮೆಣಸಿನಕಾಯಿ, ಗುರುಸಿದ್ದಪ್ಪ ಬೆಂಗೇರಿ ಮುಂತಾದವರಿದ್ದರು. ಬಸವಣ್ಣವ್ವ ಅವರು ಪ್ರಾರ್ಥನೆ ಹಾಡಿದರು. ಹುಲಿಗೆಮ್ಮ ಟೀಚರ್ ನಿರೂಪಿಸಿದರು.
ನಂತರ ಸಮಸ್ತ ಮಹಿಳೆಯರು ತೊಟ್ಟಿಲೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಆಗಮಿಸಿದ ಭಕ್ತರಿಗೆಲ್ಲ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Related Posts

ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಗೆ ಬಂದು ಏಕಾಗ್ರತೆಯಿಂದ ಓದಬೇಕು ಡಾ.ಆನಂದ ಪಾಂಡುರಂಗಿ

ಧಾರವಾಡ : ವ್ಯಕ್ತಿತ್ವ ವಿಕಸನಕ್ಕೆ ಬೇಕಾಗಿರುವ ಎಲ್ಲಾ ಚಟುವಟಿಕೆಗಳನ್ನು ಒದಗಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಕಲಿಕೆ ನಿರಂತರವಾದ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಗುರಿಬೇಕು ಕಾರ್ಯ ಯೋಜನೆ ಮಾಡಿಕೊಳ್ಳಬೇಕು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸವನ್ನು ಆನಂದಿಸು, ಪರೀಕ್ಷೆಯನ್ನು ಆನಂದಿಸಿ ಬರುವ ಹೆಚ್ಚು ಕಮ್ಮಿ ಅಂಕಗಳು ಬಂದರು…

ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ವ್ಯವಸ್ಥಿತವಾಗಿ ನಡೆಸಿ ಯಶಸ್ವಿಗೊಳಿಸಿ – ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಕರೆ

ಧಾರವಾಡ ೦೫ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಧಾರವಾಡದ ವತಿಯಿಂದ ಇದೇ ದಿ.6 ರಿಂದ 10 ರವರೆಗೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರದ ಸಸ್ಯಚೇತನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ…

RSS
Follow by Email
Telegram
WhatsApp
URL has been copied successfully!