ಕಿತ್ತೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ – ಶಾಸಕ ವಿನಯ ಕುಲಕರ್ಣಿ ಪೂರ್ವಭಾವಿ ಸಭೆ

ಕಿತ್ತೂರು : ಬೆಳಗಾವಿಯಲ್ಲಿ 21 ರಂದು ನಡೆಯಲಿರುವ ಜೈಬಾಪು , ಜೈಭೀಮ, ಜೈ ಸಂವಿಧಾನ ಘೋಷಣೆಯಡಿ ಗಾಂಧಿ ಭಾರತ ಕಾರ್ಯಕ್ರಮದ ಯಶಸ್ವಿಯಾಗಲು, ಇಂದು ಪೂರ್ವಭಾವಿ ಸಭೆಯನ್ನು ಕಿತ್ತೂರಿನ ನಿರೀಕ್ಷಣ ಮಂದಿರದಲ್ಲಿ (ಐ ಬಿ)ಧಾರವಾಡ 71 ರ ಶಾಸಕರಾದ ವಿನಯ ಕುಲಕರ್ಣಿ ಯವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯನ್ನು ಉದ್ದೇಸಿಸಿ ಮಾತನಾಡಿದ ಶಾಸಕರು, ಮಹಾತ್ಮಾ ಗಾಂಧೀಜಿಯವರು 1924 ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಥಮ ಕಾಂಗ್ರೆಸ್ ಅಧಿವೇಶನವನ್ನು ನಮ್ಮ ಗಂಡುಮೆಟ್ಟಿನ ಬೆಳಗಾವಿಯಲ್ಲಿ ನಡೆಸಿ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸುವದು ನಮ್ಮ ನಿಮ್ಮೆಲ್ಲರ ಪುಣ್ಯ ಎಂದರು.

KPCC Working President - MLA Vinaya Kulkarni pre-meeting in Kittur
ನಮ್ಮ ಗಡಿಭಾಗದಲ್ಲಿರುವದರಿಂದ ನಮ್ಮ ಜವಾಬ್ದಾರಿ ಹೆಚ್ಚಿರುವದರಿಂದ,ತಾವಲ್ಲರೂ ಮುತವರ್ಜಿ ವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಹಾಗೂ ಸಾರ್ವಜನಿಕರು ಭಾಗವಯಿಸುವಂತೆ ಪ್ರಯತ್ನಿಸಬೇಕು, ಎಲ್ಲಾ ರಾಷ್ಟ್ರೀಯ ನಾಯಕರು ಆ ಕಾರ್ಯಕ್ರಮಲ್ಲಿ ಭಾಗವಹಿಸುವರು, ಇದೊಂದು ಐತಿಹಾಸಿಕ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗವಹಿಸಿ ಯಶಸ್ವೀಗೊಳಿಸೋಣ ಎಂದರು.

ಈ ಸಂಧರ್ಭದಲ್ಲಿ ಶಿವಲೀಲಾ ಕುಲಕರ್ಣಿ, ಹಾಗೂ ವೈಶಾಲಿ ಕುಲಕರ್ಣಿ ಭಾಗವಹಿಸಿದ್ದರು. ಅರವಿಂದ ಏಗನಗೌಡರ ಪ್ರಸ್ತಾವಿಕ ಮಾತನಾಡಿದರು.

ಈ ಸಂಧರ್ಭದಲ್ಲಿ ಈಶ್ವರ ಶಿವಳ್ಳಿ,ಚನಬಸಪ್ಪ ಮಟ್ಟಿ, ಪಾರಿಸ್ ಪತ್ರಾವಳಿ,ಮಂಜು ಮಸೂತಿ,ಮೈನುದ್ದೆನ ಚೌದರಿ, ಶಿವು ಮೆಣಸಿನಕಾಯಿ,ದೀಪಾ ನೀರಳಕಟ್ಟಿ, ಪರಮೇಶ್ವರ್ ಕಟ್ಟಿಮನಿ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಗ್ರಾಮಪಂಚಾಯತಿ ಸದಸ್ಯರು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು, ತಾಲೂಕ ಪಂಚಾಯತಿ ಸದಸ್ಯರು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

  • Related Posts

    ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ

    ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…

    ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ

    ಧಾರವಾಡ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ ಶಾಖೆಯ 2024 2025 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಂಗಳವಾರ, ದಿ 04 ರಂದು ಮುಂಜಾನೆ 10:30 ಗಂಟೆಗೆ ಕನ್ನಡ ಕುಲಪುರೋಹಿತ ಆಲೂರು ವಂಕಟರಾವ ಸಾಂಸ್ಕೃತಿಕ ಭವನದಲ್ಲಿ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ…

    RSS
    Follow by Email
    Telegram
    WhatsApp
    URL has been copied successfully!