
ಗದಗ ಜಿಲ್ಲೆ- ಯುವ ಘಟಕ ಗದಗ ನಗರದ ಪಂಚಮಸಾಲಿ ಸಮುದಾಯ ಭವನದಲ್ಲಿ ಗದಗ ತಾಲೂಕು ಗ್ರಾಮೀಣ ಘಟಕ -ಯುವ ಘಟಕ ಅಧ್ಯಕ್ಷರಾಗಿ ಮಂಜುನಾಥ್ ಗುಡದೂರ, ಪ್ರಧಾನ ಕಾರ್ಯದರ್ಶಿ ಸಂತೋಷ ಬಳ್ಳಾರಿ, ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಗದಗಿನ, ಉಪಾಧ್ಯಕ್ಷ ಶಿವಾನಂದ ಇನಾಮತಿ, ಮಂಜುನಾಥ್ ಕರುಗಲ್ ಸರ್ವಾನುಮತದಿಂದ ಆಯ್ಕೆಯಾದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಗೌರವಾನ್ವಿತ ವ್ಯಕ್ತಿಗಳಾದ ಕರುನಾಡು ಕಾಯಕ ಸಮ್ಮಾನ 2024 ಸಮಾಜ ಸೇವೆಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕರಾದ ನೀಲಕಂಠಪ್ಪ ಮಲಕಾಜಪ್ಪ ಕೊಟಗಿ ಹಾಗೂ ಪಂಚಮಸಾಲಿ ಸಮಾಜದ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಗುತ್ತಿಗೆದಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ್ ತುಳಿ ರವರಿಗೆ ಸನ್ಮಾನ ಮಾಡಲಾಯಿತು.
ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಕೆ ಮಲಗೌಡರ್, ಸಮಾಜದ ಹಿರಿಯರಾದ ಬಿ ಎಸ್ ಚಿಂಚಳ್ಳಿ, ಸಿ ಬಿ ಪಲ್ಲೇದ್, ಎಸ್ ವಿ ಪಲ್ಲೇದ್,ಭದ್ರೇಶ ಕುಸಲಾಪುರ,ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಸಂತೋಷ.ಅಕ್ಕಿ ಉಪಸ್ಥಿತರಿದ್ದರು.