ಧಾರವಾಡ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ ಮತ್ತು ಕೆ.ಪಿ.ಇ.ಎಸ್ ಪದವಿ ಪೂರ್ವ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಈಶ್ವರ ಸಣಕಲ್ಲ ದತ್ತಿ ಅಂಗವಾಗಿ ಉಪನ್ಯಾಸ ಹಾಗೂ ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ಧಾರವಾಡ ಕೆ.ಪಿ.ಇ.ಎಸ್ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಭವನದಲ್ಲಿ ದಿ 22 ರಂದು ಬೆಳಿಗ್ಗೆ 11 ಕ್ಕೆ ಜರುಗಲಿದೆ ಎಂದು ತಾಲೂಕಾ ಕಸಾಪ ಗೌರವ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಮತ್ತು ಉಮಾ ಬಾಗಲಕೋಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಲಿಂಗರಾಜ ಅಂಗಡಿ ನೆರವೇರಿಸಲಿದ್ದು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಸಂಯೋಜನಾಧಿಕಾರಿ ಡಾ ಜಿನದತ್ತ ಹಡಗಲಿ ಕನ್ನಡ ನಾಡು-ನುಡಿಯ ಪರಂಪರೆ ಕುರಿತು ಉಪನ್ಯಾಸ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕೆ.ಪಿ.ಇ.ಎಸ್ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎ ಎಮ್ ಶಲವಡಿ ವಹಿಸಲಿದ್ದಾರೆ. ತಾಲೂಕಾ ಅಧ್ಯಕ್ಷರಾದ ಮಹಾಂತೇಶ ನರೇಗಲ್ಲ, ದತ್ತಿದಾನಿಗಳಾದ ಮಧುಮತಿ ಸಣಕಲ್ಲ ಗೌರವ ಉಪಸ್ಥಿತ ಇರಲಿದ್ದಾರೆ ಎಂದರು.