
ಧಾರವಾಡ 09 : ತಮಗೆಲ್ಲ ತಿಳಿದಂತೆ ಪ್ರಸ್ತುತ ನಮ್ಮ ಕನ್ನಡ ಭಾಷೆಯು ಹಲವಾರು ಕಾರಣಗಳಿಂದಾಗಿ ಬಿಕ್ಕಟ್ಟು ಎದುರಿಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಂತೂ ಇಂಗ್ಲೀಷ್ ಭಾಷೆಯ ಅತಿಯಾದ ಮೋಹದಿಂದ ಮಕ್ಕಳಿಗೆ ಕನ್ನಡ ಭಾಷೆಯ ಆಳ, ಸತ್ತ್ವ ಸೊಗಸಿನ ಪರಿಚಯ ಆಗದೇ ಮಕ್ಕಳು ಈ ನೆಲದ ಭಾಷೆಯಿಂದ ವಿಮುಖರಾಗುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಕನ್ನಡವನ್ನು ಕಲಸಲು ಸರಕಾರವು ಕನ್ನಡ ಭಾಷೆಯನ್ನು ಉರ್ಜಿತಗೊಳಿಸಲು ಹಲವಾರು ಯೋಜನೆಗಳ ಮೂಲಕ ಪುಯತ್ನಿಸಲಾಗುತ್ತಿದೆ. ಆದರೂ ಕನ್ನಡ ಮಾಧ್ಯಮದ ಎಷ್ಟೋ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪುತ್ತಿವೆ. ಕನ್ನಡ ಭಾಷೆಯು ಉಳಿಯಲು ಶಿಕ್ಷಣ ಮಟ್ಟದಲ್ಲಿ ಅದರ ಕಲಿಕೆಯು ಎಷ್ಟು ಮುಖ್ಯವೋ, ಸಾಂಸ್ಕೃತಿಕವಾಗಿ ಕನ್ನಡ ಭಾಷೆಯ ಅರಿವನ್ನು ಮಕ್ಕಳಿಗೆ ಮೂಡಿಸುವುದು ಅಷ್ಟೇ ಮುಖ್ಯ ಈ ತಾತ್ವಿಕ ಹಿನ್ನೆಲೆಯಲ್ಲಿ “ಮಾತ್ರ ಬಾಷೆಯಿಂದಲೇ ಮನೋವಿಕಾಸ” ಎಂಬ ಧೈಯ ದೊಂದಿಗೆ ಕನ್ನಡ ಕಾವ್ಯ ಕಸ್ತೂರಿ’ – ಮಕ್ಕಳ ರಂಗ- ಸಂಸ್ಕೃತಿ ಏ21 ರಿಂದ ಮೇ 11 ತಾ ವರೆಗೆ ಅಣ್ಣಾಜಿರಾವ ಶಿರೂರ ರಂಗಮಂದಿರ ಆವರಣದಲ್ಲಿ ಪ್ರತಿದಿನ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:30 ರ ವರೆಗೆ ಹಮ್ಮಿಕೊಳ್ಳಲಾಗಿದೆ.ಎಂದು ಡಾ ಪ್ರಕಾಶ ಗರುಡ ತಿಳಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ನಮ್ಮ ಮಕ್ಕಳಿಗೆ ಬೇಸಿಗೆಯಲ್ಲಿ ಹಮ್ಮಿಕೊಳ್ಳುವ ಶಿಬಿರಗಳಲ್ಲಿಯಾದರೂ ಒಂದಿಷ್ಟು ನಮ್ಮ ಕನ್ನಡ ಭಾಷೆಯ ವೈವಿದ್ಯತೆ, ಸತ್ಯ, ಸೊಗಡು, ಸೊಗಸು ಇದರ ಪರಿಚಯ ಜೀವಂತ ಕಲೆಯಾದ ರಂಗಭೂಮಿಯ ಮೂಲಕ ಮಾಡಿಕೊಡುತ್ತ- ತನ್ಮೂಲಕ ಮಕ್ಕಳು ತಮ್ಮ ಸಂವೇದನೆಯನ್ನು ಹರಿತಗೊಳಿಸಕೊಳ್ಳಲಿ ಎಂಬುದು ಈ ಶಿಬಿರದ ಉದ್ದೇಶವಾಗಿದೆ ಎಂದರು. ಶಿಬಿರದ ವಿವರ ಈ ಕಳಗಿನಂತಿವೆ ಶಿಬಿರ
ಶಿಬಿರವನ್ನು ಧಾರವಾಡದ ಪ್ರತಿಷ್ಟಿತ ಸಂಸ್ಥೆಗಳಾದ ಸಕ್ಕರಿ ಬಾಳಾಚಾರ್ಯ( ಶಾಂತಕವಿ ಟ್ರಸ್ಟ್, ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಹಾಗೂ ಗೊಂಬೆಮನ ಇವರು ಜಂಟಿಯಾಗಿ ಆಯೋಜಿಸಿದ್ದಾರ.ಈ ಶಿಬಿರವು ನಾಡಿನ ಖ್ಯಾತ ರಂಗನಿರ್ದೇಶಕ, ನಾಟಕಕಾರ, ನಟ ರಂಗಾಯಣದ ಮಾಜಿ ನಿರ್ದೇಶಕರಾದ ಡಾ. ಪ್ರಕಾಶ ಗರುಡರ ವರ ನೇತ್ರತ್ವದಲ್ಲಿ ನಡೆಯುತ್ತದೆ. ಶಿಬಿರವು ಧಾರವಾಡದ ಸೃಜನಾ ರಂಗಮಂದಿರದ ಆವರಣ, ಕೆ.ಸಿ. ಕಾಲೇಜು ಇಲ್ಲಿ. ನಡೆಯುತ್ತದೆ. ಶಿಬಿರವು ಏ ದಿ 21 ರಿಂದ ಮೇ 10 ರ ವರೆಗೆ ನಡೆಯುತ್ತದೆ. ಶಿಬಿರದಲ್ಲಿ 10 ವರ್ಷ ದಿಂದ 14 ವರ್ಷದ ಕೇವಲ 30 ಮಕ್ಕಳಿಗೆ ಮಾತ್ರ ಪ್ರವೇಶವಿದೆ. ಶಿಬಿರವು ಬೆಳಿಗ್ಗೆ 9.30 ರಿಂದ ಮದ್ಯಾನ 130 ರ ವರೆಗೆ ನಡೆಯುತ್ತದೆ ಶಿಬಿರದಲ್ಲಿ ಮಕ್ಕಳಿಂದಲೇ ಪದ್ಯ, ಕಥ ರಚನ ಚಿತ್ರಕಲೆ, ಕನ್ನಡ ವಾಚನ ಹಾಗು ಮಕ್ಕಳಿಂದಲೇ ಛಾಯಾಚಿತ್ರ ಇವುಗಳ ಪ್ರಾಥಮಿಕ ಪರಿಚಯ ಮಾಡಿಕೊಡಲಾಗುವುದು. ಶಿಬಿರದಲ್ಲಿ ತಜ್ಞ ಸಾಹಿತಿಗಳು, ಕಲಾವಿದರು ಸಂಪನ್ಮೂಲವ್ಯಕ್ತಿಗಳಾಗಿ ಬಂದು ಮಕ್ಕಳೊಡನೆ ಸಂವಾದ ನಡೆಸಿಕೊಡುವರು
ಶಿಬಿರದಲ್ಲಿ ನಮ್ಮ ಕನ್ನಡದ ಕಾವ್ಯ ಕತೆಗಳ, ಗಾದಗಳು, ಜಾಣ್ಣುಡಿ ಚಾಟೋಕ್ತಿ ಇವುಗಳ ಪರಿಚಯ ಮಾಡಿಕೊಡುವ ಹಿನ್ನೆಲೆಯಲ್ಲಿ ಶಿಬಿರದ ಕೊನಯಲ್ಲಿ ಒಂದು ರಂಗ ರೂಪಕವನ್ನು ಮಕ್ಕಳಿಂದ ಮಾಡಿಸಲಾಗುವುದು. ಎಂದರು.
ಶಿಬಿರದ ಸಂಚಾಲಕರು
ಹನುಮೇಶ ಸಕ್ಕರೆ 9448436023, ಸಮೀರ ಜೋಶಿ 9845447002, ಡಾ. ಶಶಿಧರ ನರೇಂದ್ರ 9448901846, ಡಾ. ಕೃಷ್ಣ ಕಟ್ಟಿ 9448580056,ಡಾ ಪ್ರಕಾಶ ಗರುಡ 9343100135.ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಲು ಕೋರಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಹನುಮೇಶ ಸಕ್ಕರೆ, ಸಮೀರ ಜೋಶಿ, ಡಾ. ಶಶಿಧರ ನರೇಂದ್ರ, ಡಾ. ಕೃಷ್ಣ ಕಟ್ಟಿ ಇದ್ದರು.