ಬೈಲಹೊಂಗಲ : ಪರಿಶುದ್ಧ ಹೃದಯದಿಂದ ಮಾತ್ರ ಶ್ರೇಷ್ಠ ಸಾಹಿತ್ಯ ಹೊರಹೊಮ್ಮುತ್ತದೆ ಎಂದು ಹಿರಿಯ ಪತ್ರಕರ್ತ, ಶಿಕ್ಷಣ ತಜ್ಞರಾದ ಈಶ್ಚರ ಹೋಟಿ ಹೇಳಿದರು. ಕಲಬುರಗಿಯ ಮಣೂರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವತಿಯಿದ ಪಟ್ಟಣದ ಸೊಗಲ ರಸ್ತೆಯಲ್ಲಿರುವ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಮಕರ ಸಂಕ್ರಾಂತಿ ನಿಮಿತ್ತವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಶಹಾಬುದ್ದೀನ್ ಕಾಲೇಖಾನ್ ಅವರ ‘ಕಾವ್ಯಸ್ಪೂರ್ತಿ’ ಕವನ ಸಂಕಲನ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯ, ಕಲೆ ಬದುಕಿನ ಆನಂದವನ್ನು ಇಮ್ಮಡಿಗೊಳಿಸುವ, ಮನಸ್ಸಿಗೆ ಆನಂದ ನೀಡುವ ಶಕ್ತಿ ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟರು.
ಧಾರವಾಡದ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಪಿ. ಮಹಾದೇವ ನಾಯ್ಕ ಶಹಾಬುದ್ದೀನ್ ಕಾಲೇಖಾನ್ ಅವರ ‘ಕಾವ್ಯಸ್ಪೂರ್ತಿ’ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿ ಯುವ ಕವಿಗಳು ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಲಿ ಎಂದು ಶುಭ ಹಾರೈಸಿದರು. ಯರಗಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರಾಜಶೇಖರ ಬಿರಾದಾರ ಕೃತಿ ಪರಿಚಯಿಸಿದರು. ಪ್ರಕೃತಿ, ಹಬ್ಬಗಳು, ಶಿಕ್ಷಣ, ಪ್ರೀತಿ ಮುಂತಾದ ವಿಷಯಗಳ ಕುರಿತಾದ ಕವನಗಳು ಚೊಚ್ಚಲ ಕೃತಿಯ ಮೌಲ್ಯ ಹೆಚ್ಚಿಸಿದ್ದು ಕವಿಯ ಎದೆಯೊಳಗೆ ಭಾವನೆಗಳು ಕುಸುಮಗಳಾಗಿ ಅರಳಿವೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಸ್ತಾವಿಕ ನುಡಿಗನ್ನಾಡಿದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾದ್ಯಕ್ಷ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿಯ ಮುಖ್ಯ ಸಂಯೋಜಕರಾದ ಮೋಹನ ಬಸನಗೌಡ ಪಾಟೀಲ ಎಲ್ಲ ಕವಿಗಳಿಗೆ ಕಿತ್ತೂರು ಕರ್ನಾಟಕದ ಬೈಲಹೊಂಗಲ ನೆಲದ ಹಿರಿಮೆ ಗರಿಮೆಯನ್ನು ಪರಿಚಯ ಮಾಡಿಕೊಟ್ಟರು. ಕವಿಗಳಿಗೆ ವೇದಿಕೆ ಕಲ್ಪಿಸಿಕೊಟ್ಟು ಮುಖ್ಯವಾಹಿನಿಗೆ ತರುವುದಲ್ಲದೇ ಕೃತಿಗಳನ್ನು ಹೊರತರಲು ಪ್ರೇರಣೆ ನೀಡುವುದು ಕವಿಗೋಷ್ಠಿಯ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಕಲಬುರಗಿಯ ಮಣೂರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಫಾರೂಕಅಹ್ಮದ ಮಣೂರ್ ಮಾತನಾಡಿ ಸಾಮಾಜಿಕ ಸೇವೆ ಮನಸ್ಸಿಗೆ ತೃಪ್ತಿ ಕೊಡುವುದಲ್ಲದೆ ಬದುಕಿನ ಸಂಭ್ರಮ ಹೆಚ್ಚಿಸುತ್ತದೆ ಎಂದರು. ಎಲ್ಲ ವಿಷಯಗಳ ಬಗ್ಗೆ ಕವನ ವಾಚಿಸಿದ್ದು ಖುಷಿ ನೀಡಿತು ಕಲಬುರಗಿಯಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಹುಬ್ಬಳ್ಳಿಯ ಉಪ ಕಾರಾಗೃಹದ ಅಧೀಕ್ಷಕರಾದ ಶಹಾಬುದ್ದೀನ್ ಕಾಲೇಖಾನ್ ಮಾತನಾಡಿ ವೃತ್ತಿಯ ಜೊತೆಗೆ ಸಾಹಿತ್ಯ ರಚನೆ ಪ್ರವೃತ್ತಿಯಾದಾಗ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂದರು. ಭಾವ ಪ್ರಪಂಚದಲ್ಲಿ ಮನಸ್ಸು ಪ್ರಶಾಂತವಾಗಿರಬಲ್ಲದು ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ಮಾತನಾಡಿ ಕವಿತೆಗಳಲ್ಲಿನ ಗಟ್ಟಿತನ ಓದುಗರನ್ನು ಆಕರ್ಷಿಸುತ್ತದೆ ಎಂದರು. ಇದೇ ಸಂದರ್ಭದಲ್ಲಿ ಉದಯೋನ್ಮುಖ ಕವಿಗಳಿಗೆ ಕವನ ರಚನೆ ಕುರಿತು ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ, ಬೈಲಹೊಂಗಲ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಶಾಹೀನ್ ಅಖ್ತರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸವದತ್ತಿಯ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಸದೆಪ್ಪ ಕೋಳಿ ಹಾಗೂ ಚಿಕ್ಕಮಗಳೂರಿನ ಜಿಲ್ಲಾ ಕಾರಾಗೃಹದ ಮುಖ್ಯ ವೀಕ್ಷಕರಾದ ಬಸವಂತಪ್ಪ ಬಸಪ್ಪ ಗಡದವರ ಕಾರ್ಯಕ್ರಮ ನಿರೂಪಿಸಿದರು.
ರಾಜೇಶ ವಸಂತರಾವ ಮೆಂಡಿಗೇರಿ, ಎನ್. ಗುಣಶೀಲ, ನೀರಜಾ ನಾರಾಯಣ ಗಣಾಚಾರಿ, ಬಸವರಾಜ ಕಳಕಪ್ಪ ವಾರಿ, ಮಹಾಂತೇಶ ವಾಯ್. ಗೋನಕೊಪ್ಪ, ವಿಜಯಲಕ್ಷ್ಮಿ ಎಂ. ತಿರಕನ್ನವರ, ಬಸವಂತಪ್ಪ ಬಸಪ್ಪ ಗಡದವರ, ಮಹಾಂತೇಶ, ಬಸಪ್ಪ ಬಾಳಿಗಟ್ಟಿ, ಜವಾಹರ ಧ.ಕನ್ನೂರ, ಕುಂತಲ ಅಜೀತ ವಡೇರ, ಹೇಮಂತರಾಜ ಕೆ.ಸಿ., ವಿನಾಯಕ ನಾರಾಯಣ ಬಡಿಗೇರ, ಸಿದ್ಧಲಿಂಗಯ್ಯ ಅಪ್ಪಯ್ಯ ಹಿರೇಮಠ, ರೇಷ್ಮಾ ಎಂ, ಸುಧಾ ಯಲ್ಲಪ್ಪ ಇಟ್ನಾಳ, ಡಾ. ಬಸವರಾಜ ಶಿ.ಎಣಗಿ, ಜ್ಯೋತಿ ಎಂ. ಚಿನಗುಂಡಿ, ಬಸಪ್ಪ ಬಿ. ಇಟ್ಟಣ್ಣವರ, ಶಿಲ್ಪಾ ಎಸ್. ಉಪಾಧ್ಯೆ, ಈರಣ್ಣ ಬಸಪ್ಪ ತಟ್ಟಿಮನಿ, ಯಲ್ಲಪ್ಪ ಕ. ಕೊಣ್ಣೂರ, ಸರಸ್ವತಿ ಬನ್ನಿಗಿಡದ, ಯಶವಂತ ಭರಮಣ್ಣ ಉಚಗಾಂವಕರ, ಕಾಡೇಶ ಕಲ್ಲಪ್ಪ ಬಸ್ತವಾಡಿ, ಶೈಲಜಾ ಎಂ. ಕೋರಿಶೆಟ್ಟರ, ಮೈಲಾರಪ್ಪ ನಿಂಗಪ್ಪ ಗೋವಣ್ಣವರ, ನೇಹಾ ಶ್ರೀನಿವಾಸ ಬಡಿಗೇರ, ಶಿವಕುಮಾರ ಗು. ಶಿವಶಿಂಪಿ, ಆನಂದ ಯಲ್ಲಪ್ಪ ಕೊಂಡಗುರಿ, ಬಸಪ್ಪ ಹೋ. ಶೀಗಿಹಳ್ಳಿ, ಸಾಗರ ಚಿನ್ನಪ್ಪ ಹುನಗುಂದ, ಎಂ. ಎಸ್. ಪರಮೇಶ್ವರಪ್ಪ, ಪ್ರಸನ್ನ ಶಿವಯೋಗಿ ಹೂಗಾರ, ಮಹಾಂತೇಶ ಅ. ಚಿಕ್ಕಮಠ, ರಮೇಶ ನಿಂಗಪ್ಪ ಇಂಗಳಗಿ, ಗೀತಾ ಅಶೋಕ ಶೇಠಿ, ಎಸ್. ವಿ. ಕೋರಿಮಠ, ಜ್ಯೋತಿಲಕ್ಷ್ಮಿ ಬಾಲಕೃಷ್ಣ ಬಡಿಗೇರ, ನೇತ್ರಾವತಿ ವಿ. ಅಂಗಡಿ, ಎ.ಎಸ್. ಗಡದವರ ‘ಅಡವೀಶ’, ಉದಯಚಂದ್ರ ದಿಂಡವಾರ, ವೀರಣ್ಣ ಮಡಿವಾಳಪ್ಪ ಹೂಲಿ, ದೀಪಾ ವಿರೂಪಾಕ್ಷ ಜವಳಿ, ಚಂದ್ರಶೇಖರ ರುದ್ರಪ್ಪ ಕೊಪ್ಪದ, ಬಾಳಗೌಡ ಶಂಕರ ದೊಡಬಂಗಿ, ದಾನಮ್ಮ ವೀ. ಅಂಗಡಿ, ಗೋದಾವರಿ ಸೋ. ಪಾಟೀಲ, ನೇತ್ರಾವತಿ ಈ. ಬಿಸಲೊಳ್ಳಿ, ಪೂರ್ಣಿಮಾ ಯಲಿಗಾರ, ಮಲ್ಲಮ್ಮ ಆರ್. ಪಾಟೀಲ, ಬಸಗೌಡ ನಾಯ್ಕ, ಅನಿಲ ಮಡಿವಾಳ
ಕವಿ-ಕವಯತ್ರಿಯರು ಕವನ ವಾಚಿಸಿದರು. ಮೆಹಬೂಬ ಸುಭಾನಿ ಖಿಲಾರಿ ವಂದಿಸಿದರು.