
ಧಾರವಾಡ : ಇಂದು ಯುವ ಜನರು ಪರಿಶ್ರಮದಿಂದ ದುಡಿದು ಬದುಕುವ ಮನೋಭಾವನೆ ಬೆಳೆಸಿಕೊಳ್ಳಬೇಕು
ಯುವಕರು ಆಧುನಿಕ ತಂತ್ರಜ್ಞಾನ ಕೃಷಿಯನ್ನೇ ಉದ್ಯೋಗನ್ನಾಗಿ ಮಾಡಿಕೊಳ್ಳಬೇಕು ಎಂದು ನವದೆಹಲಿಯ ಕೃಷಿಕ ಸಮಾಜ ದ ರಾಜ್ಯಾಧ್ಯಕ್ಷರಾದ ಮಾಣಿಕ್ಯ ಚಿಲ್ಲೂರ ಅವರು ಹೇಳಿದರು.
ರೈತರ ಮನಸು ಮಾಡಿದರೆ ಸರ್ಕಾರ ಉರುಳಿಸುವ ಶಕ್ತಿ ರೈತರಿಗೆ ಹೊಂದಿದ್ದಾರೆ ಎಂದು ತಿಳಿಸಿದರು.
ಅವರು ಮುಮ್ಮಿಗಟ್ಟಿ ಗ್ರಾಮದ ಜನಸಾಗರ ಸಾಹಿತ್ಯ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ವಾರ್ಷಿಕ ಕ್ರೀಯಾ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನಸಾಗರ ಸಾಹಿತ್ಯ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸುರೇಶ್ ಹಾರೋಬೆಳವಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಚಂದ್ರಗೌಡ ದೇವಗಿರಿ, ಮಲ್ಲಿಕಾರ್ಜುನ ಗುರನಳ್ಳಿ, ಅಶೋಕ ಸೋಮಾಪುರ, ಗುರುಸಿದ್ದಪ್ಪ ಹವಾಲದಾರ, ಅಣ್ಣಪ್ಪಗೌಡ ದೇಸಾಯಿ, ಕೊಟ್ರೇಶ ವಕೀಲರು, ಡಿ ಕೆ ಸೋದರ ಇನ್ನಿತರ ರೈತ ಮುಖಂಡರು ಭಾಗವಹಿಸಿದ್ದರು.