ಧಾರವಾಡ 01 : ಬಡವರ ಶ್ರಮಿಸಿದ ಹಾಗೂ ಗ್ರಾಮೀಣ ವಿದೇಶದ , ಮಕ್ಕಳು , ಶಿಕ್ಷಣದಿಂದ ವಂಚಿತರಾಗಬಾರದ ಮಹೋದ್ದೇಶದಿಂದ ನಾಮದ ಜನಕ , ನಾಡುಮೆಚ್ಚಿದ ಜನನಾಯಕ, ಸಹಕಾರ ರಂಗದ ಭಿಷ್ಮ ಕೆ.ಎಚ್.ಪಾಟೀಲರು ಕಟ್ಟಿದ ನಗರದ ಸಪ್ತಾಪ್ತರದಲ್ಲಿರುವ ಶಾರದಾ ಸಮೂಹ ಶಿಕ್ಷಣ ಸಂಸ್ಥೆ ಇದೀಗ ಸವರ್ಣ ಮಹೋತ್ಸವ ಆಚರಿಸುತ್ತಿದೆ ಎಂದು ವೇಮನ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ರಮೇಶ ಜಂಗಲ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ದಿ. 3 ರಂದು ಸಂಜೆ 4 ಗಂಟೆಗೆ ಸಪ್ತಾಪೂರದಲ್ಲಿರುವ ಸಂಸ್ಥೆಯ ಆವರಣದಲ್ಲಿ ಜರುಗುವ ಸುವರ್ಣ ಮಹೋತ್ಸವ ಸಮಾರಂಭವನ್ನು ರಾಜ್ಯದ ಕಾನೂನು , ನ್ಯಾಯ , ಮಾನವ ಹಕ್ಕುಗಳು , ಶಾಸನ ರಚನೆ , ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ.ಪಾಟೀಲರು ಉದ್ಘಾಟಿಸುವರು ಎಂದರು.
ರಾಜ್ಯ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರ ಉಪಸ್ಥಿತಿಯಲ್ಲಿ ಜರುಗುವ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟಿನ ನ್ಯಾಯ ಮೂರ್ತಿ ರವಿ ಹೊಸಮನಿ ಮುಖ್ಯ ಅತಿಥಿಗಳಾಗಿ ಆಗಮಿಸುವರು . ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್.ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು . ಶಾಸಕ ಎನ್.ಎಚ್ . ಕೋನರೆಡ್ಡಿ ಅತಿಥಿಗಳಾಗಿ ಆಗಮಿಸುವರು . ಇದೇ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು ಹಾಗೂ ಹೆಸರಾಂತ ನ್ಯಾಯವಾದಿಗಳು ಹಾಗೂ ರಡ್ಡಿ ಸಹಕಾರ ಬ್ಯಾಂಕಿನ ಚೇರಮನ್ ಕೆ.ಎಲ್.ಪಾಟೀಲರನ್ನು ಸನ್ಮಾನಿಸಲಾಗುವದು . ವೇಮನ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಡಿ.ಆರ್ .ಪಾಟೀಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದರು.
ಬಡವರ ಜ್ಞಾನ ದಾಸೋಹ ಶಾಲೆ ಎಂದ ಗುರುತಿಸಿಕೊಂಡಿರುವ , ದೇಮನ ವಿದ್ಯಾವರ್ಧಕ ಸಂಘದ ಈ ಶಾಲೆ ಬಾಲಕಿಯರ ಪ್ರೌಢಶಾಲೆಯಾಗಿ ಆರಂಭಗೊಂಡು , ಈಗ ಶಿಕ್ಷಣ ಸಂಸ್ಥೆಗಳ ಸಮೂಹವಾಗಿ ಮಾರ್ಪಟ್ಟು ಹೆಮ್ಮರವಾಗಿ ಬೆಳೆಯುತ್ತಿದೆ . ಶಿಶು ವಿಹಾರದಿಂದ ಹಿಡಿದು ಪದವಿ ಪೂರ್ವ ಕಾಲೇಜುವರೆಗೆ ಶಿಕ್ಷಣ ನೀಡಲಾಗುತ್ತಿದೆ , ಅತ್ಯಾಧುನಿಕ ಸಲಕರಣೆ ಸೌಲಭ್ಯಗಳೊಂದಿಗೆ ನುರಿತ ಸಿಬ್ಬಂದಿ ಹಾಗೂ ಸಮರ್ಥ ಆಡಳಿತ ಮಂಡಳಿಯಿಂದಾಗಿ ಸಂಸ್ಥೆ ಶಿಕ್ಷಣ ಕಾಶಿಯಲ್ಲಿ ಮೌನ ಕ್ರಾಂತಿ ಮಾಡುತ್ತಿದೆ ಎಂದರು.
ಸಮಾರಂಭಕ್ಕೆ ಸರ್ವರಿಗೆ ಆಮಂತ್ರಣವಿದ್ದು , ಶಿಕ್ಷಣ ಪ್ರೇಮಿಗಳು , ಸಹಕಾರಿಗಳು ಸಂಸ್ಥೆಯ ಸದಸ್ಯರು ಹಾಗೂ ಹಿತೈಷಿಗಳು ಆಗಮಿಸಲು ವಿನಂತಿಸಿಕೊಳ್ಳುತ್ತೇವೆ ಎಂದರು
ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ಆಡಳಿತ ಮಂಡಳಿ ಚೇರಮನ್ ಕೆ.ವಿ.ತಿಮ್ಮಾಪೂರ ಗೌರವ ಎಸ್.ಬಿ.ಮುದಿಗೌಡರ , ಕಾರ್ಯಾಧ್ಯಕ್ಷ ಕೆ.ಎಸ್.ಪಾಟೀಲ ಸದಸ್ಯರಾದ ಎ.ಜಿ.ಮುಳ್ಳೂರ , ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ಬಿ . ದ್ವಿ , ನವಲಗುಂದ , ಕೆ.ಎಸ್.ಕರ್ಲವಾಡ , ಎಸ್.ಎಚ್.ಪಾಟೀಲ , ಶ್ರೀಮತಿ ಪುಷ್ಪಾ ಯಮನೂರ , ಎನ್.ವಿ.ಕೆರಕಲಮಟ್ಟಿ , ಡಾ.ಬಿ.ವಿ.ಪಾಟೀ ಪಿ.ಕೆ.ಹೂಲಿಹಳ್ಳಿ , ಎಲ್.ಎಚ್.ಮಲ್ಲಿಗವಾಡ ಇನ್ನಿತರು ಉಪಸ್ಥಿತರಿದ್ದರು.