![ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ನುಡಿ ನಮನ](https://independentsangramnews.com/wp-content/uploads/2024/12/WhatsApp-Image-2024-12-29-at-1.56.17-AM.jpeg)
ಧಾರವಾಡ 29 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ನುಡಿ ನಮನ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ ಡಾ.ಮನಮೋಹನ ಸಿಂಗ್ ಅವರು ಒಳ್ಳೆಯ ಆಡಳಿತಗಾರ, ಮುತ್ಸದ್ಧಿ ರಾಜಕಾರಣಿಗಳು, ದೇಶವನ್ನು ಆರ್ಥಿಕ ಅಭಿವೃದ್ಧಿಯತ್ತ ಕೊಂಡೊಯ್ದ ಮಹಾನ ಅರ್ಥಶಾಸ್ತ್ರಜ್ಞ ಆಗಿದ್ದರು ಎಂದು ತಮ್ಮ ನುಡಿ ನಮನದಲ್ಲಿ ಬಣ್ಣಿಸಿದರು.
ಜಿಲ್ಲಾ ಕಸಾಪ ಹಾಗೂ ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನುಡಿ ನಮನ ಕಾರ್ಯಕ್ರಮವನ್ನು ಏರ್ಪಡಿಸಿದ್ದವು. ತಾಲೂಕು ಅಧ್ಯಕ್ಷ ಮಹಾಂತೇಶ ನರೇಗಲ್, ಜಿಲ್ಲಾ ಕೋಶಾಧಿಕಾರಿ ಡಾ. ಎಸ್ ಎಸ್ ದೊಡಮನಿ, ಸಂಘಟನಾ ಕಾರ್ಯದರ್ಶಿ ಎಫ್ ಬಿ ಕಣವಿ, ಸಹ ಕಾರ್ಯದರ್ಶಿ ಶಾಂತವೀರ ಬೆಟಗೇರಿ, ತಾಲೂಕು ಕಾರ್ಯದರ್ಶಿ ಉಮಾ ಬಾಗಲಕೋಟೆ, ತಾಲೂಕು ಕೋಶಾಧಿಕಾರಿ ಮೇಘಾ ಹುಕ್ಕೇರಿ, ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿ ಸುಧಾ ಕಬ್ಬೂರ, ಪ್ರಮಿಳಾ ಜಕ್ಕನ್ನವರ, ಚನ್ನಬಸಪ್ಪ ಧಾರವಾಡ ಶೆಟ್ಟರ್, ಗಂಗಾಧರ ಗಾಡದ, ಸುನಂದಾ ಯಡಾಲ, ಪ್ರೊ .ಬಿ ಆರ್ ರಾಠೋಡ, ಗೀತಾ ಕುಲಕರ್ಣಿ, ಶ್ರೀನಿವಾಸ ಪಾಟೀಲ, ಡಾ. ಬಸು ಬೇವಿನಗಿಡದ, ಶ್ರೀಧರ್ ಗಸ್ತಿ, ಎಸ್ ಎಚ್ ಪ್ರತಾಪ್, ಬಿ ಕೆ ಗದ್ದೀಕೇರಿ, ಸಿದ್ಧರಾಮ ಹಿಪ್ಪರಗಿ, ವಿಲಾಸ ಶೇರ್ ಖಾನ್ ಮುಂತಾದವರು ಉಪಸ್ಥಿತರಿದ್ದರು.