![Folk Literature Life Literature: Dr. S Balaji](https://independentsangramnews.com/wp-content/uploads/2025/01/WhatsApp-Image-2025-01-14-at-9.22.27-AM-e1736917992688.jpeg)
ಧಾರವಾಡ : ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ, ಆಚರಣೆ, ಸಂಪ್ರದಾಯ, ನಂಬಿಕೆಗಳು ಮೊದಲಾದವುಗಳನ್ನು ತಿಳಿಯಬೇಕಾದರೆ ಜನಪದ ಸಾಹಿತ್ಯವೇ ಮೂಲ.ಜಪಪದರು ನಿರಕ್ಷರಿಗಳಾಗಿದ್ದರೂ ಸಾಂಸ್ಕೃತಿಕವಾಗಿ ಸಾಕ್ಷರರು, ಜ್ಞಾನಿಗಳು, ವಿಜ್ಞಾನಿಗಳು ಆಗಿದ್ದರು ಎಂದು ಕರ್ನಾಟಕ ರಾಜ್ಯ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಾ. ಎಸ್ ಬಾಲಾಜಿ ಅವರು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆದ ಶ್ರೀ ಇಮಾಮಸಾಬ ವಲ್ಲೆಪ್ಪನವರ ಅವರನ್ನು ಸನ್ಮಾನಿಸಿ ಮಾತನಾಡುತ್ತಾ ತಿಳಿಸಿದರು.
ಕರ್ನಾಟಕ ರಾಜ್ಯ ಕನ್ನಡ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರೊ ಕೆ ಎಸ್ ಕೌಜಲಗಿ ಪ್ರಾಸ್ತಾವಿಕ ಭಾಷಣ ಮಾಡಿದರು. ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ ಅವರು ಜನಪದ ಸಾಹಿತ್ಯ ಹೃದಯದ ಭಾಷೆಯಲ್ಲಿ ಜನಪದರ ಸಮಗ್ರ ಬದುಕು ಅಭಿವ್ಯಕ್ತಿ ಗೊಂಡಿದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಶ್ರೀ ವೀರಪ್ಪ ಎಮ್ಮಿ ಅವರು ಧಾರವಾಡ ಜಿಲ್ಲೆ ಜನಪದ ಸಾಹಿತ್ಯದ ಕಣಜ ಎಂದು ಹೇಳಿದರು. ಜಿಲ್ಲೆಯ ಸುರಶೆಟ್ಟಕೊಪ್ಪದ ಗೀಗಿ ಮೇಳ, ಅಣ್ಮೀಗೇರಿಯ ಸೋಬಾನ ಪದಗಳ ತಂಡ ಸ್ವಾತಂತ್ರ್ಯ ಚಳುವಳಿ ಕುರಿತ ಪದಗಳನ್ನು, ರೈತ ಪದಗಳ ತಂಡ ಮೊದಲಾದವು ಭಾಗವಹಿಸಿದ್ದವು.
ಮಲ್ಲಪ್ಪ ಹೊಂಗಲ ಜಾನಪದ ಹಾಡುಗಳನ್ನು ಪ್ರಸ್ತುತ ಪಡಿಸಿದರು. ರೈತ ಮುಖಂಡ ಶ್ರೀ ಸಿದ್ದು ತೇಜಿ, ಡಾ.ಆನಂದಪ್ಪ ಜೋಗಿ, ಮಹೇಶ್ ತಳವಾರ, ಬಾಪುಗೌಡ ಯಳವತ್ತಿ, ನಿಂಗಪ್ಪ ಪೂಜಾರ, ರವಿರಾಜ್ ವೆರ್ಣೇಕರ್, ಮಂಜುಳಾ ಮೇಟಿ, ಪುಷ್ಪಾ ಹಿರೇಮಠ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈರಪ್ಪ ಎಮ್ಮಿ ಸ್ವಾಗತಿಸಿದರು. ಶರಣು ಯಮನೂರ ನಿರೂಪಿಸಿದರು.