ಹುಬ್ಬಳ್ಳಿಯ ಹಳೆ ಸಿಎಆರ್ ಮೈದಾನದಲ್ಲಿ ಮಾದಕ ವಸ್ತು ಪೆಡ್ಲರ್ಸ್ ಪರೇಡ್

ಹುಬ್ಬಳ್ಳಿ : ನಗರದ ಕಾರವಾರ ರಸ್ತೆಯಲ್ಲಿರುವ ಸಿ ಎ ಆರ್ ಮೈದಾನದಲ್ಲಿ ಪರೇಡ್ ಮಾಡಿಸಲಾಯಿತು,
ಹು-ಧಾ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ನೇತೃದಲ್ಲಿ ಪರೇಡ್ ಪೆಡ್ಲರ್ಸ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಕಮಿಷನರ ಅಯ್ಯಪ್ಪ ಮಾಲಾಧರಿಸಿದ್ದ ಪೆಡ್ಲರ್ ಗೆ ಬುದ್ದಿವಾದ ಹೇಳಿದ ಶಶಿಕುಮಾರ.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆಯುಕ್ತ ಎನ್ ಶಶಿಕುಮಾರ್ ಹೊಸ ವರ್ಷ ನಿಮಿತ್ತ ಎಲ್ಲಾ ಚಟುವಟಿಕೆಗಳು ಹೆಚ್ಚಾಗಿರ್ತವೆ ಬೇರೆ ಬೇರೆ ಊರುಗಳಿಂದ ಹುಬ್ಬಳ್ಳಿಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿರುತ್ತೆ
ಅಪರಾಧ ಕೃತ್ಯಗಳು ಸಹ ಹೆಚ್ಚಾಗುವ ಸಾಧ್ಯತೆ ಇರುತ್ತೆ ಹಳೆ ದ್ವೇಷದ ಮೇಲೆ ಅಪರಾಧ ಕೃತ್ಯಗಳು ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ , ಅಷ್ಟೇ ಅಲ್ಲದೇ ಈ ವೇಳೆ ಹಲವು ರೀತಿಯ ಕಾರ್ಯಕ್ರಮಗಳಿರುತ್ತೆ
ಅವುಗಳನ್ನ ಬಳಸಿಕೊಂಡು ಇಂತಹ ಸಂಧರ್ಭದಲ್ಲಿ ಅಪರಾಧ ಕೃತ್ಯಗಳು ನಡೀಯುತ್ತವೆ ,
ಹೀಗಾಗಿ ಹಲವಾರು ರೀತಿಯ ಕ್ರಮ ಕೈಗೊಳ್ಳಲಾಗಿದೆ.

ಈ ಹಿನ್ನೆಲೆ ಇಂದು ಹುಬ್ಬಳ್ಳಿಯಲ್ಲಿ ಪೆಡ್ಲರ್ಸ್ ಪರೇಡ್ ಮಾಡಿದ್ದೇವೆ. 50 ಪೆಡ್ಲರ್ಸ್ ಮೇಲೆ ದೂರು ದಾಖಲಿಸಿಕೊಂಡಿದ್ದೇವೆ. 200 ಕ್ಕೂ ಹೆಚ್ಚು ಪೆಡ್ಲರ್ಸ್ ಗಳನ್ನ ವಶಕ್ಕೆ ಪಡೆದು ಎನ್ ಡಿ ಪಿ ಎಸ್ ಕಾಯ್ದೆ ಅಡಿ ಕ್ರಮ ಕೈಗೊಂಡಿದ್ದೇವೆ. ಕಳೆದ 4-5 ತಿಂಗಳಿಂದ ವ್ಯಸನಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಸಾವಿರಕ್ಕೂ ಹೆಚ್ಚು ಪಾಸಿಟಿವ್ ಬಂದಿವೆ. ಕಳೆದ 10 ವರ್ಷದಲ್ಲಿ ದಾಖಲಾದ ಪ್ರಕರಣಗಳ ಆಧಾರದ ಮೇಲೆ 440 ಪೆಡ್ಲರ್ಸ್ ಗುರುತಿಸಲಾಗಿದೆ. ಅದರಲ್ಲಿ 210 ಪೆಡ್ಲರ್ಸ್ ಗಳನ್ನ ನಮ್ಮ ಅಧಿಕಾರಿಗಳು ಮನೆಗೆ ಹೋಗಿ ಕರೆದುಕೊಂಡು ಬಂದಿದ್ದಾರೆ.ಅವರೆಲ್ಲರ ಮೇಲೆ ಡೊಸಿಯಸ್ ಮಾಡಿದ್ದೇವೆ.

ಇನ್ನು 230 ಕ್ಕೂ ಹೆಚ್ಚು ಜನ ಬಂದಿಲ್ಲ, ಅದರಲ್ಲಿ 50ಕ್ಕೂ ಹೆಚ್ಚು ಜನ ಹೊರ ರಾಜ್ಯದವರಿದ್ದಾರೆ
30ಕ್ಕೂ ಹೆಚ್ಚು ಜನ ಜೂಡಿಶಿಯಲ್ ಕಸ್ಟಡಿಯಲ್ಲಿದ್ದಾರೆ
8-10 ಜನ ಮೃತ ಪಟ್ಟರೆ, 110 ಜನ ಸಿಕ್ಕಿಲ್ಲ.

ಅಷ್ಟೇ ಅಲ್ಲದೇ ನಮ್ಮ ಪೊಲೀಸ್ ಇಲಾಖೆಯಿಂದ ಹೊಸ ವರ್ಷ ನಿಮಿತ್ತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ
ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ಮೇಲೆ ನಿಗಾ ಇಡಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ, ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ
ಇತರೆ ಇಲಾಖೆಗಳೊಂದಿಗೆ ಸಭೆ ಇಟ್ಟುಕೊಳ್ಳಲು ನಾಳೆ ಮನವಿ ಮಾಡಿಕೊಳ್ಳಲಾಗಿದೆ.

ಲೌಡ್ ಸ್ಪೀಕರ್ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಇರುತ್ತೆ 10 ಗಂಟೆ ಮೇಲೆ ಯಾವ್ದೆ ಲೌಡ್ ಸ್ಪೀಕರ್ ಹಚ್ಚಿದೆ ಪಾಲನೆ ಮಾಡಬೇಕು ಖಾಸಗಿ ಜಾಗಗಳಲ್ಲಿ ಇಂದು ಪಾರ್ಟಿ ಮಾಡಿಕೊಳ್ಳಲು ಯಾವುದೇ ನಿರ್ಬಂಧನೆ ಇಲ್ಲ ಡ್ರಿಂಕ್ ಅಂಡ್ ಡ್ರೈವ್ ಕೂಡ ಕ್ರಮ ಕೈಗೊಳ್ಳಲಾಗುತ್ತೆ ಎಂದು ವರದಿಗಾರರಿಗೆ ಮಾಹಿತಿ ನೀಡಿದರು.

  • Related Posts

    ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ

    ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…

    ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ

    ಧಾರವಾಡ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ ಶಾಖೆಯ 2024 2025 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಂಗಳವಾರ, ದಿ 04 ರಂದು ಮುಂಜಾನೆ 10:30 ಗಂಟೆಗೆ ಕನ್ನಡ ಕುಲಪುರೋಹಿತ ಆಲೂರು ವಂಕಟರಾವ ಸಾಂಸ್ಕೃತಿಕ ಭವನದಲ್ಲಿ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ…

    RSS
    Follow by Email
    Telegram
    WhatsApp
    URL has been copied successfully!