ಧಾರವಾಡ 14 : ಜಯ ಕರ್ನಾಟಕ ಜನಪರ ವೇದಿಕೆಯಿಂದ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ರವರ 134 ನೇ. ಜಯಂತಿ ಪ್ರಯುಕ್ತ ಧಾರವಾಡದ ಶ್ರೀನಗರದ ವೃತ್ತದಲ್ಲಿ ರಾಜ್ಯ ಉಪಾಧ್ಯಕ್ಷ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗೌರವ ನಮನಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಪದಾಧಿಕಾರಿಗಳಾದ ಜಗದೀಶ ಜಾದವ, ಮಂಜುನಾಥ ಅಂಗಡಿ, ಎಂ,ಬಿ, ಅವ್ವಣ್ಣನವರ ಪ್ರಮೋದ ಹೆಗಡೆ, ಸುಭಾಷ ಭರಮಗೌಡರ, ರಾಜು ಸವದತ್ತಿ, ಪ್ರವೀಣ ಕುಲ್ಕರ್ಣಿ, ಜಾವೀದ್ ನಧಾಪ, ಸಂಜಯ ಪಾಟೀಲ, ವಿಠ್ಠಲ ಭಂಡಾರಿ, ಪ್ರಕಾಶ ಹೊಸಮನಿ, ಸಿದ್ದಪ್ಪ ಹೊಟ್ಟಿ, ಕಿರಣ ಪಾಟೀಲ, ಬವವರಾಜ ಹಾದಿಮನಿ, ಎಲ್ಲಪ್ಪ ಹರಿಜನ, ರವಿಚಂದ್ರ ಕೊಟಬಾಗಿ, ಶಂಭು ತಳವಾರ, ಹನುಮಂತಪ್ಪ ಪಾಟೀಲ, ಮಲ್ಲವ್ವ ಕಾಂಬ್ಳೆ, ಗಿರಿಜಾ ಹೊಸಮನಿ, ಮುಂತಾದವರು ಉಪಸ್ಥಿತರಿದ್ದರು.