
ಧಾರವಾಡ : ಭಾರತ ಸ್ಕೌಟ್ಸ ಮತ್ತು ಗೈಡ್ಸ ಸಂಸ್ಥೆ ಜಿಲ್ಲಾ ಘಟಕ ಧಾರವಾಡದಲ್ಲಿ ಈವರೆಗೆ ತರಬೇತಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ, ಸಿ ಎಂ.ಕೆಂಗಾರ ಸ್ಕೌಟ್ಸ ವಿಭಾಗದ ವಯಸ್ಕರ ಸಂಪನ್ಮೂಲ ಆಯುಕ್ತರಾಗಿ ಬಡ್ತಿ ಪಡೆದಿದ್ದಾರೆ,
ಸದ್ಯ ಧಾರವಾಡ ತಾಲೂಕು ನಾಯಕನ ಹುಲಿಕಟ್ಟಿ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ, ಇವರು ಶಿಕ್ಷಕ ವೃತ್ತಿಯಲ್ಲಿ ಸುಮಾರು ಮೂವತ್ತೊಂದು ವರ್ಷಗಳ ಅಪಾರ ಅನುಭವವನ್ನು ಹೊಂದಿದವರು.ಸ್ಕೌಟ್ಸನಲ್ಲಿ ಎಎಲ್ ಟಿ ತರಬೇತಿ ಹೊಂದಿರುವ ಇವರು ಸ್ಕೌಟ್ಸನಲ್ಲಿ ಅಪಾರ ಜ್ಞಾನವುಳ್ಳವರಾಗಿದ್ದಾರೆ ನಾಡಿನಾದ್ಯಂತ ಬಹುತೇಕ ಎಲ್ಲಾ ಜಿಲ್ಲೆಗಳಿಗೆ ಇವರು ತರಬೇತಿ ನೀಡಿದ್ದಾರೆ,
.ರಂಗನಟರಾಗಿರುವ ಕೆಂಗಾರರವರು ಅದ್ಭುತ ಜಾನಪದ ಕಲಾವಿದರೂ ಆಗಿರುವ ಸಿ ಎಂ ಕೆಂಗಾರ ಜನಜಾಗೃತಿ ಹಾಡುಗಳ ಮೂಲಕ ಸಾಕಷ್ಟು ಕಾರ್ಯಕ್ರಮಗಳನ್ನು ಇವರು ನೀಡಿದ್ದಾರೆ ಎಂದು ಧಾರವಾಡದ ಸ್ಕೌಟ್ಸ್ ಮಾಸ್ಟರ್ ಎಫ್ ಬಿ ಕಣವಿ ಸೇರಿದಂತೆ, ಮಹಾದೇವ ಸತ್ತಿಗೇರಿ, ಅನೇಕರು ಅಭಿನಂದನೆಗಳನ್ನು ಸಲ್ಲಿಸಿದರು.