ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ.

ಹಾವೇರಿ : ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಡಗುಪ್ಪಿ ಯಲ್ಲಿ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ ಮಕ್ಕಳು ಶಿಕ್ಷಕರು ಭಾಗಿಯಾಗಿದ್ದರು ಅಂಬಿಗರ ಚೌಡಯ್ಯನವರು ಹಾವೇರಿ ಜಿಲ್ಲೆ ಚೌಡದಾನಪುರದಲ್ಲಿ ತಂದೆ ವಿರುಪಾಕ್ಷಪ್ಪ ತಾಯಿ ಪಂಪಾ ದೇವಿ ಅವರ ಮಗನಾಗಿ ಜನಸಿದ್ದದರು 12 ಶತಮಾನದಲ್ಲಿದ ಪ್ರಮುಖ ವಚನಕಾರರು ಇವರ ಅಂಕಿತನಾಮ ಅಂಬಿಗರ ಚೌಡಯ್ಯ ಇವರು ತುಂಗಭದ್ರಾ ನದಿ ತೀರದಲ್ಲಿ ಅಂಬಿಗ ವೃತ್ತಿಯನ್ನು ಮಾಡುತ್ತಿದ್ದರು ಇವರ ಸುಮಾರು 330 ವಚನಗಳನ್ನು ದೊರೆತಿದ್ದು ಇವರ ವಚನಗಳು ನೇರ ನಿಷ್ಠುರ ಮಾತುಗಳಿಗೆ ಹೆಸರುವಾಸಿಯಾಗಿದೆ ಅಂಬಿಗರ ಚೌಡಯ್ಯನ ಹೆಸರಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ವನು 15 ಜನವರಿ 2012ರಲ್ಲಿ ಬರಗೂರು ರಾಮಚಂದ್ರಪ್ಪ ಅವರು ಉದ್ಘಾಟಿಸಿದ್ದಾರೆ ಎಂದು ಶಾಲೆಯ ಶಿಕ್ಷಕರಾದ ಸುನೀಲ್ ಕುಮಾರ ಶಿಕ್ಷಕರು ಮಕ್ಕಳಿಗೆ ಮಾಹಿತಿನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ,ಶಿಕ್ಷಕವೃಂದ ಉಪಸ್ಥಿತರಿದ್ದರು.

  • Related Posts

    ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ

    ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…

    ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ

    ಧಾರವಾಡ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ ಶಾಖೆಯ 2024 2025 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಂಗಳವಾರ, ದಿ 04 ರಂದು ಮುಂಜಾನೆ 10:30 ಗಂಟೆಗೆ ಕನ್ನಡ ಕುಲಪುರೋಹಿತ ಆಲೂರು ವಂಕಟರಾವ ಸಾಂಸ್ಕೃತಿಕ ಭವನದಲ್ಲಿ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ…

    RSS
    Follow by Email
    Telegram
    WhatsApp
    URL has been copied successfully!