ಧಾರವಾಡ : ಪಂಚಸೇನಾ ಪಂಚಮಸಾಲಿ ಧಾರವಾಡ ಜಿಲ್ಲಾ ಘಟಕ ವತಿಯಿಂದ, ಇತ್ತೀಚೆಗೆ ನಡೆದ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಬಳಿ ಜಗಜ್ಯೋತಿ ಬಸವಣ್ಣನವರ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಜರುಗಿಸಬೇಕೆಂದು ಪಂಚಸೇನಾ ಪಂಚಮಸಾಲಿ ಧಾರವಾಡ ಜಿಲ್ಲಾ ಘಟಕ ಅಧ್ಯಕ್ಷ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿ ಮುಖಾಂತರ ಮಾನ್ಯ ಗೃಹ ಮಂತ್ರಿಗಳು ಜಿ, ಪರಮೇಶ್ವರ ಇವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಂಚಸೇನೆಯ ಪದಾಧಿಕಾರಿಗಳಾದ ರಾಜು ಮಲ್ಲೂರ, ಸುರೇಶ, ಉಣಕಲ, ಶಿವಾನಂದ ಕುಮ್ಮಿ, ಮಲ್ಲಿಕಾರ್ಜುನ ಎರಿಕೊಪ್ಪ, ಮಹೇಶ್ ಕಟ್ಟಿ, ಹನುಮಂತ ಮಟ್ಟಿ, ಕಿರಣ ಹೂಂಬಾಳ, ವಿನೋದಗೌಡ ಪಾಟೀಲ, ಬಸಯ್ಯ ಪೂಜಾರ, ಮಂಜು ಅಣ್ಣಿಗೇರಿ, ಗುರಸಿದ್ದಪ್ಪ ಅವ್ವನವರ, ಮಾಂತೇಶ ದೇಸಾಯಿ, ಮಂಜುನಾಥ ಅಂಗಡಿ, ಮಂಜುನಾಥ ಪಟ್ಟಣಶೆಟ್ಟಿ, ವಿಜಯ ಚಿಕ್ಕಲಗಿ, ಬಸವರಾಜ ಪಾಟೀಲ, ನಾಗಪ್ಪ ಮಟ್ಟಿ, ಬ್ರಹ್ಮಗೌಡ್ರು, ಲೋಕಚಂದ್ರ ಕಿಲ್ಲೇದಾದ, ಸಂಗಮೇಶ ಸವದತ್ತಿ, ಪ್ರವೀಣ ಗೌಡರ, ಮುಂತಾದವರು ಉಪಸ್ಥಿತರಿದ್ದರು.