ಧಾರವಾಡ 09 : ಕರ್ನಾಟಕ ವಿಶ್ವವಿದ್ಯಾಲಯ ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯಾದ ಅನ್ನಪೂರ್ಣೇಶ್ವರಿ ಹೊಂಗಲ್ ಅವರು ‘ಪೊಟೊಕೆಮಿಕಲ್ ಮಿಡಿಯೆಟೆಡ್ ಬಯೊಜೆನಿಕ್ ಸಿಂಥಸಿಸ್ ಆಫ್ ಸಿಲ್ವರ್ ನ್ಯಾನೋಪಾರ್ಟಿಕಲ್ಸ್ ಫ್ರಮ್ ಅಲಾಯಂಜಮ್ ಸಾಲ್ವಿಫೊಲಿಯಮ್ (ಎಲ್.ಎಫ್) ವಾಂಗ್ ಆಂಡ್ ಇಟ್ಸ್ ಆಂಟಿಕ್ಯಾನ್ಸರ್ ಪ್ರಾಪರ್ಟಿಸ್’ ಎಂಬ ವಿಷಯದ ಕುರಿತು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಸಂಶೋಧನಾ ಮಹಾಪ್ರಂದಕ್ಕೆ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.

ಇವರಿಗೆ ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ವೇದಮೂರ್ತಿ ಎ.ಬಿ‌ ಅವರು ಸಂಶೋಧನಾ ಮಾರ್ಗದರ್ಶಕರಾಗಿದ್ದರು.