ಬೆಂಗಳೂರು 02 : ಆಕಾಶವಾಣಿಯ ಅತ್ಯಂತ ಹಿರಿಯ ಅಧಿಕಾರಿ ಮತ್ತು ಲೇಖಕಿ ಡಾ. ಎಲ್.ಜಿ. ಸುಮಿತ್ರ ಅವರು ಬುಧವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಕನ್ನಡದ ಹಿರಿಯ ವಿದ್ವಾಂಸ ದಿವಂಗತ ಎಲ್. ಗುಂಡಪ್ಪ ಅವರ ಪ್ರಥಮ ಪುತ್ರಿಯಾಗಿದ್ದ ಅವರು ರೇಡಿಯೋ ಮಾಧ್ಯಮದಲ್ಲಿ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ದೆಹಲಿಯಲ್ಲಿ ವಾರ್ತಾ ವಿಭಾಗ ಮತ್ತು ಸಂಗೀತ ವಿಭಾಗಗಳ ನಿರ್ದೇಶಕರಾಗಿದ್ದರು. ನಂತರ ದೆಹಲಿಯ ಎನ್ ಸಿ ಇ ಆರ್ ಟಿ ಸಂಸ್ಥೆಯಲ್ಲಿ ಕೆಲಕಾಲ ಪ್ರಾಧ್ಯಾಪಕರಾಗಿದ್ದರು.
ಸುಮಿತ್ರ ಅವರು ಸೋದರ ಮತ್ತು ಮೂವರು ಸೋದರಿಯರನ್ನು ಅಗಲಿದ್ದಾರೆ.