
.ಬರುವ ಮಾರ್ಚ್ ತಿಂಗಳು 25ನೇ ತಾರಿಖರಂದು ಕುಲ ಪುರೋಹಿತ ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆಯಲಿರುವ 11ನೇ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸರ್ವಾ ಅಧ್ಯಕ್ಷರನ್ನಾಗಿ ಡಾ. ನಿತಿನ್ ಚಂದ್ರ ಹತ್ತಿಕಾಳ ಅವರನ್ನು ಆಯ್ಕೆ ಮಾಡಲಾಗಿದೆ. ಸಾಹಿತ್ಯ ಸಮ್ಮೇಳನಕ್ಕೆ ಜನಪ್ರಿಯ ವೈದ್ಯರಾದ ಡಾಕ್ಟರ್ ನಿತಿನ್ ಚಂದ್ರ ಹತ್ತಿಕಾಳ ರವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನ ಮಾಡಿ ಮತ್ತು ಆಮಂತ್ರಿಸಲಾಯಿತು.
ಈ ಸಂದರ್ಭದಲ್ಲಿ ಡಾಕ್ಟರ್ ನಿತಿನ್ ಚಂದ್ರ ಹತ್ತಿಕಾಳ ರವರು ಮಾತನಾಡಿ ನಾನು ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಾಗಿದ್ದರಿಂದಲೂ ರೋಗಿಗಳಿಗೆ ಅವರ ಹೆಸರುಗಳನ್ನ ಹಾಗೂ ಔಷದ್ಧಿ ಬರೆಯುತ್ತೇನೆ ಕನ್ನಡದಲ್ಲಿ ಬರೆಯುವ ರೂಢಿಯನ್ನು ಮಾಡಿಕೊಂಡಿದ್ದೇವೆ ಇದಲ್ಲದೆ ಸಣ್ಣ ಮಕ್ಕಳು ಕೂಡ ಇದನ್ನ ಹಿರಿಯರಿಗೆ ತಿಳಿಸುವಂತಹ ರೀತಿಯಲ್ಲಿ ವೈದ್ಯಕೀಯ ಭಾಷೆಯ ಕನ್ನಡದಲ್ಲಿ ಬರೆದು ಚೀಟಿಯನ್ನ ನೀಡುತ್ತೇನೆ. ಹಾಗೆ ಕುವೆಂಪು ಮತ್ತು ಜನಪ್ರಿಯ ಕನ್ನಡ ಪರ ಚಿತ್ರಗೀತೆಗಳನ್ನು ನಿಜಗುಣ ಶಿವ ಯೋಗಿಗಳ ತತ್ವಪದಗಳನ್ನ ಹಾಡುವ ಅಭ್ಯಾಸವನ್ನ ಹೊಂದಿದ್ದೇನೆ ಎಂದು ನೆನಪಿಸಿಕೊಂಡು ಹಾಡಿದರು. ಕನ್ನಡ ಸೇವೆಗೆ ಸದಾ ನಾನು ಕಂಕಣ ಬದ್ಧವಾಗಿರುತ್ತೇನೆ ಎಂದು ಹೇಳಿದರು.
ಅವರ ವ್ಯಕ್ತಿತ್ವ ಮತ್ತು ಸಾಧನೆಯ ಕುರಿತು ಮತ್ತು ಡಾಕ್ಟರ್ ನಿತಿನ್ ಚಂದ್ರ ಹತ್ತಿಕಾಳ ರವರಿಗೆ ಆಮಂತ್ರಣವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಾಕ್ಟರ್ ಲಿಂಗರಾಜರವರು ನೀಡಿ ಮಾತನಾಡಿದರು .
ಪ್ರೊಫೆಸರ್ ಕೆಎಸ್ ಕೌಜಲಗಿ, ಶಾಂತವೀರ್ ಬೆಟಗೇರಿ, ಗುರು ಪೋಳ್, ನಾರಾಯಣ ಭಜಂತ್ರಿ, ಪ್ರಮೀಳಾ ಜಕ್ಕಣ್ಣವರ್, ವಿಜಯಲಕ್ಷ್ಮಿ ಕಲ್ಯಾಣ ಶೆಟ್ಟರ್, ಎಚ್ಎಸ್ ಪ್ರತಾಪ್, ಸುನಂದಾ ದಂಡಿನ, ಬಸವೆಣಪ್ಪ ಗದ್ಯಕೇರಿ, ಪಿ ಎಸ್ ಲಗಮನ್ನವರ್, ಎಚ್ಎಸ್ ಬಡಿಗೇರ್, ಅಕ್ಬರ್ ಅಲಿ ಸೋಲಾಪುರ್, ಅಶೋಕ್ ಶೆಟ್ಟರ್, ರಾಜೇಶ್ವರಿ ಹತ್ತಿಕಾಳ ಉಪಸ್ಥಿತರಿದ್ದರು.
ಕಸಪಾ ತಾಲೂಕಿನ ಅಧ್ಯಕ್ಷರಾದ ಮಹಾಂತೇಶ್ ನರೇಗಲ್ ರವರು ಪ್ರಾಸ್ತವಿಕವಾಗಿ ಮಾತನಾಡಿದರು.
ಮಾರ್ತಾಂಡಪ್ಪ ಕತ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ಮೇಘ ಹುಕ್ಕೇರಿ ಒಂದಾರ್ಪಣೆ ಮಾಡಿದರು.
ಡಾಕ್ಟರ್ ನಿತಿನ್ ಚಂದ್ರ ಹತ್ತಿಕಾ ರವರ ಕುರಿತು ಅವರ ಗೆಳೆಯರ ಬಳಗದವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ನಂತರ ರಾಜ್ಯ ಸರ್ಕಾರದಿಂದ ಅಕ್ಕಮಹಾದೇವಿ ಪ್ರಶಸ್ತಿಯನ್ನು ಪಡೆಯಲಿರುವ ಸಾಮಾಜಿಕ ಹೋರಾಟಗಾರತಿ ಹೇಮಾ ಪಟ್ಟಣಶೆಟ್ಟಿ ರವರ ಮನೆಗೆ ಹೋಗಿ ಅವರನ್ನ ಸನ್ಮಾನಿಸಿ ಗೌರ್ವಿಸಲಾಯಿತು.
ಪ್ರೊಫೆಸರ್ ಎಸ. ಆರ್.ಗುಂಜಾಳ ರಾಷ್ಟ್ರೀಯ ಬಸವೇಶ್ವರ ಪ್ರಶಸ್ತಿ ಕೇಂದ್ರ ಸರ್ಕಾರ ನೀಡಿದ್ದಕ್ಕಾಗಿ ಅವರನ್ನು ಸನ್ಮಾನಿಸಿ ಗೌರವಿಸಿದರು.