ಹುಬ್ಬಳ್ಳಿ 12 : ದಿ 31.12.2024 ರಂದು ಮುಂಜಾನೆ 09.00 ಗಂಟೆಗೆ ತಾವು ಇದ್ದ ಬೈರಿದೇವರಕೊಪ್ಪ ವೈಷ್ಣವಿದೇವಿ ಗುಡಿ ಹಿಂಭಾಗ ಸಮೃದ್ಧಿ ಬಡಾವಣೆ 2ನೇ ರಸ್ತೆಯಲ್ಲಿ ಇರುವ ತಮ್ಮ ಮನೆಗೆ ಕೀಲಿ ಹಾಕಿಕೊಂಡು ತಮ್ಮ ಸಹೋಧರಿಯೊಂದಿಗೆ ಹುಬ್ಬಳ್ಳಿ ಸಿದ್ದಾರೂಡಮಠಕ್ಕೆ ಹೋಗಿ ಮರಳಿ. ದಿ 02.01.2025 ರ ಮುಂಜಾನೆ ತಮ್ಮ ಮನೆಗೆ ಬರುವಷ್ಟರಲ್ಲಿ ಯಾರೋ ಕಳ್ಳರು ಪಿದ್ಯಾಧಿದಾರರ ಮನೆಗೆ ಹಾಕಿದ ಮುಂಬಾಗಿಲ ಕೀಲಿಯನ್ನು ಮೀಟಿ ತೆಗೆದು ಮನೆಯಲ್ಲಿ ಪ್ರವೇಶ ಮಾಡಿ ಅಲ್ವೇರಾದಲ್ಲಿ ಇದ್ದ ಸೇಪ್ ಲಾಕರನ್ನು ಮೀಟಿ ತೆಗೆದು ಆದರಲ್ಲಿದ್ದ ಒಂದು ಬಂಗಾರದ ನೆಕ್ಸಸ್, ತೂಕ 10 ಗ್ರಾಂ: 65,000/-ರೂ ಮತ್ತು ನಗದು ಹಣ 60,000/-ರೂ ವೇದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ.

Hubli-Dharwad City Police Commissionerate APMC Navnagar Police Station Hubli
Three cases have been detected

ದಿ 14.12.2024 ರಂದು ಸಂಜೆ 7.30 ಗಂಟೆಗೆ ಹುಬ್ಬಳ್ಳಿ ಬೈರಿದೇವರಕೊಪ್ಪ ಎಸ್.ಆ‌ ನಗರ, ಅಂಕೋಲೇಕರ್ ಲೇಔಟದಲ್ಲಿಯ ತಮ್ಮ ಮನೆಗೆ ಕೀಲಿ ಹಾಕಿಕೊಂಡು ಹೋಮ ಮಾಡಿಸುವ ಕುರಿತು ಮಂಡ್ಯ ಜಿಲ್ಲೆಯ ಮದ್ದೂರ ತಾಲೂಕ ಗೌಡಗೇರಿಗೆ ಹೋಗಿ ಮರಳಿ ದಿ 16.12.2024 ರಂದು ಮುಂಜಾನೆ 08.30 ಗಂಟೆಗೆ ತಮ್ಮ ಮನೆಗೆ ಮರಳಿ ಬರುವಷ್ಟರಲ್ಲಿ ಯಾರೋ ಕಳ್ಳರು ದೂರುದಾರರ ಮನೆ ಹಿಂಬಾಗಿಲನ್ನು ಮೀಟಿ ತೆಗೆದು ಬೆಡ್ ರೂಮದಲ್ಲಿಯ ಲಾಖ್ ಮಾಡಿದ ವಾಲ್ಟರೂಪಗಳನ್ನು ಮೀಟಿ ಡ್ರಾಗಳನ್ನು ತೆಗೆದು ಅದರಲ್ಲಿದ್ದ ನಗದು ಹಣ 80,000/-ರೂ, ಒಂದು ರೂ ಮುಖಬೆಲೆಯ 101 ನಾಣ್ಯಗಳು ಮತ್ತು ನಾಲ್ಕು ಬೆಳ್ಳಿ ಗುಂಡಗಡಿಗೆಗಳು. ಒಟ್ಟು 70 ಗ್ರಾಂ ತೂಕ. ಆಕಿ: 4,000/-ರೂಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ.

Hubli-Dharwad City Police Commissionerate APMC Navnagar Police Station Hubli
Three cases have been detected

ದೂರುದಾರರು ತಮ್ಮ ಮದುವೆ ಪ್ರಯುಕ್ತ ದಿನಾಂಕ: 14.08.2024 ರಂದು ರಾತ್ರಿ 9.00 ಗಂಟೆಗೆ ಹುಬ್ಬಳ್ಳಿ ನವನಗರ ಎಂ.ಐ.ಜಿ ಕಾಲನಿ ಮನೆ ನಂ: 385 ನೇದ್ದರಲ್ಲಿ ತಾವು ವಾಸವಿದ್ದ ಮನೆಗೆ ಕೀಲಿ ಹಾಕಿಕೊಂಡು ಹೈದ್ರಾಬಾದಗೆ ಹೋಗಿ ಮರಳಿ ದಿ 28.08.2024 ರಂದು ಮುಂಜಾನೆ 7.00 ಗಂಟೆಗೆ ಬರುವಷ್ಟರಲ್ಲಿ ಯಾರೋ ಕಳ್ಳರು ದೂರುದಾರರ ಮನೆಗೆ ಹಾಕಿದ ಕೀಲಿಯನ್ನು ಡೂಪ್ಲಿಕೇಟ ಕೀಯಿಂದ ತೆಗೆದು ಮನೆಯಲ್ಲಿ ಟ್ರಜರಿಯಲ್ಲಿ ಇದ್ದ ಸೇಪ್ ಲಾಕರನ್ನು ಮೀಟಿ, ಅದನ್ನು ಸಹ ಡೂಪ್ಲಿಕೇಟ ಕೀಯಿಂದ ತೆಗೆದು ಅದರಲ್ಲಿದ್ದ 35 ಗ್ರಾಂ ತೂಕದ ಬಂಗಾರದ ಆಭರಣಗ ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಮೂರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಆರೋಪಿಗಳನ್ನು ಹಿಡಿದ ಪೋಲೀಸರು.ಕಾನೂನು ಸಂಘರ್ಷಕ್ಕೆ ಒಳಪಟ್ಟ17 ವಷ೯ದ ಬಾಲಕನ ಹೆಸರು ಬಹಿರಂಗ ಪಡಿಸಿಲ್ಲ