ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಉತ್ಥಾನ ಭಾರತ ಸಾಂಸ್ಕೃತಿಕ ಕಾರ್ಯಕ್ರಮ.

ಧಾರವಾಡ 12 : ರಾಷ್ಟ್ರೋತ್ಥಾನ ವಿದ್ಯಾಲಯ ಮುಮ್ಮಿಗಟ್ಟಿ, ಉತ್ಥಾನ ಭಾರತ ಎಂಬ ಶೀರ್ಷಿಕೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆ ಖ್ಯಾತ ಮನೋವೈದ್ಯರಾದ ಆನಂದ ಪಾಂಡುರಂಗಿ ದೀಪ ಪ್ರಜ್ವಲನೆ ಮಾಡಿ ವಿದ್ಯಾಥಿ೯ಗಳನ್ನು ಉದ್ದೇಶಿಸಿ ಮಾತನಾಡಿದ ಅವರು. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ರಾಷ್ಟ್ರೋತ್ಥಾನ ಶಾಲೆಗಳು ವಿಶಿಷ್ಟವಾದಂತಹ ಕಾರ್ಯ ಯೋಜನೆಗಳನ್ನು ಹಾಕಿಕೊಂಡಿದೆ ಇಂದು ಪೋಷಕರು ಮಕ್ಕಳಿಗೆ ಮಾನವೀಯ ಮೌಲ್ಯಗಳು ಕಲಿಸುವುದು ಬಹಳಷ್ಟು ಮಹತ್ವವಾಗಿದೆ ಆ ಮೌಲ್ಯಗಳನ್ನು ಕಲಿಯಬೇಕಾದರೆ ಇಂತಹ ಶಾಲೆಗಳು ಪೋಷಕರ ಆಯ್ಕೆಯಾಗಬೇಕು ರಾಷ್ಟ್ರೋತ್ಥಾನ ಶಾಲೆಯ ಪೋಷಕರು ಭಾಗ್ಯಶಾಲಿಗಳು ಎಂದು ತಿಳಿಸುತ್ತಾ, ಮಕ್ಕಳಿಗೆ ಮನೆಯಲ್ಲಿ ಪುಸ್ತಕವನ್ನು ಓದುವಂತಹ ಹವ್ಯಾಸವನ್ನು ಬೆಳೆಸಬೇಕು ಮನೆಯಲ್ಲಿ ಒಂದು ಚಿಕ್ಕದಾದಂತಹ ಪುಸ್ತಕಗಳ ಸಂಗ್ರಹವನ್ನು ಮಾಡಿಕೊಳ್ಳಬೇಕು ಎಂಬ ಕಿವಿ ಮಾತನ್ನು ಹೇಳಿದರು. 1 ರಿಂದ 5 ನೇ ತರಗತಿಯಲ್ಲಿ ಆರಾಧ್ಯ ಪೂಜಾರ ಹಾಗೂ 6 ರಿಂದ 10ನೇ ತರಗತಿಯಲ್ಲಿ ಗುರುಪ್ರಸಾದ ಸವಣೂರು ಈ ಇಬ್ಬರು ವಿದ್ಯಾರ್ಥಿಗಳಿಗೆ ಆದರ್ಶ ವಿದ್ಯಾರ್ಥಿಗಳು ಎಂದು ಆಯ್ಕೆ ಮಾಡಿ ಬಹುಮಾನವನ್ನು ಕೊಟ್ಟು ಪುರಸ್ಕರಿಸಲಾಯಿತು.

ವಿದ್ಯಾಲಯ ಹಾಗೂ ವಿದ್ಯಾ ಕೇಂದ್ರದ ಕಾರ್ಯದರ್ಶಿಗಳಾದ ರಾಘವೇಂದ್ರ ಅಂಬೇಕರ , ವಿದ್ಯಾ ಕೇಂದ್ರದ ಆಡಳಿತ ಅಧಿಕಾರಿ ಕುಮಾರಸ್ವಾಮಿ ಕುಲಕರ್ಣಿ ಮತ್ತು ವಿದ್ಯಾಲಯದ ಮುಖ್ಯೋಪಾಧ್ಯಯ ಮಹಾಂತೇಶ ಮಠಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ರಾಘವೇಂದ್ರ ಅಂಬೇಕರ ಮಾತನಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ ಹಾಗೂ ರಾಷ್ಟ್ರ ಪರಿಷತ್ ಗೆ 60 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಇದ್ದೇವೆ. ಇಂದು ಸಂಘ ಹಾಗೂ ಪರಿಷತ್ ರಾಷ್ಟ್ರದ ಅಭಿವೃದ್ಧಿಗಾಗಿ ಅನೇಕ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದ್ದು, ಈ ವರ್ಷ ಪಂಚ ಪರಿವರ್ತನೆ ಎಂಬ ಶೀರ್ಷಿಕೆಯಲ್ಲಿ ತನ್ನ ಕಾರ್ಯ ಯೋಜನೆಗಳನ್ನು ಮತ್ತಷ್ಟು ಉತ್ಸಾಹದಿಂದ ಮಾಡುತ್ತಿದೆ ಎಂದರು.

ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಕಾರ್ಯಕ್ರಮದಲ್ಲಿ ವಿದ್ಯಾಲಯದ ಸಹ ಮುಖ್ಯೋಪಾಧ್ಯಾಯರಾದ ಪದ್ಮಾವತಿ ಜೈನರ ಪ್ರಾಥಮಿಕ ವಿಭಾಗದ 1 ರಿಂದ 5 ನೇ ತರಗತಿಯ ಶೈಕ್ಷಣಿಕ ಮೇಲ್ವಿಚಾರಕರಾದ ಎನ್.ಎಂ ಜಂತಲಿಯವರು, ಶಾಲೆ ಹಿತೈಷಿಗಳಾದ ರೇಖಾ ಅಂಬೇಕರ ಪಾರ್ವತಿ ದಂಡಿನ, ಕ್ರಿಯಾ ಸಮಿತಿ ಹಾಗೂ ಸ್ಥಾಯಿ ಸಮಿತಿಯ ಸದಸ್ಯರು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿ 1900 ಜನರು ಉಪಸ್ಥಿತರಿದ್ದರು.

ರೇಖಾ ಯಲಿಗಾರ ಅತಿಥಿಗಳನ್ನು ಸ್ವಾಗತಿಸಿದರು ಶಾಲಾ ವರದಿ ವಾಚನ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದಂತಹ ಮುಖ್ಯೋಪಾಧ್ಯಾಯರು ಶಾಲೆಯಲ್ಲಿ ಶಾಲೆಯು ಹಾಕಿಕೊಂಡಿರುವ ವಿವಿಧ ಚಟುವಟಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವು ವಿಶೇಷವಾಗಿ ಇರುವಂತದ್ದು ಮಕ್ಕಳ ಪ್ರತಿಭೆ ಅನಾವರಣ ಇಲ್ಲಿ ಆಗುವುದು ಎಂದರು . ಕಾರ್ಯಕ್ರಮದ ನಿರೂಪಣೆ ಮಂಜುಳಾ ಹಂಪಣ್ಣವರ ನಡೆಸಿಕೊಟ್ಟರು.ವಂದನಾರ್ಪಣೆಯನ್ನು ಪೂರ್ಣಿಮಾ ದೊಡ್ಡಮನಿ ಮಾಡಿದರು.

  • Related Posts

    ಬಂಧಿಖಾನೆ ಮನಪರಿವರ್ತನೆಗಿರುವ ಒಂದು ಅವಕಾಶ

    ಧಾರವಾಡ:– ಸಾಧನಾ ಮಹಿಳಾ ಮತ್ತು ‌ಮಕ್ಕಳ ಅಭಿವೃದ್ಧಿ ಸಂಸ್ಥೆ ,ಪ್ರೀಜನ್ ಮಿನಿಸ್ಟರಿ ಇಂಡಿಯಾ – ಧಾರವಾಡ ಮತ್ತು ವಿನ್ಸೆಂಟ್ ಡಿ ಪೌಲ‌ ನಿರ್ಮಲನಗರ ಧಾರವಾಡ ಕೇಂದ್ರ ಕಾರಾಗೃಹ ಧಾರವಾಡ ಇವರ ಸಹಯೋಗದಲ್ಲಿ ಬಂಧಿಖಾನೆ ಮಹಿಳಾ ನಿವಾಸಿಗಳೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‌ಆಯೋಜಿಸಲಾಗಿತ್ತು.…

    ಹು -ಧಾ ಮಹಾನಗರ ಪಾಲಿಕೆಯ ಅಧಿಕಾರಿಗಳು ಜನ್ನತ್ ನಗರಕ್ಕೆ ಭೇಟಿ

    ಧಾರವಾಡ 21 : ಎಸ್.ಯು.ಸಿ.ಐ.ಕಮ್ಯುನಿಸ್ಟ್ ಪಕ್ಷದ ಮನವಿಗೆ ಸ್ಪಂದಿಸಿ ಜನ್ನತ್ ನಗರಕ್ಕೆ ಭೇಟಿಮಾಡಿ ಗಟಾರ ಸಮಸ್ಯೆ ಹಾಗೂ ಕಸ ವಿಲೇವಾರಿ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ ಪಾಲಿಕೆ ಅಧಿಕಾರಿಗಳು. ಜನ್ನತ್ ನಗರದ ಗಟಾರ ಸಮಸ್ಯೆ ಹಾಗೂ ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು…

    RSS
    Follow by Email
    Telegram
    WhatsApp
    URL has been copied successfully!