ಧಾರವಾಡ 01: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ-2025 ರ ಅಂಗವಾಗಿ ಹುಬ್ಬಳ್ಳಿ ಗಾಮನಗಟ್ಟಿಯ ಭಾರೀ ವಾಹನ ಚಾಲಕರ ತರಬೇತಿ ಸಂಸ್ಥೆಯಲ್ಲಿ ವಾಹನ ಚಾಲಕರಿಗೆ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಧಾರವಾಡ (ಪಶ್ಚಿಮ) ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಉಪಸಾರಿಗೆ ಆಯುಕ್ತ ನೂರ್ ಮೊಹಮ್ಮದ್ ಬಾಷಾ ಅವರು ರಸ್ತೆ ಅಪಘಾತಕ್ಕೆ ಕಾರಣ ಹಾಗೂ ಸಂಚಾರಿ ನಿಯಮಗಳನ್ನು ವಾಹನ ಚಾಲಕರಿಗೆ ಮನವರಿಕೆ ಮಾಡಿ, ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ದ್ವಿಚಕ್ರ ವಾಹನ ಬಳಸುವ ಪೋಷಕರಿಗೆ 4 ವರ್ಷದ ಒಳಗಿನ ಮಕ್ಕಳಿಗೆ ಸೇಪ್ಟಿ ಹಾರ್ನೆಸ್ನನ್ನು ಬಳಸಿಕೊಂಡು ವಾಹನವನ್ನು ಚಲಾಯಿಸುವಂತೆ ವಾಹನ ಚಾಲಕರಿಗೆ ಸಲಹೆ ನೀಡಿದ್ದರು.
ಕಾರ್ಯಕ್ರಮದಲ್ಲಿ ಕಛೇರಿಯ ಸಿಬ್ಬಂದಿಗಳಾದ ರಮೇಶ ಮಾಳಗಿ, ಹಿಮೋವಾನಿ, ಸಚಿನ್ ಹುಲಕೋಟಿ, ವಿಜಯ ಕಮ್ಮಾರ, ಅಬ್ಬಾಸಾಹೇಬ್ ಅವರು ಭಾಗವಹಿಸಿದ್ದರು.