ಧಾರವಾಡ : ಹೊಸೊರ ವಕೀಲರ ಸಂಘದ ವೃತ್ತಿ ನಿರತ ವಕೀಲರ ಮಾರಣಾಂತಿಕ ಹತ್ಯೆಯನ್ನು ಧಾರವಾಡ ವಕೀಲರ ಸಂಘ ತೀರ್ವವಾಗಿ ಖಂಡಿಸುತ್ತದೆ ವಕೀಲರ ರಕ್ಷಣೆ ಮತ್ತು ಭದ್ರತೆಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಆಗ್ರಹಿಸಿ ನಗರದಲ್ಲಿ ಜಿಲ್ಲಾ ವಕೀಲರ ಸಂಘದವರು ಇಂದು ಕೆಲಕಾಲ ರಸ್ತಾರೊಕೊ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಅಪಿ೯ಸಿದರು.
ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೆ ಮತ್ತು ಮಾರಾಣಾಂತಿಕ ಹತ್ಯೆ ತೀರ್ವವಾಗಿ ಹೆಚ್ಚುತ್ತಿವೆ . ಸಮಾಜದ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವಕೀಲರಿಗೆ ರಕ್ಷಣೆ ಮರಿಚಿಕೆಯಾಗಿದೆ . ಕಾನೂನಿನ ರಕ್ಷಕರಾಗಿ ಮತ್ತು ಪ್ರತಿಪಾದಕರಾಗಿ ಶ್ರಮೀಸುತ್ತಿರುವ ವಕೀಲ ಬಂಧುಗಳು ಇಂದು ಆತಂತ್ರರಾಗಿದ್ದಾರೆ . ಇದಕ್ಕೆ ನಿನ್ನೆ ನಡೆದ ಹೊಸೂರ್ ವಕೀಲ ಹತ್ಯೆ . ಈ ಘಟನೆಯನ್ನು ಖಂಡಿಸಿ ಇಂದು ಧಾರವಾಡ ಜಿಲ್ಲಾ ವಕೀಲರ ಸಂಘದಲ್ಲಿ ವಿಶೇಷ ತುರ್ತು ಸಭೆ ನಡೆಸಲಾಯಿತು.
ಈ ಒಂದು ಹಿನಾಯ , ಅಮಾನುಷ , ಭಯಾನಕ ಕೃತ್ಯವನ್ನು ಸಭೆಯು ಒಮ್ಮತದಿಂದ ಖಂಡಿಸಲಾಯಿತು .ವಕೀಲರ ಮೇಲೆ ಇಂತಹ ನಡೆಯದಂತೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಭದ್ರತೆ ಒದಗಿಸಬೇಕು ಸಂಘವು ಆಗ್ರಹಿಸಿದೆ.
ಸಂಘದ ಸದಶ್ಯರಾದ ಆಶಿಷ್ ಮುಗದಮ್,ಎಸ್ . ಎಮ್ . ಹೆಬ್ಬಳ್ಳಿ , ಅಶೋಕ ದೊಡ್ಡಮನಿ, ಪ್ರಕಾಶ ಭಾವಿಕಟ್ಟಿ ಸೇರಿದಂತೆ ಸವ೯ ವಕೀಲರು ಭಾಗವಹಿಸಿದ್ದರು.