ಧಾರವಾಡ 27 : ಮತದಾನದ ಮಹತ್ವದ ಕುರಿತು ಡಾ. ಎನ್ ಬಿ ನಾಲತವಾಡ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಅವರು ಸ್ಥಳೀಯ ಅಲಿ ಪಬ್ಲಿಕ್ ಶಾಲೆಯ ಧಾರವಾಡ ಹಾಗೂ ಅಸೋಸಿಯೇಷನ್ ಒಫ್ ಮುಸ್ಲಿಂ ಪ್ರೊಫೆಷನಲ್ ಧಾರವಾಡ ಶಾಖೆಯ ವತಿಯಿಂದ ಆಯೋಜಿಸಲ್ಪಟ್ಟ ಕಾರ್ಯಗಾರದಲ್ಲಿ ಮಾತನಾಡಿದರು.
ಭಾರತದ ಸವಿಧಾನ ಹಾಗೂ ಅದರ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.
ಮೊಹಮ್ಮದ್ ಅಫಜಲ್ ಅವರು ಧ್ಯೇಯ ಉದ್ದೇಶಗಳನ್ನು ಮತ್ತು ರಾಷ್ಟ್ರೀಯ ಭಾವೈಕ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಧಾರವಾಡ ಚಾಪ್ಟರಿನ ಮುಖ್ಯಸ್ಥರಾದ ಡಾಕ್ಟರ್ ಮುಸದ್ಧಿಕಾ ಖಾನಂ ರವರು ವಿದ್ಯಾರ್ಥಿಗಳಿಗೆ ಸಂವಿಧಾನದ ಕುರಿತು ಮಾಹಿತಿ ನೀಡುತ ಮೂಲಭೂತ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ರೇಷ್ಮಾ ಸೋನೆ ಖಾನ್ ವಹಿಸಿ ಮಾತನಾಡಿದ ಅವರು ಅಯೋಜಿಸಲ್ಪಟ್ಟ ಕಾರ್ಯಗಾರವು ನಮ್ಮ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸಾಕಷ್ಟು ಜ್ಞಾನವನ್ನು ಒದಗಿಸಿದೆ. ಮತ್ತು ಎ ಎಮ್ ಪಿ ವತಿಯಿಂದ ಇಂತಹ ವಿಭಿನ್ನ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಅಯೋಜಿಸಲು ಮನವಿ ಮಾಡಿದರು.
ಈ ಕಾರ್ಯಕ್ರಮವು ಕುಮಾರ್ ಮೊಹಮ್ಮದ್ ಅಲಿ ಕುಂಬಿ ರವರ ಕುರಾನ್ ಪಠಣ ದಿಂದ ಆರಂಭವಾಯಿತು. ಕಾರ್ಯಕ್ರಮದ ಕುರಿತು ಕುಮಾರ ತನ್ವೀರ್ ಅಲ್ಮೆಲ್, ಹಬೀಬಾ ಕಾಂಟ್ರಾಕ್ಟರ್ ಮತ್ತು ಶಾಫಿನ್ ಸುಂಕದ.
ಇವರು ಕಾರ್ಯಕ್ರಮದ ಕುರಿತು ಪ್ರಶಂಸೆ ಮಾಡುತ್ತಾ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಅಯೋಜಿಸಬೇಕೆಂದು ತಮ್ಮ ಅನಿಸಿಕೆಯನ್ನು ಹೇಳಿದರು. ಈ ಕಾರ್ಯಗಾರದಲ್ಲಿ ಶಿಕ್ಷಕರು ಮತ್ತು 7ನೇ, 8ನೇ,ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿ ಈ ಕಾರ್ಯಗಾರವನ್ನು ಯಶಸ್ವಿಗೊಳಿಸಿದರು.
ಮಾರೂಫಾ ಇನಾಮ್ದಾರ್ ಅವರು ನಿರೂಪಣೆ ಮಾಡಿದರು. ಮತ್ತು ಜೈತುನಬಿ ಬಲಬಟ್ಟಿ ಮೇಡಂ ಅವರು ವಂದಿಸಿದರು.