ಧಾರವಾಡ : ನುಗ್ಗಿಕೇರಿ ದೇವಸ್ಥಾನದ ಪರವಾಗಿ ಹಾಗೂ ಮಾಳಮಡ್ಡಿಯ ಪ್ರಶಾಂತ ಬಂಜೆತನ ಹಾಗೂ ಐವಿಎಫ್ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಉಚಿತ ಬಂಜೆತನ ತಪಾಸಣೆ ದಿ 23 ನಗ್ಗಿಕೇರಿ ಪ್ರಾಣದೇವರ ಸನ್ನಿಧಾನದಲ್ಲಿ ಬಂಜೆತನ ಚಿಕಿತ್ಸಾ ಶಿಬಿರವನ್ನು ಬೆಳಿಗ್ಗೆ 9 ಗಂಟಿಗೆ ಹಮ್ಮಿಕೊಂಡಿದೆ ಎಂದು ಡಾ ಕೋಮಲ ಕುಲಕರ್ಣಿ ತಿಳಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದೊಂದು ಸೇವಕಾರ್ಯಕ್ರಮವಾಗಿದ್ದು, ಜನರು ಸದುಪಯೋಗ ಪಡೆಯಬೇಕಾಗಿದೆ. ಈಗಿನ ದಿನಗಳಲ್ಲಿ ಬಂಜೆತನದ ರೋಗಿಗಳು ಹೆಚ್ಚಾಗಿ 60% ಗಿಂತ ಹೆಚ್ಚು ಯಶಸ್ವಿಯಾಗಿದ್ದು ಪ್ರಶಾಂತ ಆಸ್ಪತ್ರೆಯ ವೈದ್ಯರಾದ ಡಾ.ಕೋಮಲ ರೇವಣಕರ (ಕುಲಕರ್ಣಿ) ಯವರು ಮುಂಜಾನೆ 9 ರಿಂದ ಮಧ್ಯಾಹ್ನ 2 ರ ವರೆಗೆ, ತಪಾಸಣೆ ಮಾಡುವರು. ಚಿಕ್ಕಮಕ್ಕಳ ತಜ್ಞರು ಹಾಜರಿದ್ದು ಮಕ್ಕಳನ್ನು ಪರೀಕ್ಷಿಸುವರು ಅದರೊಂದಿಗೆ HB, ಎಲುಬು ಸಾಂದ್ರತೆ, ಶುಗರ ಪರೀಕ್ಷೆ, ಥೈರಾಯ್ಡ್ ಪರೀಕ್ಷೆ ಮಾಡಲಾಗುವದು. ಪತ್ರಿಕಾಗೋಷ್ಠಿಯಲ್ಲಿ ಡಾ ಸಂಧ್ಯಾ ಕುಲಕರ್ಣಿ ಇದ್ದರು.