ಧಾರವಾಡ 27 : ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಧಾರವಾಡ ಹೈಕೋರ್ಟ್‌ನಲ್ಲಿ ಇಂದು ಆರಂಭಗೊಂಡಿದೆ. ಸ್ನೇಹಮಯಿ ಕೃಷ್ಣ ಅವರ ಪರ ವಕೀಲರಾದ ಮಣಿಂದರ್ ಸಿಂಗ್ ಅವರು ಸುದೀರ್ಘ ವಾದ ಮಂಡಿಸುತ್ತಿದ್ದಾರೆ . ಅಭಿಷೇಕ ಮನು ಸಿಂಘಿ ಅವರು ಸಿಎಂ ಸಿದ್ದರಾಮಯ್ಯ ಪರ ವಾದ ಮಂಡಿಸುತ್ತಿದ್ದಾರೆ.
ಕಪಿಲ್ ಸಿಬಲ್ ಅವರು ರಾಜ್ಯ ಸರ್ಕಾರದ ಪರ ವಿಶೇಷ ಪ್ರತಿನಿಧಿಯಾಗಿ ಕೋರ್ಟ್ ಕಲಾಪಕ್ಕೆ ವೀಡಿಯೋ ಕಾನ್ಸರನ್ಸ್ ಮುಖಾಂತರ ಹಾಜರಾಗಿದ್ದಾರೆ . ಇನ್ನು ದುಷ್ಯಂತ ಧವೆ ಅವರು ವಿವಾದಿತ ನಿವೇಶನದ ಮೂಲ ಮಾಲೀಕರ ಪರ ವಕೀಲರಾಗಿದ್ದು , ಅವರೂ ವೀಡಿಯೋ ಕಾನ್ಸರನ್ಸ್ ಮೂಲಕ ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದಾರೆ.
ಕಳೆದ ವಾರ ಲೋಕಾಯುಕ್ತ ಅಧಿಕಾರಿಗಳಿಗೆ ಇಲ್ಲಿಯ ವರೆಗೆ ಕೈಗೊಂಡ ತನಿಖಾ ವರದಿ ಸಲ್ಲಿಸಿವಂತೆ ಸೂಚಿಸಿ ನ್ಯಾಯಾಲಯ ವಿಚಾರಣೆ ಮುಂದೂಡಿತ್ತು. ನ್ಯಾಯಾಲಯದ ನಿರ್ದೇಶನದಂತೆ ಲೋಕಾ ಇಂದು ಮುಚ್ಚಿದ ಲಕೋಟೆಯಲ್ಲಿ 3೦೦ಕ್ಕೂ ಹೆಚ್ಚು ಪುಟಗಳ ತನಿಖಾ ವರದಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ.ಮೈಸೂರು ಎಸ್.ಪಿ ಉದೇಶ ಹಾಗೂ ಸಿಬ್ಬಂದಿಗಳು ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಪ್ರಮುಖ ದ್ವಾರದಲ್ಲಿ ಹೈ ಸೆಕ್ಯೂರಿಟಿ ನೀಡಿ, ಬಿಗಿ ಪೊಲೀಸ್ ಬಂದೋಬಸ್ತ ಒದಗಿಸಲಾಗಿದೆ.