ಬೈಲಹೊಂಗಲ 26 : ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ 76 ನೆಯ ಗಣರಾಜ್ಯೋತ್ಸವ ಆಚರಿಸಲಾಯಿತು. ಮಹಾತ್ಮಾ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ಮುಖ್ಯ ಶಿಕ್ಷಕರಾದ ಎನ್.ಆರ್.ಠಕ್ಕಾಯಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ವಿಶ್ವದಲ್ಲಿಯೇ ವಿಶಿಷ್ಟವಾದ ಭಾರತದ ಸಂವಿಧಾನದ ಬಗ್ಗೆ ನಮಗೆಲ್ಲ ಗೌರವ, ಹೆಮ್ಮೆ ಇರಬೇಕು ಎಂದರು. ಗ್ರಾಮದ ಗಣ್ಯರು, ಮಾಜಿ ಮತ್ತು ಹಾಲಿ ಸೈನಿಕರು, ಶಿಕ್ಷಕರು, ಪಾಲಕರು, ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ಗುರುನಗೌಡರ ಇವರ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪಥಸಂಚಲನ ಎಲ್ಲರ ಗಮನ ಸೆಳೆಯಿತು ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಜನರ ಮೆಚ್ಚುಗೆಗೆ ಪಾತ್ರವಾಯಿತು. ಸಂವಿಧಾನದ ಮಹತ್ವ, ಭಾರತೀಯತೆ, ದೇಶಪ್ರೇಮದ ಕುರಿತು ಸುಪ್ರಿಯಾ ಕುಲಕರ್ಣಿ, ರಕ್ಷಾ ಬಾರ್ಕಿ, ಕೀರ್ತಿ ಕುಲಕರ್ಣಿ ಮಾತನಾಡಿದರು. ಸೀಮಾ ಹೊಸೂರ, ಲಕ್ಷ್ಮೀ ಶೀಗಿಹಳ್ಳಿ ದೇಶಭಕ್ತಿ ಗೀತೆ ಹಾಡಿದರು.ಎಸ್.ಡಿ.ಎಂ.ಸಿ ಸದಸ್ಯರಾದ ರಾಮಲಿಂಗಪ್ಪ ಮೆಕ್ಕೇದ ಮಾತನಾಡಿ ಸಂವಿಧಾನದಲ್ಲಿ ಇರುವ ಮೌಲ್ಯಗಳನ್ನು ಅರಿತುಕೊಂಡು ಎಲ್ಲರೂ ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಿನಾಯಕ ಬಡಿಗೇರ, ಸದಸ್ಯರಾದ ರಮೇಶ ಸೂರ್ಯವಂಶಿ, ಮಹಾಂತೇಶ ಸೊಗಲದ, ರವೀಂದ್ರ ಮನಗುತ್ತಿ, ಮಂಜುಳಾ ಕುಲಕರ್ಣಿ, ನಿಂಗಪ್ಪ ಅಳಗೋಡಿ, ದುಂಡಪ್ಪ ಮಡಿವಾಳರ, ಗ್ರಾಮ ಪಂಚಾಯತಿ ಸದಸ್ಯರಾದ ಮಹಾಂತೇಶ ಹುಣಶೀಕಟ್ಟಿ, ರಾಜಶೇಖರ ದೊಡವಾಡ, ಗಂಗಪ್ಪ ಅಡಿನ, ಶಿಕ್ಷಕರಾದ ಜಗದೀಶ ನರಿ, ಹೇಮಲತಾ ಪುರಾಣಿಕ, ಶಿವಾನಂದ ಬಳಿಗಾರ, ಮಂಜುಳಾ ಕಾಳಿ, ಸಂತೋಷ ಸಾಳುಂಕೆ, ಜ್ಯೋತಿ ಅಳಗೋಡಿ, ಅಡುಗೆ ಸಿಬ್ಬಂದಿಗಳಾದ ಮಹಾದೇವಿ ಸೊಗಲದ, ಗಂಗವ್ವ ಅಳಗೋಡಿ ಉಪಸ್ಥಿತರಿದ್ದರು. ಚೇತನ ಗಡಾದ ಸ್ವಾಗತಿಸಿದರು. ಶ್ರದ್ದಾ ಹೊಂಗಲ ನಿರೂಪಿಸಿದರು. ಪಲ್ಲವಿ ಸೂರ್ಯವಂಶಿ ವಂದಿಸಿದರು.