ಧಾರವಾಡ : ಜಯ ಕರ್ನಾಟಕ ಸಂಘಟನೆಯ ಧಾರವಾಡ ಜಿಲ್ಲಾ ಘಟಕದ ವತಿಯಿಂದ ದಿ 23 ರಂದು ಧಾರವಾಡದ ಕರ್ನಾಟಕ ಕಲಾಮಹಾವಿದ್ಯಾಲಯದ ಮಹಾ ದ್ವಾರದ ಎದುರಿಗೆ ಸಭಾಕಾರ್ಯಕ್ರಮವನ್ನು ಏರ್ಪಡಿಸಿಲಾಗಿದೆ ಎಂದು ಸುಧೀರ ಮುಧೋಳ ತಿಳಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವನ್ನು ಮಾನ್ಯ ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿಯವರು ಉದ್ಘಾಟಿಸಿಲಿದ್ದಾರೆ. ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಹಾಗೂ ಡಿಜೆ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡರವರು ಉದ್ಘಾಟಿಸುವರು, ಧಾರವಾಡ ನಗರ ಶಾಸಕರಾದ ಅರವಿಂದ ಚ ಬೆಲ್ಲದ ರವನು,ಹು-ಧಾ, ಪೂರ್ವ ಕ್ಷೇತ್ರದ ಶಾಸಕರಾದ ಪ್ರಸಾದ ಅಬ್ಬಯ್ಯನವರು. ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್ ಎಚ್ ಕೋನರೆಡ್ಡಿಯವರು, ಮಾಜಿ ಶಾಸಕರಾದ ಅಮೃತ ದೇಸಾಯಿಯವರು, ಹು-ಧಾ, ಕಮೀಷನರೆಟನ ಪೊಲೀಸ್ ಆಯುಕ್ತರಾದ ಎನ್ ಶಶಿಕಕುಮಾರ ರವರು ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳು ಹಾಗೂ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯ ಕರ್ನಾಟಕ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಡಾ. ಬಿ. ಎನ್. ಜಗದೀಶ ರವರು ವಹಿಸಲಿದ್ದಾರೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ಕನ್ನಡ ನಾಡಿಗೆ ಶ್ರಮಿಸಿದ ಹಾಗೂ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಗಣ್ಯರು ಸನ್ಮಾನಿಸಿ ಗೌರವಿಸಲಿದ್ದಾರೆ ಎಂದರು. ನಂತರ ಪ್ರಸಿದ್ದ ಡಿ. ಜೆ, ಯೊಂದಿಗೆ ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ಕುರಿತಾದ ಹಾಡುಗಳೊಂದಿಗೆ ಮೆರವಣಿಗೆಯು ಕೆ.ಸಿ.ಡಿ. ವೃತ್ತದಿಂದ ಪಾರಂಭಗೊಂಡು ಎಲ್.ಐ.ಸಿ. ಜುಬಿಲಿ ವೃತ್ತ, ಮಹಾನಗರ ಪಾಲಿಕೆ ವೃತ್ರ, ಅಂಜುಮನ್ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ, ಕೆ.ಸಿ.ಸಿ. ಬ್ಯಾಂಕ್ ವೃತ್ತದ ಮುಖಾಂತರ ಚಲಿಸಿ ನಗರದ ಭೂಸಪ್ಪ ಚೌಕ ವೃತ್ತದಲ್ಲಿ ಸಂಪನ್ನಗೊಳ್ಳುವದು.
ಸಂಘಟನೆಯ ಮಾಹಿತಿ 2008 ಜಯಕರ್ನಾಟಕ ಸಂಘಟನೆಯ ಶುರು ಮಾಡಿದ್ದು, ಕೇವಲ ಐದು ಸದಸ್ಯರಿಂದ ಪ್ರಾರಂಭಿಸಿದರು. ಇದೀಗ ಕರ್ನಾಟಕ ರಾಜ್ಯಾದ್ಯಂತ ಲಕ್ಷಾಂತರ ಸದಸ್ಯರು ಇದ್ದಾರೆ, ಜಯಕರ್ನಾಟಕ ಸಂಘಟನೆಯಯ ಕನ್ನಡ ನೆಲ, ಜಲ, ಭಾಷೆ ಪರವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಸಾವಿರಾರು ಸದಸ್ಯರಿದ್ದು, ಇನ್ನೂ ಮುಂದಿನ ದಿನಗಳಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗುತ್ತದೆ.
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಮಡಿದ ತಾಯಿಯಂದಿರ ಪುಣ್ಯ ತಿಥಿ ಮಾಡುವ ಮೂಲಕ ವಿನೂತನ ಕಾರ್ಯಕ್ರಮವನ್ನು ಜಯಕರ್ನಾಟಕ ಸಂಘಟನೆ ಮಾಡಿದೆ, ಮಹದಾಯಿ ಹೋರಾಟದಲ್ಲಿ ಭಾಗಿಯಾಗಿದ್ದೇವೆ, ಚಿಗರಿ ಬಸ್ ನಿಂದ ಸಾರ್ವಜನಿಕರಿಗೆ ತೊಂದರೆಗಳನ್ನು ನೋಡಿಯು ಹೋರಾಟ ಮಾಡಿದ್ದೇವೆ. ಏಕ ರೂಪ ಶಿಕ್ಷಣ ಸಮಾನ ಹೋರಾಟ ಮಾಡಿದ್ದೇವೆ. ಇನ್ನೂ ಅನೇಕ ಸಾರ್ವಜನಿಕ ಕಾರ್ಯವನ್ನು ಮಾಡುವ ಮೂಲಕ ಜಯಕರ್ನಾಟಕ ಸಂಘಟನೆಯು ಕಾರ್ಯ ಮಾಡಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸುಧೀರ ಎಂ ಮುಧೋಳ, ಜಿಲ್ಲಾ ಗೌರವಾಧ್ಯಕ್ಷರಾದ ಲಕ್ಷ್ಮಣ ಬ.ದೊಡ್ಡಮನಿ ಜಿಲ್ಲಾ ಯುವ ಘಟಕ ಅಧ್ಯಕ್ಷ ಮಂಜುನಾಥ ಸುತಗಟ್ಟಿ, ರವಿ ಸಿದ್ದಾಟಗಿಮಠ, ರಾಕೇಶ ದೊಡ್ಡಮನಿ, ಗಂಗಪ್ಪ ದೊಡ್ಡಮನಿ, ಮಡವಾಳಿ ನಡಕಟ್ಟಿ, ಗಿರೀಶ್ ಮೇಲಿನಮನಿ ದುರ್ಗಪ್ಪ ಕಡೆಮನಿ, ರಾಜು ಜುನ್ನಾಯ್ಕರ್, ಅಲ್ತಾಫ್ ಮಾಲಿ ಮನೋಜ ಗದ್ಗಿನ, ಯೂಸುಫ ದೊಡ್ಡವಾಡ ,ಶರೀಫ್ ಅಮಿನಬಾವಿ,ರಾಜು ಚಲವಾದಿ, ಯಶವಂತ ದೊಡ್ಡಮನಿ, ಪ್ರಜ್ವಲ ಚಿಕ್ಕೋಡಿ, ರಾಘು ವರ್ಣೇಕರ, ಮಣಿಕಂಠ ಹವಾಲ್ದಾರ, ನವೀನ ಜಾಡರ, ಜಾಕಿರ ಮಲ್ಲೂರು, ಹುಸೇನ ದೊಡವಾಡ, ವಿನಾಯಕ್ ಜಿಜಿ, ಬಸವರಾಜ ಸುತಗಟ್ಟಿ, ಇನ್ನಿತರರು ಉಪಸ್ಥಿತರಿದ್ದರು.