![Shri Banashankari Devi Palakki Festival and Jatra Mahotsav was held in grandeur.](https://independentsangramnews.com/wp-content/uploads/2025/01/WhatsApp-Image-2025-01-20-at-2.19.44-AM.jpeg)
ಧಾರವಾಡ : ಬನದ ಹುಣ್ಣಿಮೆ ನಿಮಿತ್ತವಾಗಿ ಶಹರದ ಕಾಮನಕಟ್ಟಿ ಚರಂತಿಮಠ ಗಾರ್ಡನದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಇಂದು ಶ್ರೀ ಬನಶಂಕರಿ ದೇವಿ ಪಲ್ಲಕ್ಕಿ ಉತ್ಸವ ಹಾಗೂ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು.
ಬೆಳಗ್ಗೆ ಕಾಕಡಾರತಿ, ಅಭಿಷೇಕ, ಕುಂಕುಮಾರ್ಚನೆ , ಹೋಮ, ಹವನ ಹಾಗೂ ದೇವಿಗೆ ವಿಶೇಷ ಪೂಜೆ ಮಂತ್ರಪಠಣ ನಡೆದವು. ಶಹರ ಪೊಲೀಸ್ ಆಯುಕ್ತ ಪ್ರಶಾಂತ್ ಸಿದ್ದನಗೌಡರ ಪಲ್ಲಕ್ಕಿ ಉತ್ಸವದ ಪೂಜೆ ನೇರವೇರಿಸಿದರು. ಶ್ರೀ ಧರ್ಮಶಾಸ್ತಾç ಸಮಿತಿಯ ರಮೇಶ್ ಪಾತ್ರೊಟ್ ಗುರೂಜಿ ಇವರಿಂದ ಧಾರ್ಮಿಕ ವಿಧಿ- ವಿಧಾನ ಕಾರ್ಯಕ್ರಮ ಜರುಗಿತು.
ನಂತರ ನಡೆದ ಪಲ್ಲಕ್ಕಿ ಉತ್ಸವವು ವಿವಿಧ ಬಡಾವಣೆ ಮೂಲಕ ಸಂಚರಿಸಿ ಮರಳಿ ದೇವಸ್ಥಾನ ತಲುಪಿತು. ಈ ಸಂದರ್ಭದಲ್ಲಿ ಜಾಂಝ, ಭಜನೆ, ಕಲಾ ಮೇಳಗಳು ಭಾಗವಹಿಸಿ ಜಾತ್ರಾ ಮಹೋತ್ಸವಕ್ಕೆ ಮೆರಗು ನೀಡಿದವು. ಶ್ರೀ ಸಾಯಿ ಪದವಿ ಪೂರ್ವ ಮಹಾವಿದ್ಯಾಲಯದ ಸಂಸ್ಥಾಪಕಿ ಡಾ ವೀಣಾ ಬಿರಾದಾರ ಮಹಾಪ್ರಸಾದ ವಿತರಣೆಗೆ ಚಾಲನೆ ನೀಡಿದರು. ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಶಿವಾನಂದ ಲೋಲೆನವರ, ಅಶೋಕ ದೇವಾಂಗ್, ರವಿ ಲೋಲಿ. ವಿರುಪಾಕ್ಷ ಲೋಲೆನವರ, ರವಿಕುಮಾರ ಕಗ್ಗಣ್ಣವರ. ಹೇಮಾಕ್ಷಿ ಕಿರೆಸೂರ, ಸುಮನ್ ಬೂಸನುರಮಠ, ಲತಾ ಮಂಟಾ, ಎಚ್.ಎ.ಮುಲ್ಲಾನವರ. ಸಲೀಮ್ ಅತ್ತಾರ. ರಜಾಕ್ ತಂಬೋಲಿ ಪಾಲ್ಗೊಂಡಿದ್ದರು.