ವಿ.ಪ ಸದಸ್ಯ ಎಸ್.ವ್ಹಿ.ಸಂಕನೂರರ ಆದರ್ಶ ವ್ಯಕ್ತಿತ್ವ ಎಲ್ಲರಿಗೂ ಮಾದರಿ – ತಿಗಡಿ

ಧಾರವಾಡ ೦೫ : ವಿಧಾನ ಪರಿಷತ್‌ನ ಸದಸ್ಯರಾದ ಪ್ರೋ ಎಸ್ ವ್ಹಿ ಸಂಕನೂರ ಅವರು ಸರಳ ವ್ಯಕ್ತಿತ್ವದ ಸಜ್ಜನ ರಾಜಕಾರಣಿಯಾಗಿದ್ದು ಅವರದು ಆದರ್ಶದ ವ್ಯಕ್ತಿತ್ವ ಎಂದು ಸಂಘಟಕರು ಹಾಗೂ ನಿವೃತ್ತ ಶಿಕ್ಷಕರಾದ ಗುರು ತಿಗಡಿ ಹೇಳಿದರು.

ಅವರು ಸಾಂಸ್ಕೃತಿಕ ಲೋಕ ಆರ್ಟ್ಸ & ಕಲ್ಚರಲ್ ಅಕಾಡೆಮಿಯಲ್ಲಿ ಹಮ್ಮಿಕೊಂಡ ಕಲಾ ಸ್ಪಂದನ, ಹಾವೇರಿ ಹಾಗೂ ಸಾಂಸ್ಕೃತಿಕ ಲೋಕ ಆರ್ಟ್ಸ್ & ಕಲ್ಚರಲ್ ಅಕಾಡೆಮಿ ಧಾರವಾಡ ಇವರ ಸಹಯೋಗದಲ್ಲಿ ಕೋರ್ಟ್ ಸರ್ಕಲ್ ಹತ್ತಿರದ ಡ್ಯಾನ್ಸ್ ಕ್ಲಾಸ್‌ನಲ್ಲಿ ಹಮ್ಮಿಕೊಂಡ ವಿಧಾನ ಪರಿಷತ್ತಿನ ಶಾಸಕರಾದ ಎಸ್.ವಿ. ಸಂಕನೂರ ಅವರ ಭಾವಚಿತ್ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು. ಸಂಕನೂರ ಅವರ ಭಾವಚಿತ್ರ ಇರುವ ಕ್ಯಾಲೆಂಡರ್ ಕಲಾ ಸ್ಪಂದನ ಹಾವೇರಿಯವರು ಕಳೆದ 5 ವರ್ಷಗಳಿಂದ ಬಿಡುಗಡೆ ಮಾಡುತ್ತ ಅವರ ಕಾರ್ಯವೈಖರಿಯನ್ನು ನೆನೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಮೋಹನ ರಾಮದುರ್ಗ ಮಾತನಾಡಿ ಸಂಕನೂರ ಅವರು ಅಜಾತ ಶತ್ರು ವ್ಯಕ್ತಿತ್ವ ಉಳ್ಳವರು ಎಂದು ಹೇಳಿದರು.

ವಸತಿ ನಿಲಯಗಳ ನಿಲಯ ಪಾಲಕರ ಸಂಘದ ರಾಜ್ಯಾದ್ಯಕ್ಷರಾದ ಸುರೇಶ ಗುಂಡಣ್ಣವರ ಅವರು ಮಾತನಾಡಿ ಅತ್ಯಂತ ಸರಳ ಹಾಗೂ ಪ್ರಭುದ್ಧ ವ್ಯಕ್ತಿತ್ವದ ಸಂಕನೂರ ಅವರು ಎಲ್ಲರನ್ನೂ ಸೆಳೆಯುವ ಆದರ್ಶದ ವ್ಯಕ್ತಿಯಾಗಿದ್ದು ಕಲಾಸ್ಪಂದನದ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರೀಕ್ಷಕರ ರಾಜ್ಯ ಸಂಘದ ಕಾರ್ಯದರ್ಶಿ ಸಿದ್ದಪ್ಪ ಮಹಾಗಾಂವ, ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾದ ಎಸ್ ಎಂ ಘಂಟಿ,
ಡ್ಯಾನ್ಸ ಅಕಾಡೆಮಿಯ ಸೈಯದ್ ಎ ಎಮ್. ಕಲಾಸ್ಪಂದನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಎಮ್ ಎಸ್ ಫರಾಸ ವಹಿಸಿದ್ದರು.

ನಂತರ ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರೀಕ್ಷಕರ ಸಂಘ ಧಾರವಾಡ ಜಿಲ್ಲಾ ಘಟಕಕ್ಕೆ ಅವಿರೋಧವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷ ಎಮ್ ಎಸ್ ಘಂಟಿ, ಪ್ರಧಾನಕಾರ್ಯಧರ್ಶಿ ಮಾರ್ತಾಂಡಪ್ಪ ಕತ್ತಿ, ಜಂಟಿ ಕಾರ್ಯಧರ್ಶಿ ಪ್ರಕಾಶ ಬಡಿಗೇರ, ಖಜಾಂಚಿ ಶ್ರೀಶೈಲ ಚಿಕನಳ್ಳಿ, ಉಪಾಧ್ಯಕ್ಷ ನಾಗೇಶ ಜಮ್ಮಿಹಾಳ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಉಪ್ಪಿನಬೇಟಗೇರಿ ಗ್ರಾಮಪಂಚಾಯತ ಸದಸ್ಯ ಶಿವಯೋಗಿ ಮಡಿವಾಳ, ಸಿದ್ದು ಕಲ್ಯಾಣಶೆಟ್ಟಿ, ಎಸ್ ಬಿ ಬಡಿಗೇರ, ಸಿಂದಗಿ ಸರ್, ಕೃಷ್ಣಮೂರ್ತಿ ಗೊಲ್ಲರ, ಸುರೇಶ ಬೆಟಗೇರಿ ಮುಂತಾದವರು ಇದ್ದರು. ಗಾಯಕ ಶಿವಾನಂದ ಹೂಗಾರ ಪ್ರಾರ್ಥಿಸಿದರು. ಪ್ರೇಮಾನಂದ ಶಿಂಧೆ ನಿರೂಪಣೆ ಮಾಡಿದರು. ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಿ ಆರ್ ರಾಠೋಡ ವಂದಿಸಿದರು.

  • Related Posts

    ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ

    ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…

    ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ

    ಧಾರವಾಡ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ ಶಾಖೆಯ 2024 2025 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಂಗಳವಾರ, ದಿ 04 ರಂದು ಮುಂಜಾನೆ 10:30 ಗಂಟೆಗೆ ಕನ್ನಡ ಕುಲಪುರೋಹಿತ ಆಲೂರು ವಂಕಟರಾವ ಸಾಂಸ್ಕೃತಿಕ ಭವನದಲ್ಲಿ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ…

    RSS
    Follow by Email
    Telegram
    WhatsApp
    URL has been copied successfully!