ಸಚಿವ ಪ್ರಿಯಾಂಕ ಖರ್ಗೆ ರಾಜಿನಾಮೆ ಅಗ್ರಹಿಸಿ – ಬಸ್ ದರ ಏರಿಕೆ ಖಂಡಿಸಿ ಬಿ.ಜೆ ಪಿ. ಪ್ರತಿಭಟನೆ

ಧಾರವಾಡ ೦೫ : ಸಚಿವ ಪ್ರಿಯಾಂಕ ಖರ್ಗೆ ರಾಜಿನಾಮೆ ಅಗ್ರಹಿಸಿ ಹಾಗು ಬಸ್ ದರ ಏರಿಕೆ ಖಂಡಿಸಿ ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಹಾಗು ಗ್ರಾಮಾಂತರ ಜಿಲ್ಲಾ ಘಟಕದವರು ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಸಚಿವ ಪ್ರಿಯಾಂಕ ಖರ್ಗೆ ಅವರು ಗುತ್ತಿಗೆದಾರ ಸಚಿನ ಅತ್ಯಹತ್ಯೆ ಹಿನ್ನಲೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಸೂಕ್ತ ಕಾನೂನ ತನಿಖೆಗೆ ಸಹಕರಿಸಲು ರಾಜಿನಾಮೆಗೆ ಆಗ್ರಹಿಸಿ ಮತ್ತು ರಾಜ್ಯದಲ್ಲಿ ಸಾರ್ವಜನಿಕರಿಗೆ ಅನೇಕ ಬರೆಗಳ ಭಾಗ್ಯ ನೀಡುವ ನಿಟ್ಟಿನಲ್ಲಿ ಪ್ರಸ್ತೂತ ಬಸ್ಸ ದರ ಏರಿಕೆಗಳಂತಹ ದೌರ್ಹಭಾಗ್ಯ ನೀಡುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಕಡಿವಾಣ ಹಾಕುವ ನಿಟಿನ್ನಲ್ಲಿ ಕ್ರಮ ಕೈಗೊಳ್ಳಲು ಭಾರತೀಯ ಜನತಾ ಪಾರ್ಟಿ ಆಗ್ರಹಿಸಿದೆ.

ರಾಜ್ಯದಲ್ಲಿ ಕಾಗ್ರೇಸ್ ನೇತ್ರತ್ವದ ಸರ್ಕಾರ ರಾಜ್ಯದ ಜನರಿಗೆ ಗ್ಯಾರಂಟಿಗಳ ಅವಿಷ ನೀಡಿ ಅಧಿಕಾರಕ್ಕೆ ಬಂದಾಗಿನಿಂದ ತನ್ನ ದುರ್ಹಂಕಾರಿತನದಿಂದ ಮೇರೆಯುತ್ತದ್ದು, ಪ್ರಸ್ತೂತ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಅತ್ಯಹತ್ಯೆಗಳಂತ ಭಾಗ್ಯಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಅರಾಜಕತೆಗೆ ನಿರ್ಮಾಣ ಮಾಡುತ್ತಿದ್ದನ್ನು ಭಾರತೀಯ ಜನತಾ ಪಾರ್ಟಿ ಸಹಿಸಲಾರದು. ಇಂತಹ ದುರ್ಹಂಕಾರಿ ಸರ್ಕಾರದ ಕಾರ್ಯಗಳಿಗೆ ಕಡಿವಾಣ ಹಾಕುವ ಮೂಲಕ ರಾಜ್ಯದ ಜನರಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾನೂನಾತ್ಮಕ ಕ್ರಮ ಜರಗಿಸಲು ಒತ್ತಾಯಿಸಿದರು.

ರಾಜ್ಯಪಾಲರಾದ ತಾವು ಕೊಡಲೆ ಸರ್ಕಾರದ ಈ ವರ್ತನೆಗೆ ಮೂಗುದಾರ ಹಾಕುವದ ಜೊತೆಗೆ ಸಚಿವರಾದ ಪ್ರಿಯಾಂಕ ಖರ್ಗೆ ಅವರ ರಾಜೀನಾಮೆ ಪಡೆಯುವ ಮೂಲಕ ಕಾನೂನ ಕ್ರಮ ಜರುಗಿಸಬೇಕು. ಮತ್ತು ಗುತ್ತಿಗೆದಾರ ಸಚಿನ ಮತ್ತು ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು,ರಾಜ್ಯದ ಜನರಿಗೆ ಗ್ಯಾರಂಟಿ ನೆಪದಲ್ಲಿ ಬೆಲೆ ಏರಿಕೆಗಳಂತಹ ಗ್ಯಾರಂಟಿ ಮೇಲಿಂದ ಮೇಲೆ ನೀಡುವ ಮೂಲಕ ಪ್ರಸ್ತೂತ ಬಸ್ಸದರ ಏರಿಕೆ ಭಾಗ್ಯವನ್ನು ಕೊಟ್ಟು ಗಾಯದ ಮೇಲೆ ಉಪ್ಪು ಲೇಪಿಸುತ್ತಿದ್ದನ್ನು ರಾಜ್ಯದ ಜನರಿಗೆ ಸಹಿಸದಾಗಿದೆ. ಸರ್ಕಾರದ ಜನವಿರೋಧಿ ಕ್ರಮವನ್ನು ಬಿಜೆಪಿ ಖಂಡಿಸುವುದು. ರಾಜ್ಯ ರಾಜ್ಯಪಾಲರಾದ ತಾವು ನಮ್ಮ ಹೋರಟಕ್ಕೆ ಸ್ಪಂದಿಸಿ ರಾಜ್ಯ ಜನರಿಗೆ ಆಗುತ್ತಿರುವ ಅನ್ಯಾಯಕ್ಕೆ ಕಡಿವಾಣ ಹಾಕುವ ಮೂಲಕ ನ್ಯಾಯ ದೊರಕಿಸಲು ಭಾರತೀಯ ಜನತಾ ಪಾರ್ಟಿ ಆಗ್ರಹಿಸಿದೆ.

ಪ್ರತಿಭಟನೆಯಲ್ಲಿ ಈರೇಶ ಅಂಚಟಗೇರಿ, ವಿಜಯ ಶೆಟ್ಟಿ ಸಂಜಯ್ ಕಪಟಕರ್, ದತ್ತ ಮೂರ್ತಿ ಕುಲಕರ್ಣಿ, ಮೋಹನ್ ರಾಮದುರ್ಗ್ ಪ್ರಭು ನವಲಗುಂದ ಮಠ, ಸುರೇಶ್ ಬೆಂದರೆ, ಸುನಿಲ್ ಮೂರೆ, ಅಮಿತ್ ಪಾಟೀಲ್, ಶಿವಾಜಿ ಶಿಂದೆ, ವಿಷ್ಣು ಕೊಳ್ಳಲಹಳ್ಳಿ, ಶಕ್ತಿ ಹಿರೇಮಠ, ಶಶಿ ಮೊಲ ಕುಲಕರ್ಣಿ, ಶ್ರೀನಿವಾಸ್ ಕೋಟ್ಯಾನ್, ವೀರಯ್ಯ ಚಿಕ್ಕ ಮಠ, ಶಿವಾನಂದ್ ಗುಂಡಗೋವಿ, ಈರಣ್ಣ ಬಡಿಗೇರ್, ರವಿಕಿರಣ್ ವಾಗ್ಮೊರೆ, ಮಂಜುನಾಥ್ ಹೊಸೂರ್, ನಿಂಗನಗೌಡ ಪಾಟೀಲ್,ಸುನಿತಾ ಮಾಳಕರ್, ಅಶ್ವಿನಿ ವೀರಾಪುರ್, ಜ್ಯೋತಿ ಪಾಟೀಲ್, ಮಾಲತಿ ಹುಲಿಕಟ್ಟಿ, ರಾಜೇಶ್ವರಿ ಅಳಗವಾಡಿ, ಪುಷ್ಪ ನವಲಗುಂದ್, ಅನಿತಾ ಹೊಸಕೋಟಿ, ರೇಣುಕಾಐ ಇರಕಲ, ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

  • Related Posts

    ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ

    ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…

    ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ

    ಧಾರವಾಡ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ ಶಾಖೆಯ 2024 2025 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಂಗಳವಾರ, ದಿ 04 ರಂದು ಮುಂಜಾನೆ 10:30 ಗಂಟೆಗೆ ಕನ್ನಡ ಕುಲಪುರೋಹಿತ ಆಲೂರು ವಂಕಟರಾವ ಸಾಂಸ್ಕೃತಿಕ ಭವನದಲ್ಲಿ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ…

    RSS
    Follow by Email
    Telegram
    WhatsApp
    URL has been copied successfully!