ಧಾರವಾಡ 29 : ಸೆoಟ್ ಜೋಸೆಫ್ ಪ್ರೌಢ ಶಾಲೆಯ 2003 ನೇ ಸಾಲಿನ ವಿದ್ಯಾರ್ಥಿಗಳ ಪುನರಮಿಲನ ಸಮಾರಂಭ ಕಾರ್ಯಕ್ರಮ ಜರುಗಿತು.
ಧಾರವಾಡದ ಸಂಟ್ ಜೋಸೆಫ್ ಪ್ರೌಢಶಾಲೆಯ 2003 ನೇ ಸಾಲಿನಲ್ಲಿ ವ್ಯಾಸಂಗ ಮಾಡಿ ಈಗ ದೇಶದಲ್ಲಿ, ಹೊರ ದೇಶಗಳಲ್ಲಿ ಉನ್ನತ ಸ್ಥಾನಮಾನಗಳನ್ನು ಅಲಂಕಾರಿಸಿದ್ದಾರೆ ಅದರಲ್ಲಿ ಹಲವಾರು ವಿದ್ಯಾರ್ಥಿಗಳು ಇಂದು ಶಾಲೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕ್ರಿಸ್ಸಮಸ್ ರಜೆ ಕಾರಣ ಇಂದು ಎಲ್ಲರು ಸೇರುವ ತಮ್ಮ ಸಹಪಾಠಿಗಳ ಕಾರ್ಯಕ್ರಮವಾದ ಪುನರಮಿಲನ ನಡೆಯಿತು.
ಗುರುಗಳ ಮಾರ್ಗದರ್ಶನ ಹಾಗೂ ಪ್ರೇರಣೆಗಳೇ ಕಾರಣವಾಗಿದೆ ಎಂದು ಅನೇಕ ವಿದ್ಯಾರ್ಥಿಗಳು ಅಭಿಪ್ರಾಯ ಪಟ್ಟರು. ಆದರೆ ಇದನ್ನು ಪಾಲಕರು ಸಹ ಸಹಕಾರ ಮಾಡಿಕೊಡಬೇಕಾಗಿದೆ ಎಂದರು.
ವಿದ್ಯಾರ್ಥಿಗಳ ಈ ಪುನರಮಿಲನ ಕಾರ್ಯಕ್ರಮದಲ್ಲಿ ತಮ್ಮ ಅನೇಕ ಕಹಿ ಸಿಹಿ ನೆನಪುಗಳನ್ನು ಮೆಲಕು ಹಾಕಿದರು. ಸಮಾರಂಭದಲ್ಲಿ ಅನೇಕ ಮನರಂಜನೆ ಆಟಗಳನ್ನು ಆಡುತ್ತಾ ರಂಜಿಸಿದರು.
ಯಾರೇ ಇರಲಿ ಇತರರಿಗೆ ಸಹಾಯ ಸಹಕಾರ ಮತ್ತು ಮಾನವೀಯತೆ ಗುಣಗಳನ್ನು ಬೆಳೆಸಿಕೊಂಡು ಬೆಳೆಯಬೇಕೆಂದು ಹಳೇಯ ವಿದ್ಯಾರ್ಥಿ ನಿಕ್ಕಿ ನೈಲಾನಿ ಸೇರಿದಂತೆ ಇತರ ವಿದ್ಯಾರ್ಥಿಗಳು ಕರೆ ನೀಡಿದರು.
ಈ ಸಂದರ್ಭದಲ್ಲಿ ಸೋನಿಯಾ ಮಾನೆ, ನಿಕಿ ಜಿ. ನೈಲಾನಿ, ಶಫಿಕ್ ಪೀರವಾಲೆ, ಅಭಿನಂದನ ಮನಕುದರೆ, ನಮ್ರತಾ ಹಿರೇಮಠ್, ಅನೀಶ ಮೆಹತಾ, ಅಕ್ಷಯ ಸೂರ್ಯವಂಶಿ, ವೈಷ್ಣವಿ ಪಟೇಲ್, ಪರ್ವೇಜ ನಮಾಜಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪುನರಮಿಲನ ಸಮಾರಂಭದಲ್ಲಿ ಭಾಗವಹಿಸಿ ತಮ್ಮ ಬಾಲ್ಯದ ಜೀವನ ನೆನಪಿನ ಬತ್ತಿ ಮೆಲಕು ಹಾಕಿ ಸಂತೋಷ ಪಟ್ಟರು.