ಸ್ವಾತಂತ್ರ್ಯ ಪೂರ್ವ ಹಳ್ಳಿಗಳ ಸ್ಥಿತಿಗೂ ಇಂದಿನ ಸ್ಥಿತಿಗೂ ಅಜಗಜಾಂತರ‌ : ಪ್ರೊ. ಮುಕುಂದ ರಾಜ್

ಸ್ವಾತಂತ್ರ್ಯ ಪೂರ್ವ ಹಳ್ಳಿಗಳ ಸ್ಥಿತಿಗೂ ಇಂದಿನ ಸ್ಥಿತಿಗೂ ಅಜಗಜಾಂತರ‌.
ಜಾತ್ರಿ ಕಾದಂಬರಿ ಹಳ್ಳಿಯ ವಾಸ್ತವ ಚಿತ್ರಣಕ್ಕೆ ಕನ್ನಡಿ ಆಗಿದೆ- ಪ್ರೊ. ಮುಕುಂದ ರಾಜ್

ಧಾರವಾಡ ೧೪ : ಪ್ರೊ. ಧರಣೇಂದ್ರ ಕುರಕುರಿ ರಚಿಸಿದ ಕಾದಂಬರಿ ಜಾತ್ರಿ ಸ್ವಾತಂತ್ರ್ಯ ಪೂರ್ವದಲ್ಲಿ ಹಳ್ಳಿಗಳ ವ್ಯವಸ್ಥೆ ಬ್ರೀಟಿಷರ ಪರವಾಗಿ ಹಳ್ಳಿಯ ಪ್ರಮುಖರಿದ್ದರೆ, ಜನಸಾಮಾನ್ಯರು ಭಯದಿಂದ ಬದುಕುತ್ತಿರುವ ಚಿತ್ರಣವಿದೆ.
ಸ್ವಾತಂತ್ರ್ಯ ನಂತರದ ಹಳ್ಳಿಗಳ ಪರಿಸ್ಥಿತಿ ಮೌಲ್ಯಗಳ ಅಧ:ಪಥಣ ರಾಜಕೀಯ ವ್ಯವಸ್ಥೆ ಕಾರಣವಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎನ್ ಎಸ್ ಮುಕುಂದರಾಜ್ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ಕಾದಂಬರಿ ಬಿಡುಗಡೆ ಗೊಳಿಸಿ ಮಾತನಾಡಿದರು. ಜಾತ್ರಿ ಕಾದಂಬರಿಯಲ್ಲಿ ಹಳ್ಳಿಯ ವಾತಾವರಣವನ್ನು ವಾಸ್ತವವಾಗಿರುವದನ್ನು ಕಾಣಬಹುದು. ಧಾರವಾಡದ ಭಾಷೆ, ಕಥಾ ನಿರೂಪಣೆ, ಅಭಿವ್ಯಕ್ತಿ ಚೆನ್ನಾಗಿ ವ್ಯಕ್ತವಾಗಿದೆ. ಎಲ್ಲರೂ ಓದಬೇಕಾದ ಕಾದಂಬರಿ ಇದು ಎಂದು ಹೇಳಿದರು.

ಜಾತ್ರಿ ಕಾದಂಬರಿ ಯನ್ನು ಸಾಹಿತಿಗಳಾದ ವೆಂಕಟೇಶ್ ಮಾಚಕನೂರ ಅವರು ಕಾದಂಬರಿ ಯಲ್ಲಿ ವ್ಯಕ್ತವಾದ ಸೂಕ್ಷ್ಮ ಸಂವೇದನೆಗಳನ್ನು ಉದಾಹರಣೆಗಳೊಂದಿಗೆ ವಿಶ್ಲೇಷಿಸಿದರು. ಕಾದಂಬರಿಕಾರರಾದ ಪ್ರೊ. ಧರಣೇಂದ್ರ ಕುರಕುರಿ ಅವರು ಕಾದಂಬರಿ ಹಿನ್ನೆಲೆಯನ್ನು ವಿವರಿಸಿದರು.

ಡಾ. ಕೆ ಬಿ ಪವಾರ ಅವರು ಜಾತ್ರಿ ಕಾದಂಬರಿಯಲ್ಲಿ ಬಳಸಿಕೊಂಡ ಜನಪದ ಸಾಹಿತ್ಯದ ಔಚಿತ್ಯ ವನ್ನು ಕುರಿತು ಮಾತನಾಡಿದರು.‌ಕಾದಂಬರಿಯ ಪ್ರಕಾಶಕರಾದ  ಸವಿತಾ ಯಾಜಿ ಅವರು ಪ್ರಕಾಶಕರ ಮತ್ತು ಬರಹಗಾರರ ಹಾಗೂ ಓದುಗರ ಸಂಭಂದವನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಲಿಂಗರಾಜ ಅಂಗಡಿ ಅವರು ಸಾಹಿತ್ಯ ಪರಿಷತ್ತು ಸಾಹಿತಿಗಳು ರಚಿಸಿದ ಪ್ರತಿಗಳ ಬಿಡುಗಡೆಗೆ ಸದಾ ಪ್ರೋತ್ಸಾಹಿಸುತ್ತಾ ಬಂದಿದೆ ಎಂದರು.  ಮಹಾಂತೇಶ ನರೇಗಲ್ ಪ್ರಾರ್ಥಿಸಿದರು. ಪ್ರೊ. ಕೆ ಎಸ್ ಕೌಜಲಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.‌ಜಿನದತ್ ಹಡಗಲಿ ವಂದಿಸಿದರು. ತಾರಾ ಹೆಗಡೆ ನಿರೂಪಿಸಿದರು. ಸತೀಶ್ ಕುಲಕರ್ಣಿ, ಪದ್ಮಾ ಚಿನ್ಮಯಿ , ಎಸ್ ಎಮ್ ದಾನಪ್ಪಗೌಡರ, ಶಾಂತವೀರ ಬೆಟಗೇರಿ, ಶಾಂತರಾಜ ಮಲ್ಲಸಮುದ್ರ, ಚೆನ್ನಪ್ಪ ಅಂಗಡಿ, ಡಾ. ಬಸು ಬೆವಿನಗಿಡದ, ಸರಸ್ವತಿ ಕಳಸದ, ಡಾ . ಹೇಮಾ ಪಟ್ಟಣಶೆಟ್ಟಿ, ವಿದ್ಯಾ ವಂಟಮುರಿ, ಸಿದ್ದಮ್ಮ ಅಡಿವೆನ್ನವರ, ಚನ್ನಬಸಪ್ಪ ಧಾರವಾಡ ಶೆಟ್ಟರ್, ಎಸ್ ಎಚ್ ಪ್ರತಾಪ್, ಎಸ್ ಕೆ ಕೊಪ್ಪಾ, ನಾಗೇಂದ್ರ ಕೆಂಪಣ್ಣವರ, ಪ್ರೊ. ಎಸ್ ಎಮ್ ಸಾತ್ಮಾರ, ಎಫ ಬಿ ಕಣವಿ, ಗಂಗಾಧರ ಗಾಡದ ಮುಂತಾದವರು ಉಪಸ್ಥಿತರಿದ್ದರು.

  • Related Posts

    ಸಿಟಿ ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವುದೇ ನಿರ್ಧಾರಕ್ಕೆ ಬರುವುದು ತಪ್ಪು- ಸಂಸದ ಬಸವರಾಜ ಬೊಮ್ಮಾಯಿ

    ರಾಜ್ಯದಲ್ಲಿ ಪೊಲೀಸ್ ದುರ್ಬಳಕೆ ಹೆಚ್ಚಾಗುತ್ತಿದೆ ಬಸವರಾಜ ಬೊಮ್ಮಾಯಿ ನವದೆಹಲಿ  ಡಿ.21 : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರು ಸದನದಲ್ಲಿ ಅವಾಚ್ಯವಾಗಿ ಹೇಳಿಕೆ ನೀಡಿದ್ದಾರೊ ಇಲ್ಲವೊ ಎಂಬುದರ ಸತ್ಯಶೋಧನೆ ಆಗಬೇಕು. ತನಿಖೆ ಆಗಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ…

    ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಕಂಪ್ಯೂಟರ್ ಶಿಕ್ಷಣ ಬೋಧಿಸಲು ಅತಿಥಿ ಶಿಕ್ಷರರ ಹುದ್ದೆಗೆ ಅರ್ಜಿ ಆಹ್ವಾನ

    ಧಾರವಾಡ ಡಿ.೨೧ :  2024-25 ನೇ ಸಾಲಿನಲ್ಲಿ ಧಾರವಾಡ ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಹುಬ್ಬಳ್ಳಿ ಅಂಚಟಗೇರಿಯ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣ ಬೋಧಿಸಲು ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಡಿಸೆಂಬರ…

    RSS
    Follow by Email
    Telegram
    WhatsApp
    URL has been copied successfully!