ವೀರಭದ್ರೇಶ್ವರ ಜಾತ್ರಾಮಹೋತ್ಸವದಲ್ಲಿ ನಾಲ್ಕು ಜೋಡಿಗಳ ಸಾಮೂಹಿಕ ವಿವಾಹ

ಧಾರವಾಡ : ಧಾರವಾಡ ಮೃತ್ಯುಂಜಯ ನಗರದ ಕೊಟ್ಟಣದ ಓಣಿಯ ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವದಲ್ಲಿ ಎರಡನೆಯ ದಿನದ ಕಾರ್ಯಕ್ರಮ ವಿವಾಹ ಮಹೋತ್ಸವವು ಜರುಗಿತು.
ಈ ಸಂದರ್ಭದಲ್ಲಿ ನಾಲ್ಕು ಜೋಡಿಗಳು ದಾಂಪತ್ಯಜೀವನಕ್ಕೆ ಕಾಲಿಟ್ಟರು. ದಿವ್ಯಸಾನಿಧ್ಯವನ್ನು ಉಪ್ಪಿನಬೆಟಗೇರಿಯ ಶ್ರೀ ವೀರುಪಾಕ್ಷೇಶ್ವರ ಮಹಾಸ್ವಾಮಿಗಳು ಹಾಗೂ ಶಿರಕೋಳ ಶ್ರೀಗಳಾದ ಗುರುಶಿದ್ದೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕಿ ಸೀಮಾ ಮಸೂತಿ ಭಾಗವಹಿಸಿದ್ದರು.ವೀರಭದ್ರೇಶ್ವರ ದೇವಸ್ಥಾನದ ಅಧ್ಯಕ್ಷರಾದ ಅರವಿಂದ ಏಗನಗೌಡರ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ದಾಂಪತ್ಯ ಜೀವನದಲ್ಲಿ ಸತಿಪತಿಗಳು ಚಕ್ಕಡಿಯ ಗಾಲಿಗಳಿದ್ದಂತೆ, ಹೊಂದಾಣಿಕೆಯ ಜೀವನ ಮುಖ್ಯ, ಸಮರಸವೆ ಜೀವನ, ಅತ್ತೆಯನ್ನು ತಾಯಿಯಂತೆಯೂ, ಸೊಸೆಯನ್ನು ಮಗಳಂತೆಯೂ ಕಾಣಬೇಕು ಅಂದಾಗ ಜೀವನ ಸಾರ್ಥಕ ಎಂದರು.
ವೀರುಪಾಕ್ಷೇಶ್ವರ ಮಹಾಸ್ವಾಮಿಗಳು ಮಾತನಾಡಿ  ವೀರಭದ್ರೇಶ್ವರ ಜಾತ್ರಾಮಹೋತ್ಸವದಲ್ಲಿ ಸಾಮೂಹಿಕ ವಿವಾಹಗಳನ್ನು ಆಯೋಜಿಸುತ್ತಿರುವ ಸಮಿತಿವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಅವರ ಕಾರ್ಯ ಶ್ಲಾಘನೀಯ ಎಂದರು.
ಆಧುನಿಕ ಜೀವನದಲ್ಲಿ ಖರ್ಚು ವೆಚ್ಚಗಳನ್ನು ನಿರ್ವಹಿಸಲು ಕಷ್ಟ ಪಡುತ್ತಿರುವ ಈ ಕಾಲದಲ್ಲಿ ಸಾಮೂಹಿಕ ವಿವಾಹಗಳು ಅತೀ ಅವಶ್ಯ ಎಂದರು.
ಸೀಮಾ ಮಸೂತಿ ಮಾತನಾಡಿ ದಂಪತಿಗಳು ಒಬ್ಬರಿಗೊಬ್ಬರು ಗೌರವ ಕೊಟ್ಟು ರ‍್ಥಮಾಡಿಕೊಂಡು, ಕಷ್ಟ ಸುಖದಲ್ಲಿ ಸಮನಾಗಿ ಜವಾಬ್ದಾರಿಯಿಂದ ನಡೆದಾಗ ಜೀವನ ಪಾವನವಾಗುವುದು ಎಂದು ನೂತನ ದಂಪತಿಗೆ ಕಿವಿ ಮಾತು ಹೇಳಿದರು.
ಅಧ್ಯಕ್ಷ ಅರವಿಂದ ಏಗನಗೌಡರ ಮಾತನಾಡಿ ದೇವಸ್ಥಾನದ ಇತಿಹಾಸ ಹಾಗೂ ಸುಮಾರು ಹದಿನಾಲ್ಕು ರ‍್ಷಗಳಿಂದ ಸಾಮೂಹಿಕ ವಿವಾಹಗಳನ್ನು ಆಯೋಜಿಸುತ್ತಿದ್ದು,ಭಕ್ತರ ಸಹಾಯ ಸಹಕಾರ ಹಾಗೂ ಶ್ರೀಗಳ ಆಶೀರ್ವಾದವೇ ಕಾರಣ, ಐದು ದಿವಸಗಳ ಜಾತ್ರಾಮಹೋತ್ಸವದಲ್ಲಿ ಮೂರು ದಿವಸಗಳ ಕಾಲ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿದ್ದು, ಉಳಿದ ಎರಡು ದಿವಸಗಳ ಕಾಲ ಮಕ್ಕಳಿಗೆ ಮನರಂಜನೆ,ವಿವಿಧ ಸ್ಪರ್ಧೆ ಹಾಗೂ ಕೊನೆಯ ದಿವಸ ಕೆ ಬಿ ಆರ್ ಡ್ರಾಮಾ ಕಂಪನಿ ಇಂದ ನಾಟಕ ಪ್ರದರ್ಶನಗೊಳ್ಳುವದು ಸಾರ್ವಜನಿಕರು ಭಾಗವಹಿಸಿ ವೀರಭದ್ರನ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.

ಮೃತ್ಯುಂಜಯ ಸಿದ್ನಾಳ, ದೀಪಕ ಇಂಡಿ, ಸಿದ್ದಪ್ಪ ಕರಡಿಗುಡ್ಡ, ಈಶ್ವರ ಮಾಲಗಾರ, ಮಹಾಂತೇಶ ಕುರಟ್ಟಿದೇಸಾಯಿ,ಸುರೇಶ ಅರಕೇರಿ,ಮಹಾಂತೇಶ ಗೊರವನಕೊಳ್ಳ, ಸೋಮಣ್ಣ ಗೋಡಿಕಟ್ಟಿ, ಶಿವಯೋಗಿ ಹಂಚಿನಾಳ,ಶಿವನಗೌಡ ಪಾಟೀಲ, ಗುರುಸಿದ್ದಪ್ಪ ಭಾವಿಕಟ್ಟಿ, ಪ್ರಭು ಕಲ್ಲಾಪುರ, ಬಸವರಾಜ ಹಡಗಲಿ, ಸದಾನಂದ ಗೋಡಿ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು. ಪ್ರಸಾದ ವ್ಯವಸ್ಥೆಯ ಜವಾಬ್ದಾರಿಯನ್ನು ಮೃತ್ಯುಂಜಯ ಯುವಕ ಮಂಡಳದ ಸದಸ್ಯರು ವಹಿಸಿಕೊಂಡಿದ್ದರು.

  • Related Posts

    ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಗೆ ಬಂದು ಏಕಾಗ್ರತೆಯಿಂದ ಓದಬೇಕು ಡಾ.ಆನಂದ ಪಾಂಡುರಂಗಿ

    ಧಾರವಾಡ : ವ್ಯಕ್ತಿತ್ವ ವಿಕಸನಕ್ಕೆ ಬೇಕಾಗಿರುವ ಎಲ್ಲಾ ಚಟುವಟಿಕೆಗಳನ್ನು ಒದಗಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಕಲಿಕೆ ನಿರಂತರವಾದ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಗುರಿಬೇಕು ಕಾರ್ಯ ಯೋಜನೆ ಮಾಡಿಕೊಳ್ಳಬೇಕು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸವನ್ನು ಆನಂದಿಸು, ಪರೀಕ್ಷೆಯನ್ನು ಆನಂದಿಸಿ ಬರುವ ಹೆಚ್ಚು ಕಮ್ಮಿ ಅಂಕಗಳು ಬಂದರು…

    ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ವ್ಯವಸ್ಥಿತವಾಗಿ ನಡೆಸಿ ಯಶಸ್ವಿಗೊಳಿಸಿ – ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಕರೆ

    ಧಾರವಾಡ ೦೫ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಧಾರವಾಡದ ವತಿಯಿಂದ ಇದೇ ದಿ.6 ರಿಂದ 10 ರವರೆಗೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರದ ಸಸ್ಯಚೇತನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ…

    RSS
    Follow by Email
    Telegram
    WhatsApp
    URL has been copied successfully!