
ಮೂರು ಹೊಸ ಸಸ್ಯ ಪ್ರಭೆಧಗಳನ್ನು ಪತ್ತೆ .
ಧಾರವಾಡ : ದಾವಣಗೆರೆ ವಿಶ್ವವೀದ್ಯಾನಿಲಯ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಡಾ. ಸಿದ್ದಪ್ಪ ಭೀ ಕಕ್ಕಳಮೇಲಿ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿಧ್ಯಾರ್ಥಿ ಪ್ರಶಾಂತ ಕಾರದಕಟ್ಟಿ ಇವರು ಪಶ್ಚಿಮ ಘಟ್ಟದ ಉಷ್ಣವಲಯದ ಮಳೆಕಾಡುಗಳಲ್ಲಿಸೊನೆರೆಲಾ ಎಂಬ ವರ್ಗದ ಮೂರು ಹೊಸ ಸಸ್ಯಪ್ರಭೇಧಗಳನ್ನು ಪತ್ತೆ ಹಚ್ಚುವುದರ ಮೂಲಕ ಸಸ್ಯ ವೃಂದಕ್ಕೆ ಹೆಚ್ಚಿನ ಕೊಡುಗೆ ನೀಡಿರುತ್ತಾರೆ.
ಇಲ್ಲಿಯವರೆಗೆ ಕರ್ನಾಟಕದಲ್ಲಿ ಮೆಲೆಸ್ಟೊಮಾಟೇಶಿ ಕುಟುಂಬಕ್ಕೆ (Melastomataceae Family)) ಸೇರಿದ ಸೋನೆರೆಲಾ ಎಂಬ ಜಾತಿಯ 12 ಸಸ್ಯ ಪ್ರಭೇಧಗಳಿದ್ದು, ಪ್ಶಚಿಮ ಘಟ್ಟದಲ್ಲಿ 43 ಸೊನೆರೆಲಾ (Sonerlla) ಜಾತಿಯ ಸಸ್ಯ ಪ್ರಭೇಧಗಳಿರುವಿಕೆಯನ್ನು ಅಂದಾಜಿಸಲಾಗಿದೆ. ಈಗ ಸಂಶೊಧನಾ ತಂಡವು ಪಶ್ಚಿಮ ಘಟ್ಟದ ಚಿಕ್ಕಮಂಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿಯಲ್ಲಿ ಸೊನೆರೆಲಾ ಬಾಬಾಬುಡನ್ಗಿರಿಯೆನ್ಸಿಸ್(Sonerila bababudangiriensis) , ಕೊಡಗುಜಿಲ್ಲೆಯ ಕಡಮಕ್ಕಲ್‌ನ ಮಲ್ಲಳ್ಳಿ ಜಲಪಾತದಲ್ಲಿಸೊನೆರೆಲಾ ಜೈಜಾಂಶಿಯಾ (ಗಿಗ್ಯಾಂಶಿಯಾ) (Sonerila gigantea) ಮತ್ತು ಚಿಕ್ಕಮಂಗಳೂರು ಜಿಲ್ಲೆಯಿಂದ ದಕ್ಷಿಣಕನ್ನಡ ಜಿಲ್ಲೆಯ ವರೆಗಿನ ಚಾರ್ಮೂಡಿ ಘಾಟ್ ನಲ್ಲಿ ಸೊನೆರೆಲಾ ಚಾರ್ಮೂಡಿಯೆನ್ಸಿಸ್ (Sonerila charmadiensis) ಎಂಬ ಮೂರು ಹೊಸ ಸಸ್ಯ ಪ್ರಭೆಧಗಳನ್ನು ಪತ್ತೆ ಹಚ್ಚಿದ್ದಾರೆ ಮತ್ತು ಸದರಿ ಹೊಸ ಪ್ರಭೇಧಗಳನ್ನು ಅಂತರಾಷ್ಟ್ರೀಯ ನಯತಕಾಲಿಕೆಗಳಾದ ( Journal of Thretened Taxa, Assian Journal of Research in Botany, and Phytotaxa) ಗಳಲ್ಲಿ ಸಂಶೋಧನಾ ವರಧಿಯನ್ನು ಪ್ರಕಟಿಸಿದ್ದಾರೆ ಪ್ರಕಟಿತ ಸಸ್ಯಪ್ರಭೇಧಗಳು ಅಂತರಾಷ್ಟ್ರೀಯ ಸಸ್ಯ ನಾಮಕರಣ ಸೂಚ್ಯಂಕ International plant Nomenclature Index (IPNI) ಪಟ್ಟಿಯಲ್ಲಿ ಅನುಮೋಧನೆಗೊಂಡಿವೆ.
ಅಲ್ಲದೆ ಸಂಶೋಧನಾ ತಂಡವು ಸೊನೆರೆಲಾ ಕೊಂಕನೆನ್ಸಿಸ್ (Sonerila konkanensis) ಪ್ರಭೇಧವನ್ನು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಕವಲೆದುರ್ಗದಲ್ಲಿ ಪತ್ತೆ ಹಚ್ಚಿ ಕರ್ನಾಟಕದ ಸಸ್ಯ ಸಂಕುಲಕ್ಕೆ ಸೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.