
ಧಾರವಾಡ 11 : ಎಸ್ ಡಿ ಎಮ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ದಿ 10 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2.30 ರವರೆಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ನಾವಿನ್ಯಯುತ ಮತ್ತು ಸಾಮಾಜಿಕ ಕಳಕಳಿಯ ಸಂಬಂಧಿತ ಪ್ರಾಜೆಕ್ಟ್ ಪ್ರದರ್ಶನವಾದ ಮೆಕ್ -ಪ್ರೊ -25 ಅನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ವಿನ್ಯಾಸ, ಆವಿಷ್ಕಾರಗಳು, ಪರಿಕಲ್ಪನೆಗಳು ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ನ ಭವಿಷ್ಯದ ಮಾರ್ಗಗಳನ್ನು ಒಳಗೊಂಡ ಬಹುಮುಖೀ ಅಂಶಗಳನ್ನು ಪ್ರದರ್ಶಿಸಿತು. ಪೋಷಕರು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪ್ರದರ್ಶನವು ಮೆಕ್ಯಾನಿಕಲ್ ಎಂಜಿನಿಯರಿಂಗ್ ನ ಸಮಗ್ರ ಅವಲೋಕನವನ್ನು ಪ್ರದರ್ಶಿಸಿ, ಪ್ರಸ್ತುತ ಸನ್ನಿವೇಶದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನ ಪ್ರಸ್ತುತತೆಯನ್ನು ತೋರಿಸಿತು. ಪ್ರದರ್ಶನಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳ ನಡುವೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿರುವ ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಅವಕಾಶಗಳ ಬಗ್ಗೆ ಸಂವಾದಕ್ಕೂ ಇದು ಕಾರಣವಾಗಿತ್ತು. ವಿಭಾಗದಲ್ಲಿ ಲಭ್ಯವಿರುವ ಸೌಲಭ್ಯಗಳು ಹಾಗೂ ಸಂಶೋಧನಾ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.
ಎಲೆಕ್ಟ್ರಿಕಲ್/ಹೈಬ್ರಿಡ್ ವೆಹಿಕಲ್ ಟೆಕ್ನಾಲಜಿ, ಕೃಷಿ ಉತ್ಪನ್ನಗಳಾದ ಬಯೋಮಾಸ್ ಡ್ರೈಯರ್, ಶುಗರ್ ಸ್ಯಾಂಪ್ಲಿಂಗ್ ಪ್ಲಾಂಟೇಶನ್ ಯಂತ್ರ, 3ಡಿ ಸ್ಕ್ಯಾನಿಂಗ್ ಯಂತ್ರ, ಟೂತ್ ಬೈಟ್ ಬಲ ಮಾಪನ, ಸ್ಮಾರ್ಟ್ ಆರ್ಥೋ ರಿಕವರಿ ಧರಿಸಬಹುದಾದ ವ್ಯವಸ್ಥೆ, ಡ್ರೋನ್ ಕಣ್ಗಾವಲು ವ್ಯವಸ್ಥೆ ಇತ್ಯಾದಿಗಳನ್ನು ಒಳಗೊಂಡ ಸುಮಾರು 40 ವಿದ್ಯಾರ್ಥಿ ಪ್ರಾ ಯೋಜನೆಗಳು, ಒಟ್ಟು 50 ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳನ್ನು 300 ಕ್ಕೂ ಹೆಚ್ಚು ಶಾಲಾ ಕಾಲೇಜು ವಿದ್ಯಾರ್ಥಿಗಳು, ಪೋಷಕರು ಮತ್ತು ವಿವಿಧ ಕಾಲೇಜುಗಳ ಅಧ್ಯಾಪಕರು ವೀಕ್ಷಿಸಿದರು.
ಮೆಕ್ ಪ್ರೊ-25 ವಸ್ತುಪ್ರದರ್ಶನವನ್ನು ಜೀವಂಧರಕುಮಾರ್, ಕಾರ್ಯದರ್ಶಿ, ಎಸ್ ಡಿಎಂಇ ಸೊಸೈಟಿ, ಧಾರವಾಡ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಎಲ್.ಚಕ್ರಸಾಲಿ, ವಿಭಾಗದ ಮುಖ್ಯಸ್ಥ ಡಾ.ಅನಿಲಕುಮಾರ ಎಚ್.ಸಿ. ಉಪಸ್ಥಿತರಿದ್ದರು. ಈ ಪ್ರದರ್ಶನವು ವಿದ್ಯಾರ್ಥಿಗಳ ನವೀನ ಆಲೋಚನೆಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸುವುದಲ್ಲದೆ, ಪ್ರದರ್ಶನಕ್ಕೆ ಭೇಟಿಕೊಟ್ಟ ವೀಕ್ಷಕರ ಕುತೂಹಲಕ್ಕೂ ಕಾರಣವಾಯಿತು.