ಧಾರವಾಡ :   ನಮ್ಮ ಊರು ಶಿರಕೋಳ ಗ್ರಾಮದ ಮರಿಗೌಡ್ರ ಪಾಟೀಲ ಅವರ ಮನೆಯಲ್ಲಿ ಶಿರೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲೆತು ಎರಡು ಕವನ ಸಂಕಲನ ರಚಿಸಿದ ಪ್ರತಿಭಾವಂತ ಯುವ ಕವಿಯತ್ರಿ ಹಾಗೂ ಹುರಕಡ್ಲಿ ಅಜ್ಜ ವಾಣಿಜ್ಯ ಪದವಿ ಪೂರ್ವ ಕಾಲೇಜು, ಧಾರವಾಡ ದಲ್ಲಿ ಅಧ್ಯಯನ ಮಾಡಿ ೨೦೨೪-೨೫ ನೇ ಸಾಲಿನ ದ್ವೀತಿಯ ಪದವಿ ಪೂರ್ವ ಪರೀಕ್ಷೆಯಲ್ಲಿ ಡಾ. ಮಂಜುನಾಥ್ ಹೊನ್ನಕ್ಕಳವರ್ ಇವರ ಮಾರ್ಗದರ್ಶನದ ಅಡಿಯಲ್ಲಿ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಕು. ಲಕ್ಷ್ಮೀಬಾಯಿ.ಎಸ್. ಪಾಟೀಲ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಮ್ಮ ಊರಿನ ಗಣ್ಯ ಕಲ್ಲನಗೌಡ ಪಾಟೀಲ, ನಿಂಗನಗೌಡ ಪಾಟೀಲ, (ಶಿರೂರು) ಕಲ್ಲನಗೌಡ ಪಾಟೀಲ( ಶಿಕ್ಷಕರು) ಕಲ್ಲಪ್ಪ ರೋಣದ, ಮಲ್ಲನಗೌಡ ಗದಿಗೆಪ್ಪಗೌಡರ, ರುದ್ರಗೌಡ ಪಾಟೀಲ, ಮುಂತಾದವರು ಉಪಸ್ಥಿತರಿದ್ದು ಅಭಿನಂದಿಸಿದರು.