ಧಾರವಾಡ : ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಡಿ. 3 ರಂದು ಹಾಡು ಹಗಲೇ ಮನೆಗೆ ನುಗ್ಗಿ ಚಾಕು, ತಲ್ವಾರ್ ನಿಂದ ಕೊಚ್ಚಿ ಕೊಲೆ ಮಾಡಿದ್ದ ಪ್ರಕರಣವನ್ನು ಕೇವಲ 48 ಗಂಟೆಗಳಲ್ಲಿ ಭೇದಿಸುವಲ್ಲಿ ಗರಗ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಧಾರವಾಡ ಜಿಲ್ಲಾ ಎಸ್ಪಿ ಗೋಪಾಲ ಬ್ಯಾಕೋಡ ಹೇಳಿದರು.
ಕೊಲೆಗೀಡಾದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಗಿರೀಶ್ ಕರಡಿಗುಡ್ಡ (49) ಜೊತೆಗೆ ಹಳೆಯ ವೈಷಮ್ಯ ಮತ್ತು ಜಗಳ ಮಾಡಿದ್ದ ಸಣ್ಣ ಸಣ್ಣ ವಯಸ್ಸಿನ ಹುಡುಗರು ಆತನ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಕುರಿತು ಗಿರೀಶ್ ಕರಡಿಗುಡ್ಡ ಅವರ ಪತ್ನಿ ದೀಪಾ ಕರಡಿಗುಡ್ಡ ಸಮೀಪದ ಗರಗ ಪೊಲೀಸ್ ಠಾಣೆಗೆ ತೆರಳಿ ಕೊಲೆ ಮಾಡಿರುವ ಆರೋಪಿತರನ್ನು ತಕ್ಷಣ ಬಂಧಿಸಿ, ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ದೂರು ನೀಡಿದ್ದರು.
ಕೊಲೆಯ ಜಾಡು ಹಿಡಿದು ಬಲೆ ಬೀಸಿದ್ದ ಗರಗ ಠಾಣೆ ಪೊಲೀಸರಿಗೆ ಗರಗ ಗ್ರಾಮದ ಖಂಡೋಬಾ ಪಟಧಾರಿ, ಆಕಾಶ ಮಾದಪ್ಪನವರ, ಪ್ರಜ್ವಲ್ ವಡ್ಡರ ಮತ್ತು ಮಂಜುನಾಥ ಚಿಕ್ಕೋಪ್ಪ ಎಂಬುವರು ಕೊಲೆ ಮಾಡಿರುವುದನ್ನು ಪತ್ತೆ ಮಾಡಿ ಅವರನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.