ಧಾರವಾಡ : ಜನತಾಂತ್ರಿಕ ಹಕ್ಕುಗಳು ಮತ್ತು ಧರ್ಮ ನಿರಪೇಕ್ಷತೆಯ ರಕ್ಷಣಾ ಕೇಂದ್ರ(CPDRS) ವತಿಯಿಂದ ಧಾರವಾಡದಲ್ಲಿ ಸಾಮರಸ್ಯ ಉಳಿಸಿ,ಜನಕ್ಯತೆ ಬೆಳಸಿ ಕೋಮುವಾದಿ ಶಕ್ತಿಗಳ ಗೋರ ತಂತ್ರದ ವಿರುದ್ಧ ಪ್ರತಿರೋಧ ದಿನವಾಗಿ ಆಚರಿಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಧಾರವಾಡದ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಿತು.
ಧಾರವಾಡದ ಹಿರಿಯ ಸಾಹಿತಿಗಳಾದ ಡಾಕ್ಟರ್ ಸಿದ್ದಲಿಂಗ ಪಟ್ಟಣಶೆಟ್ಟಿ, ಸಾಹಿತಿಗಳಾದ ಬಾಲಣ್ಣ ಶೀಗಿಹಳ್ಳಿ , ಧಾರವಾಡದ ಹಿರಿಯ ಕಲಾವಿದರಾದ ಬಿ ಮಾರುತಿ, ಧಾರವಾಡ ಜನಜಾಗೃತಿ ಅಭಿಯಾನದ ಮಾರ್ಗದರ್ಶಕರಾದ ರಾಮಾಂಜಿನಪ್ಪ ಆಲ್ದಳ್ಳಿ, ಹೇಮಾ ಪಟ್ಟಣಶೆಟ್ಟಿ ಅವರು ಭಾಗವಹಿಸಿದ್ದರು. ಸಿ ಪಿ ಡಿ ಆರ್ ಎಸ್ ನ ಜಿಲ್ಲಾ ಸಂಚಕರಾದ ಅಕ್ಷಯ ಊರಮುಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.