ಧಾರವಾಡ 17 : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಧವಳಗಿರಿ, ಧಾರವಾಡ ದ, ಮ್ಯಾನೇಜ್ಮೆಂಟ್ ಅಧ್ಯಯನ ವಿಭಾಗ, 17 ನೇ ಬ್ಯಾಚ್ ಅನ್ನು ಸ್ವಾಗತಿಸಲು ‘ವಾಯೇಜ್ 24’ – ಹೊಸ ಆರಂಭ ಎಂಬ ಭವ್ಯ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿತ್ತು.
ಕಾರ್ಯಕ್ರಮವನ್ನು ಎಸ್ಡಿಎಂ ವಿಶ್ವವಿದ್ಯಾಲಯ, ಧಾರವಾಡದ ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪಯಣದಲ್ಲಿ ನಾವೀನ್ಯತೆ, ಅಪ್ಲಿಕೇಶನ್ ಸಿದ್ಧಾಂತವನ್ನು ಅಭ್ಯಾಸ, ಕಠಿಣ ಪರಿಶ್ರಮ ಮತ್ತು ಸಮಗ್ರತೆಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವ ಸ್ಪೂರ್ತಿದಾಯಕವಾಗಿ ಹೇಳಿದರು.
ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಗೋದ್ರೇಜ ಮತ್ತು ಬೋಯ್ಸ್ ಎಂಎಫ್ಜಿಕಂ ಲಿಮಿಟೆಡ್ ನ ಉಪವ್ಯವಸ್ಥಾಪಕರಾದ ಶಿವ ಕುಮಾರ ಕುಂಬಾರ ಅವರು ಪ್ರೇರಕಭಾಷಣದಲ್ಲಿ, ಇಂದಿನ ಡೈನಾಮಿಕ್ ವ್ಯಾಪಾರ ಪರಿಸರದಲ್ಲಿ ನಾಯಕತ್ವ ಮತ್ತು ಹೊಂದಾಣಿಕೆಯ ಪ್ರಾಮುಖ್ಯತೆ, ವೃತ್ತಿ ಜೀವನದಗುರಿಯನ್ನು ಸಾಧಿಸಲು ಸಮಯವನ್ನು ಹೇಗೆ ನಿಖರವಾಗಿ ಬಳಸಬೇಕೆಂದು ಅವರು ಒತ್ತಿಹೇಳಿದರು.
ಎಸ್ಡಿಎಂಇ ಸೊಸೈಟಿ ಧಾರವಾಡದ ಕಾರ್ಯದರ್ಶಿ ಜೀವಂಧರ ಕುಮಾರ ರ್ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಿರ್ವಹಣಾ ಶಿಕ್ಷಣದಲ್ಲಿ ಉತ್ಕೃಷ್ಟತೆ ಮತ್ತು ಭವಿಷ್ಯದ ಉದ್ಯಮಿಗಳನ್ನು ಪೋಷಿಸುವಲ್ಲಿ ಸಂಸ್ಥೆಯ ಬದ್ಧತೆಯನ್ನು ವ್ಯಕ್ತಪಡಿಸಿದರು.
ಪ್ರಾಂಶುಪಾಲರಾದ ಡಾ.ಆರ್.ಎಲ್.ಚಕ್ರಸಾಲಿ ಯವರು ತಮ್ಮ ಸುಜ್ಞಾನದ ಮಾತುಗಳನ್ನು ಹಂಚಿಕೊಂಡರು ಮತ್ತು ಎಸ್ ಡಿ ಎಂ ಧರ್ಮಸ್ಥಳದ ಸಂಸ್ಕೃತಿ ಮತ್ತು ಡಾ.ಡಿ.ವೀರೇಂದ್ರಹೆಗ್ಗಡೆ ಅವರ ನೈತಿಕ ಆಚರಣೆಗಳನ್ನು ಹೇಗೆ ಬೆಳೆಸುತ್ತಿದೆ ಎಂಬುದನ್ನು ವಿವರಿಸಿದರು. ಮತ್ತು ಎಂಬಿಎ ನಿರ್ದೇಶಕರಾದ ಡಾ.ಪ್ರಕಾಶ್ ಎಚ್ ಎಸ್ ಅವರು ಸಭೆಯನ್ನು ಸ್ವಾಗತಿಸಿ ಶುಭಹಾರೈಸಿದರು ಜ್ಞಾನ, ಕೌಶಲ್ಯ ಮತ್ತು ನೈತಿಕ ಮೌಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವಸಂಸ್ಥೆಯ ಧ್ಯೇಯವನ್ನು ಪುನರುಚ್ಚರಿಸಿದರು.
ಎಸ್ಡಿಎಂಸಿಇಟಿಯ ಮುಖ್ಯ ಸೆಮಿನಾರ್ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸದಾಗಿ ಸೇರ್ಪಡೆಗೊಂಡ ಒಟ್ಟು 60 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಗೆ ಬಂದು ಏಕಾಗ್ರತೆಯಿಂದ ಓದಬೇಕು ಡಾ.ಆನಂದ ಪಾಂಡುರಂಗಿ
ಧಾರವಾಡ : ವ್ಯಕ್ತಿತ್ವ ವಿಕಸನಕ್ಕೆ ಬೇಕಾಗಿರುವ ಎಲ್ಲಾ ಚಟುವಟಿಕೆಗಳನ್ನು ಒದಗಿಸಿದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಕಲಿಕೆ ನಿರಂತರವಾದ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಗುರಿಬೇಕು ಕಾರ್ಯ ಯೋಜನೆ ಮಾಡಿಕೊಳ್ಳಬೇಕು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸವನ್ನು ಆನಂದಿಸು, ಪರೀಕ್ಷೆಯನ್ನು ಆನಂದಿಸಿ ಬರುವ ಹೆಚ್ಚು ಕಮ್ಮಿ ಅಂಕಗಳು ಬಂದರು…