
ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಸೇವಾ ಯೋಜನೆ (NSS)ಯ ವತಿಯಿಂದ ವಿಶಾಲ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಎಂ.ಬಿ. ದಳಪತಿ ಕಾರ್ಯಕ್ರಮಾಧಿಕಾರಿ ರಾಸೇಯೋ ಕವಿವಿ ಧಾರವಾಡ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿ, ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ, ಶಿಬಿರಾರ್ಥಿಗಳು ಇಂದಿನ ಜಾತಾ ಮೂಲಕ ಅದರ ಅರಿವು ಮೂಡಿಸುವುದು ತುಂಬಾ ಸಂತೋಷವಾಗಿದೆ. ಇಂತಹ ಕಾರ್ಯಕ್ರಮಗಳಿಂದ ಯುವಕರು ಜಾಗೃತರಾಗಿ ಮತದಾನದ ಮಹತ್ವವನ್ನು ಇತರರಿಗೆ ತಿಳಿಸಬೇಕು. ಮತ್ತು ಉತ್ತಮ ನಾಯಕನನ್ನು ಆಯ್ಕೆ ಮಾಡುವದರಲ್ಲಿ ಇ ಮಾದರಿಯಾಗಬೇಕು ಎಂದು ತಿಳಿಸಬೇಕು. ಜೊತೆಗೆ ರಾಷ್ಟ್ರದ ನಿರ್ಮಾಣದಲ್ಲಿ ಯುವಜನರಿಗೆ ನಾಗರಿಕ ಸಂದೇಶವನ್ನು ನೀಡಿದರು.
ಮತ್ತೊಬ್ಬ ಅತಿಥಿಯಾದ ಜನಾಬ್ ಕೈರುದ್ದಿನ್ ಶೇಖ್ ಸದಸ್ಯರು ಆಡಳಿತ ಮಂಡಳಿ ಅಂಜುಮನ ಇಸ್ಲಾಂ ಧಾರವಾಡ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಮತದಾನ ಅಗತ್ಯವಾಗಿದೆ. ಪ್ರತಿಯೊಂದು ಮನೆ ಮನೆ ತೆರಳಿ ಮತದಾನದ ಅರಿವು ಮೂಡಿಸುವುದು ಶಿಬಿರಾರ್ಥಿಗಳ ಪಾತ್ರ, ಸಾಮಾಜಿಕ ಜವಾಬ್ದಾರಿ ಮತ್ತು ಮತದಾನದ ಮಹತ್ವದ ಕುರಿತು ಪ್ರೇರಣಾದಾಯಕ ಮಾತುಗಳನ್ನು ಹಂಚಿಕೊಂಡರು.
ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ. ಜಯಾನಂದ ಹಟ್ಟಿ ಅವರು ಮಾತನಾಡಿ, ಗ್ರಾಮ ಮಟ್ಟದಲ್ಲಿ ಮತದಾನದ ಅರಿವನ್ನು ವಿಸ್ತರಿಸುವುದು ಪ್ರಸ್ತುತ ಕಾಲಕ್ಕೆ ಅತ್ಯಗತ್ಯ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎನ್ ಎಫ್ ಮಾಳನವರು ಅವರು ಮಾತನಾಡಿ ಗ್ರಾಮ ಪಂಚಾಯಿತಿಯ ಜವಾಬ್ದಾರಿಯನ್ನು ಇಂದು ಮತದಾನ ಜಾಗೃತಿ ಮೂಲಕ ಶಿಬಿರಾರ್ಥಿಗಳು ಕಡಿಮೆ ಮಾಡಿದ್ದಾರೆ. ಚುನಾವಣೆ ಸಂದರ್ಭದ ಶಿಸ್ತಿನ ಪಾಲನೆ ಹಾಗೂ ನಾಗರಿಕರ ಮತದಾನ ಹಕ್ಕುಗಳ ಮಹತ್ವದ ಕುರಿತು ವಿವರಿಸಿದರು. ಇಂದಿನ ಜಾತಾ ಗ್ರಾಮಸ್ಥರಲ್ಲಿ ನಿಜವಾದ ಪ್ರಜಾಸತ್ತಾತ್ಮಕ ಅರಿವು ಮೂಡಿಸಲು ದಾರಿ ತೋರಿಸುತ್ತದೆ ಎಂದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್. ಬಿ. ನಾಲತವಾಡ ಅವರು ಮಾತನಾಡಿ, ಶಿಬಿರದ ಏರ್ಪಾಡಿಗೆ ಅಭಿನಂದನೆ ಸಲ್ಲಿಸಿ,ಯುವಜನರಲ್ಲಿನ ನಾಗರಿಕ ಜಾಗೃತಿಯಂತಹ ಕಾರ್ಯಕ್ರಮಗಳು ಸಮಾಜದ ಬೆಳವಣಿಗೆಗೆ ಆಧಾರವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾರೋಬೆಳವಡಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಕಾಳವ್ವ ಬಡಿಗೇರ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಗ್ರಾ ಪಂ ಕಾರ್ಯದರ್ಶಿಗಳಾದ ವಿ ಬಿ ಹಂದೂರ ಶಿವಾನಂದ ಕನಾಜಿ, ಗ್ರಾಮದ ಹಿರಿಯರಾದ ರಾಮಣ್ಣ ಜಕ್ಕನವರ ಅವರು ವೇದಿಕೆಯ ಮೇಲೆ ಆಸೀನರಾಗಿದ್ದರು.
ಕಾರ್ಯಕ್ರಮದಲ್ಲಿ ಪ್ರೊ. ಮುಬಾರಕ್ ಮುಲ್ಲಾ, ಪ್ರೊ. ಶೃತಿ ಯಾವಗಲಮಠ, ಪ್ರೊ. ರಶ್ಮಿ ಬೆಳವಡಿ, ಪ್ರೊ.ಕಾವ್ಯಾ ಪ್ರೊ.ಮಂಜುಳಾ ಹಟ್ಟಿ, ಮತ್ತು ಗ್ರಾಮ ಪಂಚಾಯತ ಸಿಬ್ಬಂದಿಗಳು,ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು.
ಕಾರ್ಯಕ್ರಮದ ನಿರೂಪಣೆಯನ್ನು ಪ್ರೊ.ಉಲ್ಲಾಸ ದೂಡ್ಡಮನಿ ನಿರ್ವಹಿಸಿದರು. ಸ್ವಾಗತ ಭಾಷಣವನ್ನು ಪ್ರೊ. ನಾಗರಾಜ್ ಕನಕಣಿಯವರು ಸಲ್ಲಿಸಿದರು, ವಂದನಾರ್ಪಣೆಯನ್ನು ಕಾರ್ಯಕ್ರಮ ಅಧಿಕಾರಿಗಳಾದ ಡಾ. ತಾಜುನ್ನಿಸಾ ಸೈಯದ್ ಅವರು ನೆರವೇರಿಸಿದರು.ಈ ಜಾಗೃತಿ ಕಾರ್ಯಕ್ರಮದಲ್ಲಿ ಎಲ್ಲಾ ಶಿಬಿರಾರ್ಥಿಗಳು ಹಾಗೂ ಶಾಲೆಯ ಮಕ್ಕಳು ಸಕ್ರಿಯವಾಗಿ ಭಾಗವಹಿಸಿ, ಪೂರ್ಣ ಉತ್ಸಾಹದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಇವತ್ತಿನ ಜಾಗೃತಿಯನ್ನು ಕರಡಿ ಮಜಲು, ಹೆಜ್ಜೆ ಮಜಲು ಹಾಗೂ ಶಿಂಗಾರಗೊಂಡ ಚಕ್ಕಡಿಯ (ರಥ) ಮೂಲಕ ಮತದಾನದ ಜಾಗೃತಿ ಮೂಡಿಸಲಾಯಿತು. ಚಕ್ಕಡಿಯಲ್ಲಿ ಡಾ. ಎಂ. ಬಿ. ದಳಪತಿ ಮತ್ತು ಇತರೆ ಗಣ್ಯರನ್ನು ಮೆರವಣಿಗೆ ಮಾಡುತ್ತಾ, ಮತದಾನದ ಸಂದೇಶಗಳನ್ನು ಹಾಗೂ ಘೋಷಣೆಗಳನ್ನು ಕೂಗುತ್ತ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾತಾ ಮಾಡಲಾಯಿತು.





