
ಧಾರವಾಡ : ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ತ್ ಭವನದಲ್ಲಿ ವಿನುತಾ ಹಂಚಿನಮನಿ ಅವರ ಸಂಬ್ರಮದ ಸಾವಿರ ಸೂರ್ಯರು ಕಾದಂಬರಿ ಹಾಗೂ ಕಂದ ಕೇಳು ಕಥ ಕವನ ಸಚಿತ್ರ ಕಥನ ಸಂಕಲನ ಮತ್ತು ಮಾಲತಿ ಮುದಕವಿ ಅವರ ಸವಿ ಸವಿ ನೆನಪು ಸವಿ ಸವಿ ನೆನಪೂ ಅನುಭವ ಕಥನ ಡಾ . ರಾಜೇಶ್ವರಿ ಮಹೇಶ್ವರಯ್ಯ ಅವರು ಕೃತಿ ಬಿಡುಗಡೆ ಮಾಡಿದರು ಸಂಭ್ರಮದ ಸಾವಿರ ಸೂರ್ಯರು ಕಾದಂಬರಿಯು ಅಫ್ಘಾನಿಸ್ತಾನದ ರಕ್ತ ಸಿಕ್ತ ಕಮ್ಯುನಿಸ್ಟ್ ದಂಗೆ ಮತ್ತು ಸೋವಿಯತ್ ಸೈನ್ಯದ ಆಕ್ರಮಣ ಕ್ಕೆ ಸಾಕ್ಷಿಯಾಗಿದೆ ಹಾಗೂ ತಾಲಿಬಾನರ ಹಿಡಿತಕ್ಕೆ ಸಿಕ್ಕು ನಲುಗಿದ ಜನತೆಯ ಗೋಳನ್ನು ಕಾದಂಬರಿಕರರು ಮನಮುಟ್ಟುವಂತೆ ಬರೆದಿದ್ದಾರೆ ಹೇಳಿದರು ಅದೇ ರೀತಿ ಕಂದ ಕೇಳು ಕಥ ಕವನ ಸಂಕಲನ ಕಥೆಗಳಿಗೂ ಮಾನವರಿಗೂ ಅವಿನಾಭಾವ ಸಂಬಂಧ ಇದೆ ಎಂದು ತಿಳಿಸಿ ಕಥನ ಕವನಗಳಲ್ಲಿ ಪ್ರಾಪಂಚಿಕ ಜ್ಞಾನವನ್ನು, ನೀತಿಯ ಮಾತನ್ನು ತಿಳಿಸುತ್ತವೆ ಎಂದು ವರ್ಣಿಸಿದರು.
ಹಾಗೆಯೇ ಮಾಲತಿ ಮುದಕವಿ ಅವರು ರಚಿಸಿದ ಸವಿ ನೆನಪು ಅನುಭವ ಕಥನವನ್ನು ಕುರಿತು ಇಲ್ಲಿಯ ಕಥೆಗಳು ಕೌಟುಂಬಿಕ ಸಂಬಂಧಗಳ ಸೂಕ್ಷ್ಮತೆಗಳನ್ನು ಅನಾವರಣ ಮಾಡುತ್ತವೆ ಎಂದರು.
ಡಾ.ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಇವತ್ತು ಬಿಡುಗಡೆಗೊಂಡ ಮೂರು ಕೃತಿಗಳು ಸಮಾಜ ಮುಖಿ ಕೃತಿಗಳು ಎಂದು ನುಡಿದರು. ಸರಸ್ವತಿ ಭೋಸಲೆ ಸಂಬ್ರಮದ ಸಾವಿರ ಸೂರ್ಯರು ಕೃತಿ ಪರಿಚಯ ಮಾಡಿದರು. ಎ ಎ ದರ್ಗಾ ಕೃತಿ ಸವಿ ಸವಿ ನೆನಪು ಸಾವಿರ ನೆನಪು ಕೃತಿ ಪರಿಚಯ ಮಾಡಿದರು. ವಿನುತಾ ಹಂಚಿನಮನಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೇಘಾ ಹುಕ್ಕೇರಿ ನಿರೂಪಿಸಿದರು . ರಾಜೇಶ್ವರಿ ಜಗ್ಗಲ್ ವಂದಿಸಿದರು.