ಧಾರವಾಡ : ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತೀ ವರ್ಷದಂತೆ ಈ ಬಾರಿಯೂ ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲಿ ಇಬ್ಬರು ಅಥವಾ ಮೂವರು ಸಾಧಕಿಯರನ್ನು ಗುರುತಿಸಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರವರ ಜಯಂತಿಯ ನಿಮಿತ್ತ 2025ನೇ ಸಾಲಿನ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುವ ಮೂಲಕ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಗುರುತಿಸಿ ದಲಿತ ವಿದ್ಯಾರ್ಥಿ ಪರಿಷತ್ ಕೊಡಮಾಡುವ ಈ ಸಾಲಿನ ರಾಜ್ಯಮಟ್ಟದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಧಾರವಾಡ ಜಿಲ್ಲೆಯಿಂದ ಇಬ್ಬರು ಮಹಿಳಾ ಸಾಧಕಿಯರು ಆಯ್ಕೆಯಾಗಿದ್ದಾರೆ.
ಸಮಾಜಿಕ, ಶೈಕ್ಷಣಿಕ, ಕಲೆ ಮತ್ತು ಸಾಹಿತ್ಯದಲ್ಲಿ ಸೇವೆಗೈಯುವ ಮೂಲಕ ಗುರುತಿಸಿಕೊಂಡಿರುವ ಮಾನ್ಯ ಶ್ರೀಮತಿ ಎಂ. ಬಿ. ಸಣ್ಣೇರ್(ಸಹಾಯಕ ನಿರ್ದೇಶಕರು/ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ ಧಾರವಾಡ), ಹಾಗೂ ಮಾನ್ಯ ಪ್ರೇಮಾ ಓಬಣ್ಣ ಲಮಾಣಿ( ಸಮಾಜ ಸೇವಕಿ, ಲಕ್ಷ್ಮೀ ಸಿಂಗನಕೇರಿ ಲಮಾಣಿ ಓಣಿ,ಧಾರವಾಡ)ಇವರು ಈ ಸಾಲಿನ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಆಯ್ಕೆಯಾಗಿದ್ದು,ಇವರಿಗೆ ಮಾತೇ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯ ಅಂಗವಾಗಿ ದಿನಾಂಕ : 03 ಜನೆವರಿ 2025 ರಂದು ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಧಾರವಾಡ ಜಿಲ್ಲಾ ಅಧ್ಯಕ್ಷರಾದ ಹನುಮಂತ ದಾಸರ, ಮಹಿಳಾ ಸಂಚಾಲಕಿಯಾದ ದುರ್ಗಾ.ಎಚ್, ಹಾಗೂ ಪದಾಧಿಕಾರಿಗಳಾದ ಶಾಂತಯ್ಯ ಓಸುಮಠ,ಸರೋಜಾ. ಎಸ್. ಕೆ, ಶಿವರಾಜ ಮೋತಿ, ಗಗನಕುಮಾರ್ ರಾಠೋಡ್,ರಾಕೇಶ್ ಆಯಟ್ಟಿ, ಬಸವರಾಜ, ಶಶಿಕುಮಾರ ಬಾವಚಿ, ಶಿವಾಜಿ ಎನ್. ಕೆ, ಗೀತಾ,ರವಿ, ಶ್ರೀಕಾಂತ್ ಅವರು ಪ್ರಕಟಣೆಗೆ ತಿಳಿಸಿದ್ದಾರೆ.