ಧಾರವಾಡ 27 : 26ರ ಸಂಜೆ ಕಾರ್ಗಿಲ್ ವಿಜಯ ಸ್ಮಾರಕ ಸಮಿತಿಯಿಂದ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಮಂಗಳವಾರ 24 ರಂದು ಭಾರತದ ಪೂಂಚ್ ನೀಲಂ ಬಳಿ ಗಡಿ ನಿಯಂತ್ರಣ ರೇಖೆಯ ಹತ್ತಿರ ಕಾರ್ಯದ ನಿಮಿತ್ತ ವಾಹನದಲ್ಲಿ ಪ್ರಯಾಣಿ ಸುತ್ತಿದ್ದ ಯೋಧರಾದ ಮಹೇಶ, ದಯಾನಂದ, ಧರ್ಮರಾಜ, ಅನೂಪ, ಗಿಗಂಬರ ಸೇರಿ ಕೆಲವರು ಅಪಘಾತದಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ನಮಗೆಲ್ಲಾ ದುಖಃ ಮೂಡಿಸಿದೆ. ಕಾರ್ಗಿಲ್ ವಿಜಯ ಸ್ತೂಪ ಆವರಣದಲ್ಲಿ ಸಮೀತಿಯ ಸದಸ್ಯರು ಸೇರಿ ಶ್ರದ್ಧಾಂಜಲಿ ಅರ್ಪಿಸಿದರು.
ಆನಂದ ಕುಲಕರ್ಣಿ, ಚಂದ್ರಶೇಖರ ಅಮ್ಮಿನಗಡ,ಎಮ್ ಜಿ ತಿಮ್ಮಾಪುರ (ನಿವೃತ್ತ ಯೋಧ),ಉದಯ ಯಂಡಿಗೇರಿ ರಮೇಶ ನಾದಗೆರ್,ಶಿವಯೋಗಿ ಅಮ್ಮಿನಗಡ,ಸಂಜಯ ಪಾಟೀಲ ಹಾಗೂ ಹಲವು ಜನ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.